• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸಿದ ಪಾಕಿಸ್ತಾನ

|

ಇಸ್ಲಮಾಬಾದ್, ಏಪ್ರಿಲ್ 16: ಪಾಕಿಸ್ತಾನದಲ್ಲಿ ಫ್ರಾನ್ಸ್ ವಿರೋಧಿ ಪ್ರತಿಭಟನೆ-ಹಿಂಸಾಚಾರ ತೀವ್ರವಾಗಿರುವ ಬೆನ್ನಲ್ಲೇ ಅಲ್ಲಿನ ಸರ್ಕಾರ ಎಲ್ಲ ಸಾಮಾಜಿಕ ಮಾಧ್ಯಮಗಳ ಬಳಕೆ ಮೇಲೆ ನಿಷೇಧ ಹೇರಿದೆ. ದೇಶದ ಆಂತರಿಕ ಸಚಿವಾಲಯದ ಆದೇಶದಂತೆ ಫೇಸ್‌ಬುಕ್, ಟ್ವಿಟ್ಟರ್ ಒಳಗೊಂಡಂತೆ ಪ್ರಮುಖ ಸಾಮಾಜಿಕ ಜಾಲತಾಣಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ನಿಯಂತ್ರಣೆ ವಕ್ತಾರ ಖುರ್ರಮ್ ಮೆಹ್ರಾನ್ ಹೇಳಿದ್ದಾರೆ.

ಲಾಹೋರ್ ನಗರದ ಪೂರ್ವ ಭಾಗದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ನಿಷೇಧಿತ ಇಸ್ಲಾಮಿಸ್ಟ್ ರಾಜಕೀಯ ಪಕ್ಷದ ಮುಖಂಡ ಸಾದ್ ರಿಜ್ವಿ, ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ ಎಂಬ ಹೇಳಿಕೆ ಬೆನ್ನಲ್ಲೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಪಾಕಿಸ್ತಾನದಲ್ಲಿ ಹಿಂಸೆ, ಜಾಗತಿಕ ಮುಖಭಂಗ! ದುರ್ಬುದ್ಧಿ ತಿರುಗುಬಾಣವಾಯ್ತಾ? ಪಾಕಿಸ್ತಾನದಲ್ಲಿ ಹಿಂಸೆ, ಜಾಗತಿಕ ಮುಖಭಂಗ! ದುರ್ಬುದ್ಧಿ ತಿರುಗುಬಾಣವಾಯ್ತಾ?

ಸಾದ್ ರಿಜ್ವಿಯ ತೆಹ್ರೀಕ್-ಇ-ಲಬಾಯಿಕ್ ಪಾಕಿಸ್ತಾನ್ ಪಾರ್ಟಿಯು ಹಿಂಸಾಚಾರದ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದರಿಂದ ಅದನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದುವರೆಗಿನ ಹಿಂಸಾಚಾರಗಳಲ್ಲಿ ಇಬ್ಬರು ಪೊಲೀಸರು ಜೀವ ಕಳೆದುಕೊಂಡಿದ್ದು, 580 ಮಂದಿ ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಮೂವರು ಪ್ರತಿಭಟನಾಕಾರರು ಕೂಡ ಮೃತಪಟ್ಟಿದ್ದಾರೆ.

ಸಾದ್ ರಿಜ್ವಿಯ ಹೇಳಿಕೆ ಇರುವ ಫೋಟೊವೊಂದನ್ನು ಪ್ರಧಾನಿಯ ಸಲಹೆಗಾರರೊಬ್ಬರು ಬಿಡುಗಡೆ ಮಾಡಿದ್ದು, ಅದರಲ್ಲಿ ಅವರು ಪ್ರತಿಭಟನೆಯನ್ನು ಸ್ಥಗಿತಗೊಳಿಸುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಆದರೆ ಈ ಬಗ್ಗೆ ರಿಜ್ವಿ ಅಥವಾ ಪಕ್ಷದ ಅವರ ಯಾವುದೇ ನಾಯಕರು ಖಾತರಿ ನೀಡಿಲ್ಲ. ಪ್ರತಿಭಟನೆ ನಿಲ್ಲಿಸುವುದಕ್ಕೂ ಮುನ್ನ ಸ್ವತಃ ರಿಜ್ವಿ ಅವರ ಮಾತನ್ನು ಕೇಳಬೇಕು ಎಂದು ಅವರ ಬೆಂಬಲಿಗರು ಪಟ್ಟುಹಿಡಿದಿದ್ದಾರೆ. ಲಾಹೋರ್‌ನಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ಮುಂದುವರಿದಿದೆ.

English summary
Pakistan temporarily blocked the access to all social media amid anti-French violence protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X