ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷೇಧಿತ ಲಷ್ಕರ್ ಎ ಇಸ್ಲಾಂ ಉಗ್ರ ಸಂಘಟನೆಗೆ ಹೊಸ ಮುಖ್ಯಸ್ಥ

|
Google Oneindia Kannada News

ಪೇಶಾವರ,ಜನವರಿ 30:ಪಾಕಿಸ್ತಾನ ಮೂಲದ ಲಷ್ಕರ್ ಎ ಇಸ್ಲಾಂ ಉಗ್ರ ಸಂಘಟನೆಗೆ ಹೊಸ ಮುಖ್ಯಸ್ಥನನ್ನು ಆಯ್ಕೆ ಮಾಡಿದ್ದಾರೆ.

ದಕ್ಷಿಣ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್ ಎ ಇಸ್ಲಾಂ ಉಗ್ರ ಸಂಘಟನೆಯ ಮುಖ್ಯಸ್ಥ ಮಂಗಲ್ ಬಾಗ್ ಬಾಂಬ್ ಸ್ಫೋಟದಲ್ಲಿ ಹತ್ಯೆಗೀಡಾಗಿದ್ದು ಇದರ ಬೆನ್ನಲ್ಲೇ ಸಂಘಟನೆಗೆ ಹೊಸ ಮುಖ್ಯಸ್ಥನ ಆಯ್ಕೆಯಾಗಿದೆ.

ಪಾಕಿಸ್ತಾನದ ಸ್ಟಾಕ್ ಎಕ್ಸೇಂಜ್‌ ಮೇಲೆ ಗುಂಡಿನ ದಾಳಿ: 10 ಮಂದಿ ಸಾವುಪಾಕಿಸ್ತಾನದ ಸ್ಟಾಕ್ ಎಕ್ಸೇಂಜ್‌ ಮೇಲೆ ಗುಂಡಿನ ದಾಳಿ: 10 ಮಂದಿ ಸಾವು

ದಕ್ಷಿಣದ ಅಫ್ಘಾನಿಸ್ತಾನದಲ್ಲಿ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಬಾಗ್ ತಲೆಗೆ 3 ಮಿಲಿಯನ್ ಅಮೆರಿಕನ್ ಡಾಲರ್ ಕಟ್ಟಲಾಗಿತ್ತು.

Pakistan Based Banned Terror Group Lashkar E Islam Picks Its New Leader

ನಂಗರ್‌ಹಾರ್‌ನ ಅಚಿನ್ ಜಿಲ್ಲೆಯ ಬಂಡಾರ್ ದಾರಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಬಾಂಬ್ ಸ್ಫೋಟದಲ್ಲಿ ಬಾಗ್ ಮತ್ತು ಆತನ ಇಬ್ಬರು ಸಹಚರರು ಹತ್ಯೆಗೀಡಾಗಿದ್ದರು ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಲಷ್ಕರ್-ಎ-ಇಸ್ಲಾಂ ತನ್ನ ಹೊಸ ಮುಖ್ಯಸ್ಥ ಎಂದು ಝಲಾ ಖಾನ್ ಅಫ್ರಿದಿ ನನ್ನು ಹೆಸರಿಸಿದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬ್ಯಾಂಡರ್ ಪ್ರದೇಶದಲ್ಲಿ ಸಂಘಟನೆಯ ಸದಸ್ಯರು ಸಭೆ ನಡೆಸಿದ ನಂತರ ಮಂಗಲ್ ಬಾಗ್ ನ ನಿಕಟವರ್ತಿ ಅಫ್ರಿದಿ ನನ್ನು ಹೊಸ ಮುಖ್ಯಸ್ಥರೆಂದು ಹೆಸರಿಸಲಾಯಿತು.

ಝಲಾ ಖಾನ್ ಅಫ್ರಿದಿ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬರಾ ತಹಸಿಲ್‌ನ ಅಕಾಖೆಲ್ ಬುಡಕಟ್ಟು ಜನಾಂಗಕ್ಕೆ ಸೇರಿದವನು. ಶುರಾ(ಕೌನ್ಸಿಲ್) ಬಾಗ್ ಅವರ ಮಗ ತಯ್ಯಾಬ್ ಅಲಿಯಾಸ್ ಅಜ್ನಾಬಿಯನ್ನು ಹೊಸ ಉಪ ಕಮಾಂಡರ್ ಆಗಿ ನಾಮಕರಣ ಮಾಡಲಾಗಿದೆ.

English summary
Pakistan’s banned terrorist group Lashkar-e-Islam has named Zala Khan Afridi as its new head, days after the outfit’s fugitive leader Mangal Bagh was killed in a roadside bomb blast in southern Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X