ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಡಾಲೆದ್ದ ಪಾಕಿಸ್ತಾನದ ಆರ್ಥಿಕ ಸ್ಥಿತಿ; ಸೇನಾ ಬಜೆಟ್ ಇಳಿಕೆ ಮಾಡಲು ಮುಂದಾದ ಸೈನ್ಯ

|
Google Oneindia Kannada News

ಪಾಕಿಸ್ತಾನದ ಆರ್ಥಿಕ ಸ್ಥಿತಿ ಹಡಾಲೆದ್ದು ಹೋಗಿದ್ದು, ಮುಂದಿನ ಆರ್ಥಿಕ ವರ್ಷಕ್ಕೆ ಅಲ್ಲಿನ ರಕ್ಷಣಾ ಬಜೆಟ್ ಅನ್ನು ಕಡಿತಗೊಳಿಸಲು ಪಾಕ್ ಸೈನ್ಯ ನಿರ್ಧರಿಸಿದೆ. ಮೇಜರ್ ಜನರಲ್ ಅಸೀಫ್ ಗಫೂರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ರಕ್ಷಣೆ ಹಾಗೂ ಭದ್ರತೆ ವಿಷಯದಲ್ಲಿ ರಾಜೀ ಮಾಡಿಕೊಂಡು, ರಕ್ಷಣಾ ಬಜೆಟ್ ಗಾತ್ರವನ್ನು ಇಳಿಕೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಸ್ವಯಂಪ್ರೇರಿತ ರಕ್ಷಣಾ ವೆಚ್ಚದ ಕಡಿತವನ್ನು ಮಾಡುತ್ತೇವೆ. ಆದರೆ ರಕ್ಷಣೆ ಹಾಗೂ ಭದ್ರತೆಯಲ್ಲಿ ಯಾವುದೇ ರಾಜೀ ಇಲ್ಲ. ಯಾವುದೇ ಆತಂಕಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಮೂರೂ ಸೇನೆಗಳ ಮೇಲೆ ವೆಚ್ಚ ಕಡಿತದ ಪರಿಣಾಮ ಆಗಲಿದೆ. ಅದಕ್ಕೆ ಸೂಕ್ತ ಆಂತರಿಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಬಲೂಚಿಸ್ತಾನ್ ಮತ್ತು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.

ಲೀಟರ್ ಹಾಲಿಗೆ 190, ಕೆ.ಜಿ. ಮಟನ್‌ಗೆ 1,100 ರೂ: ಪಾಕಿಸ್ತಾನ ಕಂಗಾಲುಲೀಟರ್ ಹಾಲಿಗೆ 190, ಕೆ.ಜಿ. ಮಟನ್‌ಗೆ 1,100 ರೂ: ಪಾಕಿಸ್ತಾನ ಕಂಗಾಲು

ಆದರೆ, ಯಾವ ಪ್ರಮಾಣದಲ್ಲಿ ಬಜೆಟ್ ಕಡಿತ ಮಾಡಲಾಗುತ್ತದೆ ಎಂಬ ಬಗ್ಗೆ ಗಫೂರ್ ತಿಳಿಸಿಲ್ಲ. ಸೇನೆಯ ಈ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬಹುವಾಗಿ ಮೆಚ್ಚಿಕೊಂಡು, ಹೊಗಳಿದ್ದಾರೆ. ಭದ್ರತಾ ವಿಚಾರವಾಗಿ ಹಲವು ಸವಾಲು ಇರುವ ಹೊರತಾಗಿಯೂ ಈ ನಿರ್ಧಾರ ತೆಗೆದುಕೊಂಡಿರುವುದನ್ನು ಇಮ್ರಾನ್ ಖಾನ್ ಹೊಗಳಿದ್ದಾರೆ.

ಇದೊಂದು ಸಣ್ಣ ನಡೆ ಅಲ್ಲ

ಇದೊಂದು ಸಣ್ಣ ನಡೆ ಅಲ್ಲ

ಹೊಸದಾಗಿ ಸೇರ್ಪಡೆ ಆಗಿರುವ ಬುಡಕಟ್ಟು ಪ್ರದೇಶ ಹಾಗೂ ಬಲೂಚಿಸ್ತಾನದ ಅಭಿವೃದ್ಧಿಗಾಗಿ ಉಳಿತಾಯದ ಹಣವನ್ನು ಬಳಸುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಮಾತನಾಡಿ, ಇದೊಂದು ಸಣ್ಣ ನಡೆ ಅಲ್ಲ ಎಂದು ಬಣ್ಣಿಸಿದ್ದಾರೆ.

ಜಗತ್ತಿನಲ್ಲೇ ಇಪ್ಪತ್ತನೇ ಸ್ಥಾನ ಪಾಕಿಸ್ತಾನಕ್ಕೆ

ಜಗತ್ತಿನಲ್ಲೇ ಇಪ್ಪತ್ತನೇ ಸ್ಥಾನ ಪಾಕಿಸ್ತಾನಕ್ಕೆ

ಜಗತ್ತಿನಲ್ಲಿ ರಕ್ಷಣಾ ವಲಯಕ್ಕೆ ಅತಿ ಹೆಚ್ಚು ಹಣ ಮೀಸಲಿಡುವ ದೇಶಗಳ ಪೈಕಿ ಕಳೆದ ವರ್ಷ ಪಾಕಿಸ್ತಾನಕ್ಕೆ 20ನೇ ಸ್ಥಾನ. ಅದರ ವೆಚ್ಚ 11.4 ಬಿಲಿಯನ್ ಅಮೆರಿಕನ್ ಡಾಲರ್. ಪಾಕಿಸ್ತಾನದ ಜಿಡಿಪಿಯ ನಾಲ್ಕು ಪರ್ಸೆಂಟ್ ಮೊತ್ತ ಮಿಲಿಟರಿ ಬಜೆಟ್ ಆಗುತ್ತದೆ. ಜಗತ್ತಿನಲ್ಲೇ ಅತಿ ಹೆಚ್ಚು ಹಣವನ್ನು ಮಿಲಿಟರಿಗೆ ಖರ್ಚು ಮಾಡುವುದು ಅಮೆರಿಕ. ಆ ಮೊತ್ತ 649 ಬಿಲಿಯನ್ ಅಮೆರಿಕನ್ ಡಾಲರ್. ಆದರೆ ಕಳೆದ ಒಂದು ದಶಕಕ್ಕೆ ಹೋಲಿಸಿದರೆ 17 ಪರ್ಸೆಂಟ್ ಏರಿಕೆ ಆಗಿದೆ.

ಪಾಕ್ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿದ ಅಮೆರಿಕ ಪಾಕ್ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿದ ಅಮೆರಿಕ

ಇಮ್ರಾನ್ ಅಧಿಕಾರ ವಹಿಸಿಕೊಂಡ ದಿನದಿಂದ ಸಂಕಷ್ಟದಲ್ಲೇ

ಇಮ್ರಾನ್ ಅಧಿಕಾರ ವಹಿಸಿಕೊಂಡ ದಿನದಿಂದ ಸಂಕಷ್ಟದಲ್ಲೇ

ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಕಳೆದ ವರ್ಷ ಜುಲೈನಲ್ಲಿ ಅಧಿಕಾರ ವಹಿಸಿಕೊಂಡರು. ಆಗಿನಿಂದ ಪಾಕಿಸ್ತಾನ ಆರ್ಥಿಕ ಸಂಕಷ್ಟದಲ್ಲೇ ಇದೆ. ಅವರು ಅಧಿಕಾರ ವಹಿಸಿಕೊಳ್ಳುವ ಹೊತ್ತಿನಲ್ಲೇ ಅರ್ಥಿಕ ಬಿಕ್ಕಟ್ಟಿನಲ್ಲಿದ್ದ ಪಾಕಿಸ್ತಾನದ ಸ್ಥಿತಿ ಸುಧಾರಿಸಲು ಚೀನಾ, ಯುಎಇ ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದಲೂ ನೆರವು ಪಡೆಯಲಾಗಿದೆ.

ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ಕುಸಿತ ಕಂಡ ಪಾಕ್ ರುಪಾಯಿ

ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ಕುಸಿತ ಕಂಡ ಪಾಕ್ ರುಪಾಯಿ

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುವ ಮುನ್ನ ಕೆಲ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಅದರ ಪ್ರಕಾರ ಪಾಕಿಸ್ತಾನ ರುಪಾಯಿಯನ್ನು ಅಪಮೌಲ್ಯಗೊಳಿಸಿದ್ದು, ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ಕುಸಿತವನ್ನು ದಾಖಲಿಸಿದೆ. ಇದರ ಜತೆಗೆ ಹಣದುಬ್ಬರ ದರ ಕೂಡ ಹೆಚ್ಛಾಗಿದ್ದು, ಸಾಮಾನ್ಯ ಜನರು ಅಗತ್ಯ ವಸ್ತುಗಳ ದುಬಾರಿ ಬೆಲೆಯಿಂದ ಕಂಗಾಲಾಗಿದ್ದಾರೆ.

English summary
Pakistan army voluntarily reduced it's defense budget for next fiscal year, due to the economic crisis of the country. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X