ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಸೇನೆ, ಬೇಹುಗಾರಿಕೆ ಸಂಸ್ಥೆ ಐಎಸ್ ಐ ಟೀಕಾಕಾರನ ಹತ್ಯೆ

|
Google Oneindia Kannada News

ಪಾಕಿಸ್ತಾನದ ಸೇನೆ ಹಾಗೂ ಅಲ್ಲಿನ ಬೇಹುಗಾರಿಕೆ ಸಂಸ್ಥೆಯನ್ನು ವಿಮರ್ಶೆ ಮಾಡುವ ಮೂಲಕ ಹೆಸರಾಗಿದ್ದ ಪತ್ರಕರ್ತ ಹಾಗೂ ಪಾಕಿಸ್ತಾನದ ಬ್ಲಾಗರ್, ಇಪ್ಪತ್ತೆರಡು ವರ್ಷದ ಮೊಹ್ಮದ್ ಬಿಲಾಲ್ ಖಾನ್ ನನ್ನು ಅಪರಿಚಿತ ವ್ಯಕ್ತಿ ಹತ್ಯೆ ಮಾಡಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಬಿಲಾಲ್ ಖಾನ್ ಗೆ ಟ್ವಿಟ್ಟರ್ ನಲ್ಲಿ ಹದಿನಾರು ಸಾವಿರ ಫಾಲೋವರ್ಸ್ ಇದ್ದರು.

ಯೂ ಟ್ಯೂಬ್ ಚಾನಲ್ ಗೆ ನಲವತ್ತೆಂಟು ಸಾವಿರ, ಫೇಸ್ ಬುಕ್ ನಲ್ಲಿ ಇಪ್ಪತ್ತೆರಡು ಸಾವಿರ ಫಾಲೋವರ್ಸ್ ಇದ್ದರು. ಬಿಲಾಲ್ ಖಾನ್ ಗೆ ಫೋನ್ ವೊಂದು ಬಂದಿತ್ತು. ಆಗ ವ್ಯಕ್ತಿಯೊಬ್ಬ ಬಂದು, ಸಮೀಪದ ಅರಣ್ಯ ಪ್ರದೇಶಕ್ಕೆ ಭಾನುವಾರ ರಾತ್ರಿ ಕರೆದೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಡಾಲೆದ್ದ ಪಾಕಿಸ್ತಾನದ ಆರ್ಥಿಕ ಸ್ಥಿತಿ; ಸೇನಾ ಬಜೆಟ್ ಇಳಿಕೆ ಮಾಡಲು ಮುಂದಾದ ಸೈನ್ಯಹಡಾಲೆದ್ದ ಪಾಕಿಸ್ತಾನದ ಆರ್ಥಿಕ ಸ್ಥಿತಿ; ಸೇನಾ ಬಜೆಟ್ ಇಳಿಕೆ ಮಾಡಲು ಮುಂದಾದ ಸೈನ್ಯ

ಶಂಕಿತನು ಕೊಲೆಗೆ ಡ್ಯಾಗರ್ ಬಳಸಿದ್ದಾನೆ. ಇನ್ನು ಖಾನ್ ಸ್ನೇಹಿತನಿಗೆ ಗಂಭೀರ ಗಾಯಗಳಾಗಿವೆ. ಇನ್ನು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಸದ್ದಾರ್ ಮಲಿಕ್ ನಯೀಂ ನೀಡಿರುವ ಮಾಹಿತಿ ಪ್ರಕಾರ, ಕೆಲವರು ಗುಂಡು ಹಾರಿಸಿದ ಶಬ್ದ ಕೇಳಿಬಂತು ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಆದ ಖಾನ್ ಹವ್ಯಾಸಿ ಪತ್ರಕರ್ತರೂ ಹೌದು.

Pakistan army, spy agency ISI critic 22 year old blogger killed

ಮೃತ ಬಿಲಾಲ್ ಖಾನ್ ನ ತಂದೆ ಅಬ್ದುಲ್ಲಾ ಮಾತನಾಡಿ, ನನ್ನ ಮಗನ ಮೇಲೆ ಚೂಪಾದ ವಸ್ತುಗಳಿಂದ ಮಾಡಿದ ಗಾಯದ ಗುರುತುಗಲಿವೆ. ಅವನು ಪ್ರವಾದಿಗಳ ಬಗ್ಗೆ ಮಾತನಾಡಿದ್ದೇ ತಪ್ಪಾಯಿತು ಎಂದಿದ್ದಾರೆ. ಭಯೋತ್ಪಾದನಾ ವಿರೋಧಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪಾಕಿಸ್ತಾನಿ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಮೊಹಮ್ಮದ್ ಬಿಲಾಲ್ ಖಾನ್ ನನ್ನು ಕಳೆದ ರಾತ್ರಿ ಇಸ್ಲಾಮಾಬಾದ್ ನಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ಪ್ರಬಲ ಮಿಲಿಟರಿ ಹಾಗೂ ಬೇಹುಗಾರಿಕೆ ಸಂಸ್ಥೆ ವಿರುದ್ಧ ವಿಮರ್ಶೆಗೆ ಖಾನ್ ಹೆಸರಾಗಿದ್ದರು ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

English summary
Pakistan army, spy agency ISI critic 22 year old blogger Mohmmad Bilal Khan killed in Islamabad. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X