ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LOCಯಲ್ಲಿ ಭಾರತೀಯ ಸೇನೆಯಿಂದ ದಾಳಿ, ನಾಲ್ವರು ಸಾವು: ಪಾಕ್ ಆರೋಪ

|
Google Oneindia Kannada News

ಇಸ್ಲಾಮಾಬಾದ್, ಜೂನ್ 18: ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೈನಿಕರು ದಾಳಿ ನಡೆಸಿ ನಾಲ್ವರು ನಾಗರಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಪಾಕ್ ಸೇನೆ ಹೇಳಿದೆ.

Recommended Video

Sachin Tendulkars real reason behind retirement was revealed by coach Gary Kristen|Oneindia Kannada

ಮೃತಪಟ್ಟ ನಾಲ್ವರು ನಾಗರಿಕರಲ್ಲಿ ಮಹಿಳೆ ಸೇರಿದ್ದಾರೆ. ಮತ್ತೊಬ್ಬರಿಗೆ ಗಾಯವಾಗಿದೆ. ಭಾರತೀಯ ಸೈನಿಕರ ಗುಂಡಿನ ದಾಳಿಗೆ ಪಾಕಿಸ್ತಾನ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೌಗಾಮ್ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಕದನವಿರಾಮ ಉಲ್ಲಂಘನೆನೌಗಾಮ್ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಕದನವಿರಾಮ ಉಲ್ಲಂಘನೆ

ಪಾಕಿಸ್ತಾನ ಸೇನಾಪಡೆಯ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಖಾರ್, ನಿಕಿಯಾಲ್ ಮತ್ತು ಬಗ್ಸಾರ್ ವಲಯಗಳಲ್ಲಿ ನಾಗರಿಕರ ಮೇಲೆ ಗುರಿಯಾಗಿಟ್ಟುಕೊಂಡು ಭಾರತೀಯ ಸೇನಾ ಯೋಧರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Pakistan Army Claims 4 Civilians Killed In Firing By Indian Forces Along LoC

ರತ್ತಾ ಜಬ್ಬಾರ್ ಹಾಗೂ ಲೆವಾನಾ ಖೈತರ್ ಪ್ರದೇಶದಲ್ಲಿ ಮಹಿಳೆ ಸೇರಿ ನಾಲ್ವರನ್ನು ಹತ್ಯೆ ಮಾಡಿದ್ದು, ಓರ್ವರಿಗೆ ಗಂಭೀರ ಗಾಯವಾಗಿದೆ ಎಂದು ಹೇಳಿದ್ದಾರೆ. ಬುಧವಾರ ಪಾಕಿಸ್ತಾನವು ನೌಗಾಮ್ ಗಡಿಯಲ್ಲಿ ಗದನವಿರಾಮ ಉಲ್ಲಂಘನೆ ಮಾಡಿತ್ತು, ಭಾರತದ ಸೈನಿಕರ ಮೇಲೆ ಮಾರ್ಟರ್ ಶೆಲ್‌ಗಳ ದಾಳಿ ನಡೆಸಿದೆ.

ಜೂನ್ 16ರಂದು ಸಂಜೆ ಸಮಯದಲ್ಲಿ ಅಪ್ರಚೋದಿತ ಕದನವಿರಾಮ ಉಲ್ಲಂಘನೆ ಮಾಡಿತ್ತು. ಮಾರ್ಟರ್ ಶೆಲ್‌ಗಳು ಹಾಗೂ ಆಯುಧಗಳ ಮೂಲಕ ದಾಳಿ ನಡೆಸಿತ್ತು.

ಭಾರತವು ತಕ್ಕ ಪ್ರತಿಕ್ರಿಯೆಯನ್ನು ನೀಡಿದ್ದು, ಪಾಕಿಸ್ತಾನದ ಸೈನಿಕರ ಮೇಲೆ ಪ್ರತಿದಾಳಿ ನಡೆಸಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಮೇಲೆ ಆರೋಪ ಮಾಡಿದೆ.

English summary
The Pakistan Army has said that at least four civilians were killed in alleged firing by the Indian security forces along the LoC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X