ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 07: ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

Recommended Video

Indiaಕ್ಕೆ ವಾರ್ನಿಂಗ್ ಕೊಡ್ತಾ ಇದೆ Pakistanನ | Oneindia Kannada

ಪಾಕಿಸ್ತಾನದ ರಕ್ಷಣಾ ದಿನಾಚರಣೆ ಹಾಗೂ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಬಾಜ್ವಾ, ಭಾರತದ ವಿರುದ್ಧ ಐದನೇ ಜನರೇಷನ್ ಯುದ್ಧ ಅಥವಾ ಹೈಬ್ರೀಡ್ ಯುದ್ಧವನ್ನು ಗೆಲ್ಲುವ ಮಾತನಾಡಿದ್ದಾರೆ.

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಕೊಡುವುದಿಲ್ಲ: ಭಾರತಕ್ಕೆ ರಷ್ಯಾ ಭರವಸೆಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಕೊಡುವುದಿಲ್ಲ: ಭಾರತಕ್ಕೆ ರಷ್ಯಾ ಭರವಸೆ

ಭಾರತದ ವಿರುದ್ಧವೂ ವಾಗ್ದಾಳಿ ನಡೆಸಿರುವ ಬಾಜ್ವಾ, ಪಾಕಿಸ್ತಾನ ಶಾಂತಿಯನ್ನು ಬಯಸುತ್ತದೆ. ಒಂದು ವೇಳೆ ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ ಪಾಕಿಸ್ತಾನ ಅದಕ್ಕೆ ತಕ್ಕ ಉತ್ತರ ನೀಡುತ್ತದೆ.

Pakistan Army Chief Qamar Javed Bajwa Warns India

1965 ರಲ್ಲಿ ಪಾಕ್ ಭಾರತವನ್ನು ಯುದ್ಧದಲ್ಲಿ ಸೋಲಿಸಿತ್ತು. 2019 ರಲ್ಲಿ ವಿಫಲಗೊಂಡ ಬಾಲಾಕೋಟ್ ವೈಮಾನಿಕ ಸರ್ಜಿಕಲ್ ಸ್ಟ್ರೈಕ್ ಗೆ ತಕ್ಕ ಪ್ರತ್ಯುತ್ತರ ನೀಡಿತ್ತು, ಭಾರತ ನಮ್ಮ ಯುದ್ಧ ಸನ್ನದ್ಧತೆಯನ್ನು ಶಂಕಿಸುವುದು ಬೇಡ ಎಂದು ಬಾಜ್ವಾ ಎಚ್ಚರಿಕೆ ನೀಡುವ ಧ್ವನಿಯಲ್ಲಿ ಮಾತನಾಡಿದ್ದಾರೆ.

ಭಾರತ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ವಿಧಿಯನ್ನು ರದ್ದುಗೊಳಿಸಿರುವುದನ್ನೂ ವಿರೋಧಿಸಿದ್ದು, ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಪ್ರಾದೇಶಿಕ ಶಾಂತಿಯನ್ನು ಕದಡಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಹಾಗೂ ಅದರ ಸೇನೆಗೆ ಅಪಖ್ಯಾತಿ ತರುವ ಉದ್ದೇಶದಿಂದ ನಡೆಯುತ್ತಿರುವ ಕೃತ್ಯಗಳಿಂದ ಪಾಕ್ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅಷ್ಟೇ ಅಲ್ಲದೇ 5 ನೇ ಪೀಳಿಗೆ ಅಥವಾ ಹೈಬ್ರಿಡ್ ವಾರ್ ಸ್ವರೂಪದಲ್ಲಿ ನಮಗೆ ಸವಾಲುಗಳನ್ನು ಹಾಕಲಾಗುತ್ತಿದೆ.

ಇದರ ಅಪಾಯವನ್ನು ನಾವು ಬಲ್ಲೆವು, ಆದರೆ ಈ ಯುದ್ಧದಲ್ಲಿ ದೇಶದ ಜನತೆಯ ಸಹಕಾರದಿಂದ ನಾವೇ ಗೆಲ್ಲಲಿದ್ದೇವೆ ಎಂದಿದ್ದಾರೆ.

English summary
Army Staff (COAS) General Qamar Javed Bajwa has sent out an open warning to India, claiming that his country would win the “fifth generation or hybrid war”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X