ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟ್ಟಾಗಿರುವ ಸೌದಿ ಅರೇಬಿಯಾವನ್ನ ಶಾಂತಗೊಳಿಸಲು ಪಾಕ್ ಪ್ರಯತ್ನ: ಸೇನಾ ಮುಖ್ಯಸ್ಥ ಸೌದಿಗೆ ಭೇಟಿ

|
Google Oneindia Kannada News

ರಿಯಾದ್, ಆಗಸ್ಟ್‌ 17: ಪಾಕಿಸ್ತಾನದ ಜೊತೆಗೆ ಒಪ್ಪಂದವನ್ನು ಕಡಿತಗೊಳಿಸಿ ಮುನಿಸಿಕೊಂಡಿರುವ ಸೌದಿ ಅರೇಬಿಯಾದ ಕೋಪವನ್ನು ಶಾಂತಗೊಳಿಸಲು ಪಾಕಿಸ್ತಾನ ಸೇನಾ ಮುಖ್ಯಸ್ಥ ಸೋಮವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದಾರೆ.

ಜನರಲ್ ಕಮರ್ ಜಾವೇದ್ ಬಜ್ವಾ ಅವರ ಭೇಟಿ "ಪ್ರಾಥಮಿಕವಾಗಿ ಮಿಲಿಟರಿ ವ್ಯವಹಾರಗಳಿಗೆ ಆಧಾರಿತವಾಗಿದೆ" ಎಂದು ಪಾಕಿಸ್ತಾನ ಸೇನೆಯ ವಕ್ತಾರರು ತಿಳಿಸಿದ್ದಾರೆ. ಆದರೆ ರಾಯಿಟರ್ಸ್ ವರದಿ ಪ್ರಕಾರ ಬಜ್ವಾ ಸದ್ಯ ಪಾಕ್ ಹಾಗೂ ಸೌದಿ ನಡುವಿನ ಉದ್ವಿಗ್ನ ವಾತಾವರಣವನ್ನು ಶಾಂತಗೊಳಿಸುವ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ತೈಲವೂ ಇಲ್ಲ, ಸಾಲ ಕೂಡ ಕೊಡೊಲ್ಲ: ಪಾಕಿಸ್ತಾನಕ್ಕೆ ಆಘಾತ ನೀಡಿದ ಸೌದಿ ಅರೇಬಿಯಾತೈಲವೂ ಇಲ್ಲ, ಸಾಲ ಕೂಡ ಕೊಡೊಲ್ಲ: ಪಾಕಿಸ್ತಾನಕ್ಕೆ ಆಘಾತ ನೀಡಿದ ಸೌದಿ ಅರೇಬಿಯಾ

ಪಾಕಿಸ್ತಾನ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ಜೊತೆಗೆ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮುಖ್ಯಸ್ಥ ಜನರಲ್ ಫೈಜ್ ಹಮೀದ್ ಅವರು ಬಂದಿದ್ದರು ಎಂದು ಪಾಕಿಸ್ತಾನದ ಮಿಲಿಟರಿ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ವಿರುದ್ಧ ಸೌದಿ ತೀರ್ಮಾನ ಏನು?

ಪಾಕಿಸ್ತಾನದ ವಿರುದ್ಧ ಸೌದಿ ತೀರ್ಮಾನ ಏನು?

ಪಾಕಿಸ್ತಾನಕ್ಕೆ ಇನ್ನು ಮುಂದೆ ತಾನು ಹಣದ ಸಾಲ ಅಥವಾ ತೈಲ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಈ ಹಿಂದೆ ಹೇಳಿತ್ತು. ಇನ್ನು ಮುಂದೆ ತಾನು ಹಣದ ಸಾಲ ಅಥವಾ ತೈಲ ಪೂರೈಕೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿತ್ತು. ಇದರಿಂದ ಪಾಕಿಸ್ತಾನಕ್ಕೆ ಕಟ್ಟ ಕಡೆಯ ಆಶಾಕರಣವಾಗಿದ್ದ ಒಪ್ಪಂದದ ಮೇಲೂ ಒದೆ ಬಿದ್ದಿದೆ.

ಪಾಕಿಸ್ತಾನದ ಮೇಲಿನ ಮುನಿಸಿಗೆ ಕಾರಣವೇನು?

ಪಾಕಿಸ್ತಾನದ ಮೇಲಿನ ಮುನಿಸಿಗೆ ಕಾರಣವೇನು?

ಸೌದಿ ಈ ತೀರ್ಮಾನದ ಹಿಂದಿನ ಕಾರಣ ಪಾಕಿಸ್ತಾನದ ಒತ್ತಡ ಹೇರಿದ ತಂತ್ರ. ಹೌದು ಸೌದಿ ಅರೇಬಿಯಾ ನೇತೃತ್ವದಲ್ಲಿರುವ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಕಾಶ್ಮೀರ ವಿಚಾರವಾಗಿ ಪರಿಣಾಮಕಾರಿಯಾಗಿ ಧ್ವನಿ ಎತ್ತುತ್ತಿಲ್ಲ ಎಂಬ ಪಾಕಿಸ್ತಾನದ ಆರೋಪಕ್ಕೆ 3.2 ಬಿಲಿಯನ್ ಡಾಲರ್ ಮೊತ್ತದ ಕಚ್ಚಾತೈಲ ಆಗಿದೆ.

ಹೊಸ ನಕ್ಷೆ: ಪಾಕಿಸ್ತಾನಕ್ಕೆ ಸೇರಿತಾ ಭಾರತದ ಜಮ್ಮು-ಕಾಶ್ಮೀರ?ಹೊಸ ನಕ್ಷೆ: ಪಾಕಿಸ್ತಾನಕ್ಕೆ ಸೇರಿತಾ ಭಾರತದ ಜಮ್ಮು-ಕಾಶ್ಮೀರ?

ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧವಾಗಿ ಧ್ವನಿ ಎತ್ತುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಐಸಿಯ ಒಂದು ಗುಂಪಿನ ನೇತೃತ್ವವನ್ನು ತಾನೇ ವಹಿಸಿಕೊಳ್ಳುವುದಾಗಿ ಪಾಕಿಸ್ತಾನ ಸೌದಿ ಅರೇಬಿಯಾಗೆ ಸವಾಲಾಕಿತ್ತು. ಇದರಿಂದ ಕೆರಳಿದ ಸೌದಿ ಅರೇಬಿಯಾ ಪಾಕ್‌ನೊಂದಿಗೆ ಮಾಡಿಕೊಂಡಿದ್ದ ಸಾಲ ಮತ್ತು ರಫ್ತು ಒಪ್ಪಂದವನ್ನು ತಡೆಹಿಡಿದಿದೆ. ಈ ಮೂಲಕ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಮತ್ತೊಂದು ಒದೆ ಬಿದ್ದಿದೆ.

ಸೌದಿ-ಪಾಕ್‌ ನಡುವಿನ ಒಪ್ಪಂದ ಏನು?

ಸೌದಿ-ಪಾಕ್‌ ನಡುವಿನ ಒಪ್ಪಂದ ಏನು?

2018ರಲ್ಲಿ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವೆ ಒಪ್ಪಂದವಾಗಿತ್ತು. ದಿವಾಳಿಯಾಗಿರುವ ಪಾಕಿಸ್ತಾನಕ್ಕೆ 3 ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ನೆರವು ಮತ್ತು 3.2 ಬಿಲಿಯನ್ ಡಾಲರ್ ಮೊತ್ತದ ಕಚ್ಚಾತೈಲ ರಫ್ತು ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದ್ದವು.

ಕಾಶ್ಮೀರಕ್ಕೆ ಕೈ ಹಾಕಿ ಸುಟ್ಟುಕೊಂಡ ಪಾಕಿಸ್ತಾನ

ಕಾಶ್ಮೀರಕ್ಕೆ ಕೈ ಹಾಕಿ ಸುಟ್ಟುಕೊಂಡ ಪಾಕಿಸ್ತಾನ

ಸದಾ ಕಾಲ್ಕೆರದು ಜಗಳಕ್ಕೆ ಬರುವ ಪಾಕಿಸ್ತಾನ ಈ ಬಾರಿ ವಿವಾದವನ್ನು ತಾನಾಗಿಯೇ ಮೈ ಮೇಲೆ ಎಳೆದುಕೊಂಡಿದೆ. ಸೌದಿಯ ಹಣಕಾಸು ನೆರವು ಕೈ ತಪ್ಪಿ ಹೋಗುವ ಭಯ ಎದುರಾಗಿದೆ. ಒಐಸಿ ನೇತೃತ್ವ ವಹಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿದೆ.

ಇನ್ನು ಸೌದಿ ಅರೇಬಿಯಾ ಜಾಣ್ಮೆಯ ನಡೆ ಇಟ್ಟಿದ್ದು, ಪಾಕಿಸ್ತಾನ ಪರ ಯಾವುದೇ ಘೋಷಣೆಯನ್ನು ನೀಡಿಲ್ಲ. ಜೊತೆಗೆ ಪಾಕ್‌ಗಿಂತ ಹೆಚ್ಚಿನ ಲಾಭ ಭಾರತದಿಂದ ಸಿಗುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಯಾವುದೇ ನಡೆಗೆ ತಲೆ ಕೆಡಿಸಿಕೊಂಡಿಲ್ಲ.

English summary
Pakistan's army chief arrived in Saudi Arabia on Monday amid a row between the two countries that has threatened Riyadh's financial lifeline to Islamabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X