ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ನೂತನ ಪಾಕಿಸ್ತಾನ ರಾಯಭಾರಿ ನೇಮಕ

|
Google Oneindia Kannada News

ಇಸ್ಲಾಮಾಬಾದ್, ಮೇ 21: ಭಾರತದ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಹೊಸ್ತಿಲಲ್ಲೇ ನೂತನ ರಾಯಭಾರಿಯನ್ನು ಪಾಕಿಸ್ತಾನ ನೇಮಿಸಿದೆ.

ಫ್ರಾನ್ಸ್‌ನಲ್ಲಿ ಪಾಕಿಸ್ತಾನ ರಾಯಭಾರಿಯಾಗಿದ್ದ ಮೋಯಿನ್ ಉಲ್ ಹಕ್ ಅವರನ್ನು ಭಾರತಕ್ಕೆ ವರ್ಗಾಯಿಸಲಾಗಿದೆ.

ಇವರು ಭಾರತದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಉಲ್ ಹಕ್ ಅವರು ಮೊಹಮ್ಮೊದ್ ಸೋಹೆನ್ ಅವರ ಜಾಗವನ್ನು ತುಂಬಲಿದ್ದಾರೆ.

ಪಾಕಿಸ್ತಾನದ ಮಟ್ಟಿಗೆ ಸೋಹೆಲ್ ಉತ್ತಮ ರಾಯಭಾರಿಯಾಗಿರಲಿಲ್ಲ, ಈ ಅವಧಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಾಕಷ್ಟು ರಾಜತಾಂತ್ರಿಕ ಸಮಸ್ಯೆಗಳು ಏರ್ಪಟ್ಟಿದ್ದವು.

Pakistan appoints Mueenul Haq as High Commissioner to India
ಸರ್ಜಿಕಲ್ ಸ್ಟ್ರೈಕ್, ಪುಲ್ವಾಮಾ ದಾಳಿ, ಅಭಿನಂದನ್ ಬಂಧನ ಸೇರಿ ಇನ್ನಿತರೆ ವಿಚಾರಗಳು ಭಾರತ ಹಾಗೂ ಪಾಕಿಸ್ತಾನ ನಡುವೆ ಆತಂಕ ಸೃಷ್ಟಿಸುವ ಮಟ್ಟಿಗೆ ಮುಂದುವರೆದಿತ್ತು.

ಹೊಸ ಸರ್ಕಾರದೊಂದಿಗೆ ಉತ್ತಮ ಬಾಂದವ್ಯ ಹೊಂದಲು ಪಾಕಿಸ್ತಾನ ಸಿದ್ಧವಿದೆ ಹಾಗೂ ರಾಜತಾಂತ್ರಿಕ ಮಾತುಕತೆಗೂ ತಯಾರಿಸದೆ.

ಮಾತುಕತೆ ಮೂಲಕವೇ ಕಾಶ್ಮೀರ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬೇಷರತ್ತಾಗಿ ಭಾರತೊಂದಿಗೆ ಪಾಕಿಸ್ತಾನ ವಲವು ತೋರಿತ್ತು.

ಪ್ರಧಾನಿ ಇಮ್ರಾನ್ ಖಾನ್ ಕೂಡ ಖುದ್ದಾಗಿ ಈ ಸಂಬಂಧ ಹೇಳಿಕೆ ನೀಡಿದ್ದರು. ಹೀಗಾಗಿ ನೂತನ ರಾಯಭಾರಿ ನೇಮಕವು ಸಾಕಷ್ಟು ಕುತೂಹಲ ಮೂಡಿಸಿದೆ.

ಭಾರತದ ಪಾಕಿಸ್ತಾನ ನಡುವಿನ ಸಂಬಂಧ ಸುಧಾರಣೆಗೆ ಇವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇದೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ನೂತನ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ತಿಳಿಸಿದೆ.

English summary
Pakistan’s Ambassador to France Moeen ul Haq has been appointed High Commissioner in India. Moeen served as chief of protocol before proceeding to Paris three years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X