• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಬೂಲ್‌ನಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಿದ ಪಾಕ್, ಕಾರಣವೇನು?

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 15: ತಾಲಿಬಾನಿಗಳು ಯಾವಾಗಲೂ ಪಾಕಿಸ್ತಾನವು ತನ್ನ ಎರಡನೇ ಮನೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ತಾಲಿಬಾನಿಗಳ ನಡೆ ಈಗ ಪಾಕಿಸ್ತಾನಕ್ಕೂ ಹಿಡಿಸದಂತಾಗಿದೆ.

ಪಾಕಿಸ್ತಾನವು ಕಾಬೂಲ್‌ನಿಂದ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಕಾಬೂಲ್​​ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ಮತ್ತು ಇಲ್ಲಿಂದ ಕಾಬೂಲ್​​ಗೆ ಹೋಗುತ್ತಿದ್ದ ಎಲ್ಲ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಇಂದು ಹೇಳಿದೆ.

 ಆಗಸ್ಟ್ 15ರ ಬಳಿಕ ಕಾಬೂಲ್‌ಗೆ ಬಂದಿಳಿದ ಮೊದಲ ವಿದೇಶಿ ವಾಣಿಜ್ಯ ವಿಮಾನ ಆಗಸ್ಟ್ 15ರ ಬಳಿಕ ಕಾಬೂಲ್‌ಗೆ ಬಂದಿಳಿದ ಮೊದಲ ವಿದೇಶಿ ವಾಣಿಜ್ಯ ವಿಮಾನ

ಹಾಗೆಯೇ ತಾಲಿಬಾನಿಗಳ ಅನಿಯಂತ್ರಿತ ನಿಯಮ ಬದಲಾವಣೆ, ಮಿತಿಮೀರಿದ ಹಸ್ತಕ್ಷೇಪ, ಹಾಗೂ ಅಲ್ಲಿನ ಸಿಬ್ಬಂದಿಯ ಬೆದರಿಕೆ, ವಿಪರೀತ ಎನ್ನಿಸುವಷ್ಟು ಕಟ್ಟುನಿಟ್ಟಿನ ನಿಯಮಗಳೇ ಈ ನಿರ್ಧಾರಕ್ಕೆ ಕಾರಣ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಇನ್ನು ತಾಲಿಬಾನಿಗಳು ಅಫ್ಘಾನಿಸ್ತಾವನ್ನು ವಶಪಡಿಸಿಕೊಂಡ ನಂತರ ಕಾಬೂಲ್​ ಏರ್​ಪೋರ್ಟ್​​ನಲ್ಲಿ ಉಂಟಾಗಿದ್ದ ಅಸ್ತವ್ಯಸ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್ಲ ದೇಶಗಳ ವಿಮಾನಗಳೂ ಹಾರಾಟ ನಡೆಸಿವೆ.

ಆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದ ಬಳಿಕ, ಅಂದರೆ ಸೆಪ್ಟೆಂಬರ್​ ಮೊದಲ ವಾರದಲ್ಲಿ ಪಾಕಿಸ್ತಾನ ಮತ್ತೆ ಕಾಬೂಲ್​ಗೆ ವಾಣಿಜ್ಯ ವಿಮಾನಗಳ ಹಾರಾಟ ಆರಂಭಿಸಿತ್ತು.

ಅಫ್ಘಾನಿಸ್ತಾನದ ಅತಿದೊಡ್ಡ ಖಾಸಗಿ ವಾಹಕವಾದ ಕಾಮ್​ ಏರ್​ ಮತ್ತು ಪಿಐಎ​ ಇತ್ತೀಚೆಗಷ್ಟೇ ತಾಲಿಬಾನ್​ ಒಂದು ಎಚ್ಚರಿಕೆ ನೀಡಿದೆ. 'ನೀವು ವಿಮಾನ ಪ್ರಯಾಣದ ಟಿಕೆಟ್​ ದರ ವಿಪರೀತವಾಗಿದೆ.

ಈ ದರ ಅಫ್ಘಾನಿಸ್ತಾನದ ಬಹುತೇಕ ಜನರ ಕೈಗೆಟುಕುತ್ತಿಲ್ಲ. ನೀವು ಅದನ್ನು ಕಡಿತಗೊಳಿಸಲು ಒಪ್ಪಿಕೊಳ್ಳದೆ ಇದ್ದರೆ, ನಿಮ್ಮ ಅಫ್ಘಾನ್​ ವಿಮಾನ ಕಾರ್ಯಾಚರಣೆಗೆ ನಿರ್ಬಂಧ ಹೇರುತ್ತೇವೆ' ಎಂದು ಹೇಳಿತ್ತು.

ಕಾಬೂಲ್​ ಏರ್​ಪೋರ್ಟ್​​ನಿಂದ ಸದ್ಯ ನಿಯಮಿತವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಏಕೈಕ ಸಂಸ್ಥೆಯೆಂದರೆ ಅದು ಪಿಐಎ ಮಾತ್ರ ಆಗಿತ್ತು. ಅದು ಚಾರ್ಟರ್ಡ್​ ವಿಮಾನಗಳ ಹಾರಾಟ ನಡೆಸುತ್ತಿತ್ತು.

ಅಂದರೆ ವೇಳಾಪಟ್ಟಿಗೆ ಅನುಸಾರವಾಗಿ ಯಾವುದೇ ವಿಮಾನಗಳೂ ಹಾರಾಟ ನಡೆಸುವುದಿಲ್ಲ. ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು, ಮಿಷನ್​​ಗಳ ಮನವಿಯ ಮೇರೆಗೆ ತಾವು ವಿಮಾನ ಹಾರಾಟ ನಡೆಸುತ್ತಿರುವುದಾಗಿಯೂ ಪಿಐಎ ಹೇಳಿಕೊಂಡಿತ್ತು.

ಆಗಸ್ಟ್‌ ತಿಂಗಳಿನಲ್ಲಿ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಡಾಂಬರಿನ ಮೇಲಿನ ಕಸದ ರಾಶಿಯನ್ನು ಉಲ್ಲೇಖಿಸಿ ಭಾನುವಾರ ಅಫ್ಘಾನಿಸ್ತಾನದಿಂದ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನಗಳ ಮೂಲಕ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಯುದ್ಧ-ಪೀಡಿತ ರಾಷ್ಟ್ರದಿಂದ ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಕೆಲವು ದಿನಗಳಿಂದ ಕಾಬೂಲ್‍ಗೆ ಹೊರಗಿನ ವಿಮಾನಗಳನ್ನು ಕಳುಹಿಸಿಕೊಡುತ್ತಿದ್ದ ಏಕೈಕ ವಾಣಿಜ್ಯ ವಿಮಾನಯಾನ ಸಂಸ್ಥೆ ಪಾಕಿಸ್ತಾನ ಅಂತರಾಷ್ಟ್ರೀಯ ಏರ್ ಲೈನ್ಸ್ ಆಗಿತ್ತು.

ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು: ಪಾಕಿಸ್ತಾನ ಕಾಬೂಲ್‍ನ ಹಮೀದ್ ಕರ್ಜೈ ಅಂತರಾಷ್ಟ್ರೀಯವಿಮಾನ ನಿಲ್ದಾಣದ ಡಾಮ್ರ್ಯಾಕ್‍ನಲ್ಲಿನ ಕಸ ರಾಶಿ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಕಾಬೂಲ್ ವಿಮಾನ ಕಾರ್ಯಾಚರಣೆಯನ್ನು ಪಾಕಿಸ್ತಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸದ್ಯ ಕಾಬೂಲ್ ವಿಮಾನ ನಿಲ್ದಾಣಕ್ಕೆ ಯುಎಸ್ ಮಿಲಿಟರಿಗಳನ್ನು ನಿಯೋಜಿಸಿ, ಭದ್ರತೆ ಒದಗಿಸಿತ್ತು.
ಸೆಪ್ಟೆಂಬರ್ 13 ರಂದು ಕಾಬೂಲ್‌ನಲ್ಲಿ ಮೊದಲ ಅಂತಾರಾಷ್ಟ್ರೀಯ ವಿಮಾನ ಕಾಬೂಲ್‌ನಲ್ಲಿ ಲ್ಯಾಂಡ್ ಆಗಿತ್ತು.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಿದೆ. ಬದಲಾದ ತಾಲಿಬಾನ್ ಎಂದು ಘೋಷಣೆ ಮಾಡಿದ್ದ ಉಗ್ರರು, ಕ್ರೌರ್ಯ, ಹಲ್ಲೆ, ಹತ್ಯೆ ಹಾಗೇ ಮುಂದುವರಿದಿದೆ. ಇದರ ನಡುವೆ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಗೊಂಡಿದೆ. ಸದ್ಯ ಇಸ್ಲಾಮಾಬಾದ್-ಕಾಬೂಲ್-ಇಸ್ಲಾಮಾಬಾದ್ ಸೇವೆ ಮಾತ್ರ ಲಭ್ಯವಿದೆ.

ತಾಲಿಬಾನ್ ಆಕ್ರಮಣದ ಬಳಿಕ ಆಫ್ಘಾನಿಸ್ತಾನ ತೊರೆಯಲು ಬಹುತೇಕ ಪ್ರಜೆಗಳು ಹಾತೊರೆಯುತ್ತಿದ್ದಾರೆ. ಅಮೆರಿಕ ನಡೆಸಿದ ರಕ್ಷಣಾ ಕಾರ್ಯದಲ್ಲಿ ಸುಮಾರು 1.20 ಲಕ್ಷ ಮಂದಿ ದೇಶ ತೊರೆದು, ಇತರ ದೇಶಗಳಲ್ಲಿ ನಿರಾಶ್ರಿತರಾಗಿದ್ದಾರೆ.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಕ್ರಮಣವು ಪಾಕಿಸ್ತಾನಕ್ಕೆ ತನ್ನ ಸೈನ್ಯವು ಭಾರತದ ವಿರುದ್ಧ ಬಹಳ ಹಿಂದಿನಿಂದಲೂ ಹುಡುಕುತ್ತಿರುವ 'ಕಾರ್ಯತಂತ್ರದ ಬಲ' ನೀಡುವುದಲ್ಲದೆ, ಭಯೋತ್ಪಾದಕರು ಮತ್ತು ಭಯೋತ್ಪಾದಕರಿಗೆ (ಅಫ್ಘಾನಿಸ್ತಾನ) ಉಪಯುಕ್ತ ನೇಮಕಾತಿ ಸ್ಥಳವನ್ನು ಒದಗಿಸುತ್ತದೆ ಎಂದು ಹೇಳಲಾಗಿತ್ತು.

ಐಎಸ್‌ಐ ಅವರನ್ನು ಮರು ನಿಯೋಜಿಸಲು ಬಯಸಿದರೆ. ಕಳೆದ ಬಾರಿ ತಾಲಿಬಾನ್ ಅಧಿಕಾರದಲ್ಲಿದ್ದಾಗ, ದಿವಂಗತ ಅಹ್ಮದ್ ಶಾ ಮಸೂದ್ ನೇತೃತ್ವದ ಉತ್ತರ ಒಕ್ಕೂಟದ ಅಡಿಯಲ್ಲಿ ಪಂಜಶೀರ್ ಕಣಿವೆ ಬಂಡಾಯವನ್ನು ಸಕ್ರಿಯವಾಗಿ ಬೆಂಬಲಿಸಲು ಭಾರತವು ರಷ್ಯಾ ಮತ್ತು ಇರಾನ್ ಜೊತೆ ಕೈಜೋಡಿಸಿತ್ತು.

ಆದಾಗ್ಯೂ, ಈ ಬಾರಿ ಚೀನಾ ಪರ ರಷ್ಯಾ ಭಾರತದೊಂದಿಗಿನ ಆಫ್ಘಾನಿಸ್ತಾನದ ಸಮಸ್ಯೆಗಳ ಬಗ್ಗೆ ತಟಸ್ಥ ನಿಲುವನ್ನು ಅಳವಡಿಸಿಕೊಂಡಿದೆ ಎಂದು ಹೇಳಲಾಗಿತ್ತು ಇದೀಗ ಈ ತಾಲಿಬಾನಿಗಳ ನಡೆಯೇ ಪಾಕಿಸ್ತಾನಕ್ಕೂ ಕೋಪ ತರಿಸುವಂತಿದೆ.

English summary
Pakistan International Airlines (PIA) on Thursday announced the suspension of flights from Kabul, accusing the Taliban of “heavy-handed” interference, according to news agencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X