ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ: ತೀವ್ರಗೊಂಡ ಹಿಂಸಾಚಾರ, ಟಿವಿಗಳು ಬಂದ್

By Mahesh
|
Google Oneindia Kannada News

ಇಸ್ಲಾಮಾಬಾದ್,ಸೆ.1: ಚುನಾವಣೆ ಸಂದರ್ಭದಲ್ಲಿ ಗೋಲ್ ಮಾಲ್ ಮಾಡಿ ಪ್ರಧಾನಿ ಪಟ್ಟಕ್ಕೇರಿರುವ ಆರೋಪ ಹೊತ್ತಿರುವ ನವಾಜ್ ಷರೀಫ್ ಪದಚ್ಯುತಿಗೆ ಕಾಲ ಸನ್ನಿಹಿತವಾಗಿದೆ ಎಂಬ ಸುದ್ದಿ ಬಂದಿದೆ. ಆದರೆ, ಸರ್ಕಾರಿ ಮೂಲಗಳು ಸುದ್ದಿಯನ್ನು ತಳ್ಳಿ ಹಾಕಿವೆ. ಆದರೆ,ಈಗ ಸುದ್ದಿ ನೀಡಲು ಸರ್ಕಾರಿ ಮಾಧ್ಯಮಗಳೇ ಇಲ್ಲವಾಗಿದೆ. ಪ್ರತಿಭಟನಾಕಾರರು ಸರ್ಕಾರಿ ಸ್ವಾಮ್ಯದ ಟಿವಿ ಸ್ಟೇಷನ್ ವಶಪಡಿಸಿಕೊಂಡಿದ್ದಾರೆ.

ಇಮ್ರಾನ್ ಖಾನ್ ಅವರ ಪಿಟಿಐ ಹಾಗೂ ತಾಹಿರ್ ಉಲ್ ಖಾದ್ರಿ ಪಕ್ಷಗಳ ಕಾರ್ಯಕರ್ತರು ವಾರಗಳಿಂದ ನಡೆಸಿಕೊಂಡು ಬಂದಿರುವ ಪ್ರತಿಭಟನೆ ಸೋಮವಾರ ಹಿಂಸಾರೂಪ ಪಡೆದುಕೊಂಡಿತ್ತು. ನವಾಜ್ ಷರೀಫ್ ಪದಚ್ಯುತಿಗೆ ಆಗ್ರಹಿಸಿ ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು.

ಪ್ರತಿಭಟನಾಕಾರರ ಕೈಲಿ ಕಲ್ಲು, ದೊಣ್ಣೆಗಳನ್ನು ಹಿಡಿದು ಪೂಲೀಸರ ಮೇಲೆ ಮುಗಿಬಿದ್ದು ಕೈಗೆ ಸಿಕ್ಕವರನ್ನು ಥಳಿಸತೊಡಗಿದರು.ಇದ್ದಕ್ಕಿದ್ದಂತೆ ಪ್ರತಿಭಟನಾನಿರತ ತೆಹ್ರೀಕ್ ಇ ಇನ್ಯಾಫ್ ಹಾಗೂ ಪಾಕಿಸ್ತಾನ ಅವಾಮಿ ತೆಹ್ರೀಕ್ ಮತ್ತಿತರ ಪಕ್ಷಗಳ ಕಾರ್ಯಕರ್ತರು ಹಿಂಸೆಗಿಳಿದರು.

 ಸೇನೆ ರಂಗಕ್ಕಿಳಿದಿದ್ದರಿಂದ ಮತ್ತಷ್ಟು ಕೆರಳಿದರು

ಸೇನೆ ರಂಗಕ್ಕಿಳಿದಿದ್ದರಿಂದ ಮತ್ತಷ್ಟು ಕೆರಳಿದರು

ಪೂಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಉದ್ರಿಕ್ತರನ್ನು ಚದುರಿಸಲು ಪ್ರಯತ್ನಿಸಿದರು. ರಬ್ಬರ್ ಬುಲೆಟ್ ಗಳು, ಅಶ್ರುವಾಯುಗಳನ್ನು ಸಿಡಿಸಿದರು. ಆದರೂ ಗುಂಪು ನಿಯಂತ್ರಣಕ್ಕೆ ಬಾರದಾದಾಗ ಜನರನ್ನು ನಿಯಂತ್ರಿಸಲು ಸೇನಾಪಡೆ ಯೋಧರನ್ನು ಕರೆಸಲಾಯಿತು. ಸೇನೆ ರಂಗಕ್ಕಿಳಿದಿದ್ದರಿಂದ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು ಪೂಲೀಸರನ್ನು ಅಟ್ಟಾಡಿಸತೊಡಗಿದರು.

ದೇಶವ್ಯಾಪ್ತಿ ಮುಷ್ಕರಕ್ಕೆ ಬೆಲೆ ಸಿಕ್ಕಿಲ್ಲ

ದೇಶವ್ಯಾಪ್ತಿ ಮುಷ್ಕರಕ್ಕೆ ಬೆಲೆ ಸಿಕ್ಕಿಲ್ಲ

ಅದರೆ, ದೇಶದ ಇತರೆಡೆ ಜನಜೀವನ ಎಂದಿನಂತೆ ಸಾಗಿತ್ತು. ವಿಪಕ್ಷನಾಯಕ ಇಮ್ರಾನ್ ಖಾನ್ ಹಾಗೂ ವಿದ್ವಾಂಸ ತಾಹೀರ್ ಖಾದ್ರಿ ಅವರು ಕರೆ ನೀಡಿದ್ದ ದೇಶವ್ಯಾಪ್ತಿ ಮುಷ್ಕರಕ್ಕೆ ಬೆಲೆ ಸಿಕ್ಕಿಲ್ಲ. ಷರೀಫ್ ಅವರು ರಾಜೀನಾಮೆ ನೀಡದ ಹೊರತೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು ಅಲ್ಲಿ ತನಕ ನವಾಅಜ್ ಷರೀಫ್ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಇಮ್ರಾನ್ ಖಾನ್ ಆಗ್ರಹಿಸಿದ್ದಾರೆ.

ಪಾಕಿಸ್ತಾನ ಟಿವಿ ಪ್ರತಿಭಟನಾಕಾರರ ವಶ

ಪಾಕಿಸ್ತಾನ ಟಿವಿ ಪ್ರತಿಭಟನಾಕಾರರ ವಶ

ಪಾಕಿಸ್ತಾನ ಟಿವಿ ಪ್ರತಿಭಟನಾಕಾರರ ವಶದಲ್ಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಪ್ರತಿಭಟನಾ ಕಾರರು ಹಲ್ಲೆ ನಡೆಸಿ, ಕಚೇರಿ ಧ್ವಂಸಗೊಳಿಸಿ ತೆರಳಿದರು ಎಂಬ ಸುದ್ದಿಯೂ ಇದೆ.

ನೂರಾರು ಜನರಿಗೆ ಗಾಯ, ನೋವು

ನೂರಾರು ಜನರಿಗೆ ಗಾಯ, ನೋವು

ಇಮ್ರಾನ್ ಖಾನ್ ಹಾಗೂ ವಿದ್ವಾಂಸ ತಾಹೀರ್ ಖಾದ್ರಿ ಅವರು ಕರೆ ನೀಡಿದ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಲಾಠಿಚಾರ್ಜ್ ನಡೆಸಿ, ಗುಂಡು ಹಾರಿಸಿದ ಪರಿಣಾಮ, ನೂರಾರು ಜನ ಗಾಯಗೊಂಡಿದ್ದಾರೆ. ಓರ್ವನ ಸಾವು ಸಂಭವಿಸಿದೆ.

ಪೊಲೀಸರ ಕೈಗೆ ಸಿಕ್ಕ ಬಿದ್ದ ಸವಾರರು

ಪೊಲೀಸರ ಕೈಗೆ ಸಿಕ್ಕ ಬಿದ್ದ ಸವಾರರು

ಪ್ರಧಾನಿ ನಿವಾಸದಿಂದ ವಿರುದ್ಧ ದಿಕ್ಕಿಗೆ ಸಾಗಲು ಯತ್ನಿಸುವಾಗ ಪೊಲೀಸರ ಕೈಗೆ ಸಿಕ್ಕ ಬಿದ್ದ ಮೋಟರ್ ಸೈಕಲ್ ಸವಾರರು

ಭಾನುವಾರ ರಾತ್ರಿಯ ಪ್ರತಿಭಟನೆ ಚಿತ್ರ

ಭಾನುವಾರ ರಾತ್ರಿಯ ಪ್ರತಿಭಟನೆ ಚಿತ್ರ

ಪಾಕಿಸ್ತಾನದ ಸಂಸತ್ ಭವನ, ಪ್ರಧಾನಿ ನಿವಾಸದ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನೆಕಾರರು.

ಪ್ರತಿಭಟನೆಕಾರರನ್ನು ತಡೆಯಲು ತಡೆಗೋಡೆ

ಪ್ರತಿಭಟನೆಕಾರರನ್ನು ತಡೆಯಲು ತಡೆಗೋಡೆ

ಪ್ರತಿಭಟನೆಕಾರರನ್ನು ತಡೆಯಲು ಕಾರುಗಳನ್ನು ಅಡ್ಡ ಮಲಗಿಸಿ ತಾತ್ಕಾಲಿಕ ತಡೆಗೋಡೆ ಮಾಡಲಾಗಿತ್ತು.

ಸರ್ಕಾರಿ ಕಚೇರಿಗಳು ಖಾಲಿ ಖಾಲಿ

ಸರ್ಕಾರಿ ಕಚೇರಿಗಳು ಖಾಲಿ ಖಾಲಿ

ಸರ್ಕಾರಿ ಕಚೇರಿಗಳು ಖಾಲಿ ಖಾಲಿಯಾಗಿದ್ದು, ಪ್ರತಿಭಟನಾಕಾರರು ಎಲ್ಲೆಡೆ ನುಗ್ಗುತ್ತಿದ್ದಾರೆ. ಚಿತ್ರಗಳುಳ: AP/PTI

English summary
Protest in Pakistan took a violent turn as main opposition leader Imran Khan and cleric Tahir-ul-Qadri lost control over the protesters. Security around the residence of Prime Minister Nawaz Sharif has been tightened as agitators stormed TV channel office and stopped broadcast of news across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X