ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ಸೂಚನೆ: ಪ್ರಧಾನಿ ಪಟ್ಟಕ್ಕೆ ರಾಜಿನಾಮೆ ಸಲ್ಲಿಸಿದ ನವಾಜ್ ಷರೀಫ್

ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುಂತೆ ನವಾಜ್ ಷರೀಫ್ ಗೆ ಆದೇಶಿಸಿದ ಪಾಕಿಸ್ತಾನ ಸುಪ್ರೀಂ ಕೋರ್ಟ್. ಭ್ರಷ್ಟಾಚಾರದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆ.

|
Google Oneindia Kannada News

ಇಸ್ಲಾಮಾಬಾದ್, ಜುಲೈ 28: ಪಾಕಿಸ್ತಾನ ಸುಪ್ರೀಂ ಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅಧ್ಯಕ್ಷ ನವಾಜ್ ಷರೀಫ್ ಅವರು, ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸುಪ್ರೀಂ ಕೋರ್ಟ್, ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕೆಂದು ಜುಲೈ 28ರ ಬೆಳಗ್ಗೆ ಸೂಚನೆ ನೀಡಿತು. ಈ ಹಿನ್ನೆಲೆಯಲ್ಲಿ, ಷರೀಫ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

2013ರ ಜೂನ್ 5ರಂದು ನವಾಜ್ ಷರೀಫ್ ಅವರು, ಮೂರನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಕ್ಕಿಂತಲೂ ಹಿಂದೆ, 1997ರಿಂದ 1999ರವರೆಗೆ, 1990ರಿಂದ 1993ರವರೆಗೆ ಅವರು ಪ್ರಧಾನಿಯಾಗಿದ್ದರು.

ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಬಂಧನದ ಭೀತಿ? ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಬಂಧನದ ಭೀತಿ?

2015ರಲ್ಲಿ ಜಗತ್ತಿನ ನಾನಾ ದೇಶಗಳ ಖ್ಯಾತಿವೆತ್ತ ವ್ಯಕ್ತಿಗಳ ಭ್ರಷ್ಟಾಚಾರ ಹಾಗೂ ಕರಾಳ ಮುಖಗಳನ್ನು ಅನಾವರಣ ಮಾಡಿದ್ದ 'ಪನಾಮಾ ಪೇಪರ್ಸ್' ಎಂಬ ಹೆಸರಿನ ತನಿಖಾ ವರದಿಯಲ್ಲಿ ನವಾಜ್ ಷರೀಫ್ ಹಾಗೂ ಅವರ ಕುಟುಂಬ ಸದಸ್ಯರು ಭ್ರಷ್ಟಾಚಾರದಿಂದ ಭಾರೀ ಆಸ್ತಿ ಮಾಡಿರುವ ಬಗ್ಗೆ ಪ್ರಸ್ತಾಪಿಸಲಾಗಿತ್ತು.

Pak Supreme court order Nawaz Sharif to step down as PM

ಇದು ಪಾಕಿಸ್ತಾನ ರಾಜಕೀಯ ವ್ಯವಸ್ಥೆಯಲ್ಲಿ ಭಾರೀ ಕೋಲಾಹಲ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ, ಇದೇ ವರ್ಷ ಏಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್ ಮುಂದೆ ನವಾಜ್ ಷರೀಫ್ ಅವರ ಪದಚ್ಯುತಿ ಬಗ್ಗೆ ಪ್ರಸ್ತಾವನೆ ಬಂದಿತ್ತಾದರೂ, ಆರೋಪ ಸಾಬೀತುಪಡಿಸಲು ಬೇಕಾದ ಸಾಕ್ಷ್ಯಾಧಾರಗಳ ಕೊರತೆ ಇದೆಯೆಂದು ಹೇಳಿದ್ದ ಸುಪ್ರೀಂ ಕೋರ್ಟ್ ಈ ಬಗ್ಗೆ ಪಾಕಿಸ್ತಾನದ ನಾಗರಿಕ ಹಾಗೂ ಸೇನಾ ಸಮಿತಿಯೊಂದು ತನಿಖೆ ಕೈಗೊಳ್ಳಬೇಕೆಂದು ಆದೇಶಿಸಿತ್ತು.

ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ತನಿಖೆಗೆ ಕೋರ್ಟ್ ಆದೇಶ

ಈ ಬಗ್ಗೆ ತನಿಖೆ ನಡೆಸಿದ್ದ ನಾಗರಿಕ ಮತ್ತು ಸೇನಾ ಸಮಿತಿಯು, ಇತ್ತೀಚೆಗೆ, ತನ್ನ ವರದಿಯನ್ನು ನೀಡಿ, ಅದರಲ್ಲಿ ಷರೀಫ್ ದೋಷಿಯೆಂದು ಆರೋಪಿಸಿತ್ತು. ಇದೇ ವರದಿಯನ್ನು ಅವಲೋಕಿಸಿದ ಸುಪ್ರೀಂ ಕೋರ್ಟ್ ಇಂದು (ಜುಲೈ 28) ಷರೀಫ್ ಅವರು ಪದತ್ಯಾಗ ಮಾಡಬೇಕೆಂದು ಆದೇಶಿಸಿತು.

ಪನಾಮಾ ಪೇಪರ್ ಔಟ್: ಗುಪ್ತನಿಧಿ ಪಟ್ಟಿಯಲ್ಲಿ ಬಿಗ್ ಬಿ, ಐಶ್ ಹೆಸರು! ಪನಾಮಾ ಪೇಪರ್ ಔಟ್: ಗುಪ್ತನಿಧಿ ಪಟ್ಟಿಯಲ್ಲಿ ಬಿಗ್ ಬಿ, ಐಶ್ ಹೆಸರು!

ತಲ್ಲಣ ಸೃಷ್ಟಿಸಿದ್ದ ಪನಾಮಾ ಪೇಪರ್ಸ್
ಜಗತ್ತಿನ ನಾನಾ ದೇಶಗಳ ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲಿ ಗೌಪ್ಯವಾಗಿದ್ದ ಕೆಲವು ಮಹತ್ವದ ದಾಖಲೆಗಳನ್ನು ವೃತ್ತಿನಿರತ ತನಿಖಾ ಪತ್ರಕರ್ತರ ಗೌಪ್ಯ ತಂಡವೊಂದು ಕದ್ದು ಅದೆಲ್ಲವನ್ನೂ ಪನಾಮಾ ಪೇಪರ್ ಲೀಕ್ಸ್ ಎಂಬ ಹೆಸರಿನಲ್ಲಿ ಜಗಜ್ಜಾಹೀರು ಮಾಡಿತ್ತು. ಅದರಲ್ಲಿ, 11.5 ಮಿಲಿಯನ್ ಗೌಪ್ಯ ದಾಖಲೆಗಳಿದ್ದವು.

ಪನಾಮ ಪೇಪರ್ಸ್: ಪಾಕ್ ಪ್ರಧಾನಿ ರಾಜೀನಾಮೆಗೆ 7 ದಿನಗಳ ಗಡುವು ಪನಾಮ ಪೇಪರ್ಸ್: ಪಾಕ್ ಪ್ರಧಾನಿ ರಾಜೀನಾಮೆಗೆ 7 ದಿನಗಳ ಗಡುವು

ಹಲವಾರು ದೇಶಗಳ ಗಣ್ಯರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳ ಕಳ್ಳ ವ್ಯವಹಾರಗಳು, ತೆರಿಗೆ ವಂಚನೆಗಳು ಹಾಗೂ ಇತರ ಭ್ರಷ್ಟಾಚಾರ ಮಾರ್ಗಗಳು ದಾಖಲೆ ಸಮೇತ ಬಹಿರಂಗೊಂಡಿದ್ದವು.

ಭಾರತದಲ್ಲೂ ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ರಾಜಕಾರಣಿಗಳ ಹೆಸರುಗಳು ಪ್ರಸ್ತಾಪವಾಗಿದ್ದವು.

English summary
Pakistani Prime Minister Nawaz Sharif will have to step down as the result of a corruption case, the country's Supreme Court ruled on July 28, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X