ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಬ್ಜೀತ್ ವಸ್ತುಗಳನ್ನು ವಾಪಸ್ ಮಾಡಿದ ಪಾಕಿಸ್ತಾನ

By Srinath
|
Google Oneindia Kannada News

pak-returns-murdered-indian-prisoner-sarabjit-singh-personal-belonging
ನವದೆಹಲಿ, ನ.26: ಪಾಕಿಸ್ತಾನದ ಜೈಲಿನಲ್ಲಿ ಘೋರವಾಗಿ ಹತ್ಯೆಗೀಡಾದ ಭಾರತದ ಕೈದಿ ಸರಬ್ಜೀತ್ ಸಿಂಗ್ ಗೆ ಸೇರಿದ ವಸ್ತುಗಳನ್ನು ಪಾಕಿಸ್ತಾನ ಹಸ್ತಾಂತರ ಮಾಡಿದೆ.

ಇಸ್ಲಾಮಾಬಾದಿಗೆ ಭೇಟಿ ನೀಡಿರುವ ಭಾರತೀಯ ನಿಯೋಗಕ್ಕೆ ಪಾಕ್ ಜೈಲು ಅಧಿಕಾರಿಗಳು ಒಟ್ಟು 36 ವಸ್ತುಗಳನ್ನು ವಾಪಸ್ ನೀಡಿದ್ದಾರೆ. ಲಾಹೋರಿನ ಕೋಟ್ ಲಖಪತ್ ಜೈಲಿನಲ್ಲಿ ಬಂಧಿಯಾಗಿದ್ದ ಸರಬ್ಜೀತ್ ಸಿಂಗ್ ಮೇಲೆ ಅಲ್ಲಿನ ಕೈದಿಗಳು ಕಳೆದ ಮೇ ತಿಂಗಳಲ್ಲಿ ಹಲ್ಲೆ ಮಾಡಿ ದಾರುಣವಾಗಿ ಸಾಯಿಸಿದ್ದರು.

ಹಿಂದಿ ಭಾಷೆಯಲ್ಲಿದ್ದ ಮೂರು ಪವಿತ್ರ ಪುಸ್ತಕಗಳು, 5 ಜೊತೆ ಬಟ್ಟೆ, ಚಾಪೆ, ನೀರಿನ ಕೊಡ, ಹೊದಿಕೆ, ಶೂಗಳನ್ನು ವಾಪಸ್ ನೀಡಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

ಇಸ್ಲಾಮಾಬಾದಿಗೆ ಭೇಟಿ ನೀಡಿರುವ ಭಾರತೀಯ ನಿಯೋಗಕ್ಕೆ ದಿವಂಗತ ಸರಬ್ಜೀತ್ ಸಿಂಗ್ ಗೆ ಸೇರಿದ ಒಟ್ಟು 36 ವಸ್ತುಗಳನ್ನು ವಾಪಸ್ ನೀಡಲಾಗಿದೆ. ಭಯೋತ್ಪಾದನೆ ಆರೋಪ ಹೊತ್ತಿದ್ದ ಸರಬ್ಜಿತ್ ಒಟ್ಟು 20 ವರ್ಷ ಕಾಲ ಪಾಕ್ ಜೈಲುಗಳಲ್ಲಿದ್ದರು. ಮೇ ನಲ್ಲಿ ಸರಬ್ಜಿತ್ ನಿಧನದ ನಂತರ ಆತನ ಸಹೋದರಿ ದಲ್ಬೀರ್ ಕೌರ್ ಅವರು ತಮ್ಮ ಸೋದರನ ವಸ್ತುಗಳನ್ನು ವಾಪಸ್ ನೀಡಬೇಕೆಂದು ಪಾಕ್ ಸರಕಾರಕ್ಕೆ ಆಗ್ರಹಿಸಿದ್ದರು.

ಕುಡಿದ ಮತ್ತಿನಲ್ಲಿ ಮೈಮೇಲೆ ಪರಿಜ್ಞಾನವಿಲ್ಲದೆ ಸರಬ್ಜಿತ್ ಸಿಂಗ್ ಗಡಿ ದಾಟಿ ಪಾಕಿಸ್ತಾನದೊಳಕ್ಕೆ ಹೊರಳಿದ್ದ ಅಷ್ಟೇ. ಅವನೇನೂ ಭಯೋತ್ಪಾದಕನಲ್ಲ' ಎಂಬುದು ಸರಬ್ಜೀತ್ ಕುಟುಂಬಸ್ಥರ ವಾದವಾಗಿದೆ.

English summary
Pakistan returns murdered Indian prisoner Sarabjit Singh personal belongings. India's mission in Islamabad received 36 items belonging to Indian prisoner Sarabjit Singh who died in May after a brutal attack by his inmates in Lahore's Kot Lakhpat jail. The items returned included three holy books in Hindi, a rosary, five sets of clothes, a sleeping mattress, a pitcher, a blanket and shoes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X