ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

72 ಗಂಟೆಯಲ್ಲಿ ಏನಾದರೂ ಅಗಬಹುದು ಎಂದ ಪಾಕ್ ರೈಲ್ವೆ ಸಚಿವ

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 27: "ಮುಂದಿನ ಮೂರು ದಿನ ಅಂದರೆ ಎಪ್ಪತ್ತೆರದು ಗಂಟೆ ಬಹಳ ಮುಖ್ಯವಾದದ್ದು. ಮತ್ತು ಭಾರತದ ಜತೆಗೆ ಯುದ್ಧವಾದರೆ ಅದು ಎರಡನೇ ವಿಶ್ವ ಯುದ್ಧದ ನಂತರ ಅತಿ ದೊಡ್ಡ ಯುದ್ಧವಾಗಿರುತ್ತದೆ" ಎಂದು ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಬುಧವಾರ ಹೇಳಿದ್ದಾರೆ.

ಇದು ಘೋರ ಯುದ್ಧವಾಗಿರಲಿದೆ. ಏಕೆಂದರೆ ಪಾಕಿಸ್ತಾನ ಪೂರ್ಣ ಸನ್ನದ್ಧವಾಗಿದೆ. ಪಾಕಿಸ್ತಾನವೂ ಈಗಾಗಲೇ ಪೂರ್ತಿಯಾಗಿ ಯುದ್ಧ ಸನ್ನದ್ಧ ಸ್ಥಿತಿಯಲ್ಲೇ ಇದೆ. ರೈಲ್ವೆಯಲ್ಲಿ ತುರ್ತು ಸನ್ನಿವೇಶದ ಕಾನೂನುಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಉರುಳಿದ ಎಫ್-16 ಬಗ್ಗೆ ಸುದ್ದಿ ಬಿತ್ತರಿಸದಂತೆ ಪಾಕ್ ಮಾಧ್ಯಮಗಳಿಗೆ ಸೂಚನೆಉರುಳಿದ ಎಫ್-16 ಬಗ್ಗೆ ಸುದ್ದಿ ಬಿತ್ತರಿಸದಂತೆ ಪಾಕ್ ಮಾಧ್ಯಮಗಳಿಗೆ ಸೂಚನೆ

ಒಂದು ವೇಳೆ ಯುದ್ಧವಾದರೆ ಎರಡನೇ ವಿಶ್ವ ಯುದ್ಧದ ನಂತರದ ಅತಿ ದೊಡ್ಡ ಯುದ್ಧ ಇದಾಗಿರುತ್ತದೆ. ಇದು ಕೊನೆ ಯುದ್ಧವಾಗಿರುತ್ತದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

Sheikh Rasheed

ಅದೇನು ಯುದ್ಧವೋ ಅಥವಾ ಶಾಂತಿಯೋ ಮುಂದಿನ ಎಪ್ಪತ್ತೆರಡು ಗಂಟೆಯನ್ನು ನಿರ್ಧಾರ ಆಗಲಿದೆ ಎಂದು ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಇದೇ ಅಹ್ಮದ್ ಮಾತನಾಡುತ್ತಾ ಹೇಳಿದ್ದೇನೆಂದರೆ, ಯಾರಾದರೂ ಪಾಕಿಸ್ತಾನದ ಕಡೆಗೆ ನಕಾರಾತ್ಮಕ ರೀತಿಯಲ್ಲಿ ನೋಡಿದರೆ ಅವರ ಕಣ್ಣನ್ನು ಕಿತ್ತು ಆಚೆ ತೆಗೆಯಲಾಗುತ್ತದೆ. ಹುಲ್ಲು ಕೂಡ ಬೆಳೆಯಲ್ಲ. ಪಕ್ಷಿಗಳ ಕಲರವ ಕೇಳಲ್ಲ. ದೇವಾಲಯಗಳಲ್ಲಿ ಗಂಟೆಯ ಶಬ್ದ ಕೇಳಲ್ಲ ಎಂದಿದ್ದರು.

English summary
A Pakistani Railways Minister Sheikh Rashid Ahmad said on Wednesday, next 72 hours are crucial and if war happened with India it will be the biggest after the Second World War.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X