ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್ ಗಡಿಗೆ ಇಮ್ರಾನ್ ಖಾನ್ ಭೇಟಿ ಹಿಂದಿರುವ ಕಾರಣವೇನು?

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 7: ಭಾರತ ಹಾಗೂ ಪಾಕಿಸ್ತಾನದ ನಡುವೆ ತಲೆನೋವು ಏರ್ಪಟ್ಟಿರುವ ಸಂದರ್ಭದಲ್ಲಿ ಭಾರತ-ಪಾಕ್ ಗಡಿ ಪ್ರದೇಶಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭೇಟಿ ನೀಡಿದ್ದಾರೆ.

ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವ ಅವರ ಜೊತೆಗೆ ಎಲ್‌ಓಸಿಗೆ ಭೇಟಿ ನೀಡಿದ್ದಾರೆ. ಪಾಕಿಸ್ತಾನ ಸೇನೆ ಹಾಗೂ ಹುತಾತ್ಮರ ದಿನ ಅಂಗವಾಗಿ ಅವರು ಭೇಟಿ ನೀಡಿದ್ದರು. ಸಚಿವ ಪರ್ವೇಜ್ ಖತಕ್, ಶಾ ಮೊಹಮ್ಮದ್ ಖುರೇಷಿ ಜೊತೆಯಾಗಿದ್ದರು.

ಪಾಕಿಸ್ತಾನದ ಆರ್ಥಿಕತೆ ಕುರಿತು ಪಾಕ್ ಪ್ರಧಾನಿಗೆ ಬಾಲಕನ ಪಾಠಪಾಕಿಸ್ತಾನದ ಆರ್ಥಿಕತೆ ಕುರಿತು ಪಾಕ್ ಪ್ರಧಾನಿಗೆ ಬಾಲಕನ ಪಾಠ

ಇಮ್ರಾನ್ ಖಾನ್ ಕಳೆದ ಕೆಲವು ದಿನಗಳ ಹಿಂದೆಯೇ ಎಲ್‌ಓಸಿಗೆ ಭೇಟಿ ನೀಡಬೇಕೆಂದಿದ್ದರು. ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಹಾಗೂ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದನ್ನು ಪಾಕಿಸ್ತಾನ ವಿರೋಧಿಸಿತ್ತು.

Pak Prime Minister Imran Khan Visits LOC

ಬಹುತೇಕ ರಾಷ್ಟ್ರಗಳು ಪ್ರಧಾನಿ ಮೋದಿಯವರ ತೀರ್ಮಾನವೇ ಉತ್ತಮ ತೀರ್ಮಾನ ಎಂದು ಹೇಳಿತ್ತು. ಜಮ್ಮು ಕಾಶ್ಮೀರದಲ್ಲಿ ಶಾಲೆಗಳು ತೆರೆದಿವೆ, ಸರ್ಕಾರಿ ಕಚೇರಿಗಳನ್ನು ಕೂಡ ತೆರೆಯಲಾಗಿದೆ. ಸಹಜ ಸ್ಥಿತಿಗೆ ಮರಳುತ್ತಿದೆ.

ಇನ್ನೊಂದೆಡೆ ಭಾರತವು ಎಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಕೂಡ ವಶಪಡಿಸಿಕೊಂಡುಬಿಡುತ್ತೆ ಎನ್ನುವ ಆತಂಕವೂ ಪಾಕಿಸ್ತಾನಕ್ಕೆ ಇರುವುದು ಎದ್ದು ತೋರುತ್ತಿದೆ. ಭಾರತದ ವಿರುದ್ಧ ಯುದ್ಧ ಸಾರಲು ಪಾಕಿಸ್ತಾನವು ಹೆಚ್ಚುವರಿ ಸೈನಿಕರನ್ನು ಕೂಡ ನಿಯೋಜಿಸಿದೆ ಎನ್ನಲಾಗಿದೆ.

English summary
Pakistan Prime Minister Imran Khan Visited Line of Control. With Army Chief General Qamar Javed Bajwa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X