ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ತರ್ ಪುರ್ ಕಾರಿಡಾರ್ ಉದ್ಘಾಟನೆಗೆ ಮ.ಮೋ. ಸಿಂಗ್ ಗೆ ಪಾಕ್ ಪಿಎಂ ಆಹ್ವಾನ

|
Google Oneindia Kannada News

ಇಸ್ಲಾಮಾಬಾದ್ (ಪಾಕಿಸ್ತಾನ), ಅಕ್ಟೋಬರ್ 10: ಕರ್ತರ್ ಪುರ್ ಕಾರಿಡಾರ್ ನವೆಂಬರ್ ನಲ್ಲಿ ಉದ್ಘಾಟನೆ ಆಗಲಿದ್ದು, ಅದರ ಉದ್ಘಾಟನೆ ಕಾರ್ಯಕ್ರಮಕ್ಕೆ ಭಾರತದ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಹ್ವಾನ ನೀಡಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಹೇಳಿದೆ.

ಈ ವರೆಗೆ ಆಹ್ವಾನದ ಬಗ್ಗೆ ಮಾಹಿತಿ ಇಲ್ಲ ಎಂದು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರ ಕಚೇರಿ ಮೂಲಗಳು ತಿಳಿಸಿವೆ. ಮತ್ತು ಕರ್ತರ್ ಪುರ್ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎಂದು ಕೂಡ ತಿಳಿಸಲಾಗಿದೆ.

ಕರ್ತರ್ ಪುರ್ ಕಾರಿಡಾರ್; ವರ್ಷವಿಡೀ ಭಾರತೀಯರಿಗೆ ವೀಸಾರಹಿತ ಪ್ರವೇಶಕರ್ತರ್ ಪುರ್ ಕಾರಿಡಾರ್; ವರ್ಷವಿಡೀ ಭಾರತೀಯರಿಗೆ ವೀಸಾರಹಿತ ಪ್ರವೇಶ

ನವೆಂಬರ್ ಒಂಬತ್ತನೇ ತಾರೀಕಿಗೆ ಕರ್ತರ್ ಪುರ್ ಕಾರಿಡಾರ್ ಉದ್ಘಾಟನೆಗೆ ದಿನ ನಿಗದಿ ಆಗಿದೆ. ನಿಗದಿಯಂತೆಯೇ ಉದ್ಘಾಟನೆ ನಡೆಯಲಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಮೊಹ್ಮದ್ ಫೈಸಲ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಉದ್ಘಾಟನೆ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ. ಗುರುನಾನಕ್ ದೇವ್ ಅವರ ಐನೂರಾ ಐವತ್ತನೇ ಜನ್ಮ ವರ್ಷಾಚರಣೆ ನಿಮಿತ್ತ ಕಾರಿಡಾರ್ ಉದ್ಘಾಟಿಸಲು ತೀರ್ಮಾನಿಸಲಾಗಿದೆ.

Pak PM Invites Indias Former PM Manmohan Singh For Kartarpur Corridor Inauguration

ಭಾರತದ ಪಂಜಾಬ್ ನ ಗುರ್ ದಾಸ್ ಪುರ್ ನಲ್ಲಿರುವ ಡೇರಾ ಬಾಬಾ ನಾನಕ್ ಕ್ಷೇತ್ರದಿಂದ ಪಾಕಿಸ್ತಾನದ ಕರ್ತರ್ ಪುರ್ ನಲ್ಲಿ ಇರುವ ದರ್ಬಾರ್ ಸಾಹಿಬ್ ಗೆ ಸಂಪರ್ಕ ಕಲ್ಪಿಸಲಿದೆ. ಭಾರತೀಯ ಯಾತ್ರಿಕರಿಗೆ ವೀಸಾರಹಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತದೆ.

English summary
India former PM Manmohan Singh invited to Kartarpur corridor inauguration in November from Pakistan PM Imran Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X