ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ ಶುಭ ಕೋರುವಲ್ಲೂ ಭಾರತವನ್ನು ಟೀಕಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

|
Google Oneindia Kannada News

ಇಸ್ಲಮಾಬಾದ್, ಮೇ 25: ಈದ್-ಉಲ್-ಫಿತರ್ ಹಬ್ಬದ ಶುಭಾಶಯ ಕೋರುವಲ್ಲೂ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರವನ್ನು ನೆನಪಿಸಿ ಕೊಳ್ಳುತ್ತಾ, ಭಾರತವನ್ನು ಜರಿದಿದ್ದಾರೆ.

Recommended Video

ಬಿಗ್ ಬಾಸ್ ದಿವಾಕರ್ ವಿರುದ್ಧ ದೂರು ಕೊಡಲು ಮುಂದಾದ ಅಹೋರಾತ್ರ..? | Diwakar & Ahoratra

ರಂಜಾನ್ ಹಬ್ಬದ ಪ್ರಯುಕ್ತ ಟ್ವೀಟ್ ಮಾಡಿರುವ ಇಮ್ರಾನ್, "ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ, ಕಾಶ್ಮೀರಿಗಳಿಗೆ ನನ್ನ ಈದ್ ಹಬ್ಬದ ವಿಶೇಷ ಶುಭಾಶಯಗಳು"ಎಂದಿದ್ದಾರೆ.

ಭಾರತದ ಮೇಲೆ ದಾಳಿಗೆ ಪಿಒಕೆ ಪ್ರಧಾನಿಯಿಂದ ಪಾಕಿಸ್ತಾನಕ್ಕೆ ಒತ್ತಾಯಭಾರತದ ಮೇಲೆ ದಾಳಿಗೆ ಪಿಒಕೆ ಪ್ರಧಾನಿಯಿಂದ ಪಾಕಿಸ್ತಾನಕ್ಕೆ ಒತ್ತಾಯ

"ಅಮಾನವೀಯವಾಗಿ ಜಾರಿಯಾಗಿರುವ ಲಾಕ್ ಡೌನ್ ಸಮಯದಲ್ಲಿ ಮತ್ತು ಭಾರತೀಯ ಯೋಧರ ನಿರಂತರ ದಬ್ಬಾಳಿಕೆಯ ನಡುವೆಯೂ, ಕಾಶ್ಮೀರಿಗಳ ತಾಳ್ಮೆ, ಧೈರ್ಯಕ್ಕಾಗಿ, ಅವರಿಗೆಲ್ಲಾ ನನ್ನ ವಿಶೇಷ ಶುಭಾಶಯಗಳು"ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.

Pak PM Imran Khan Eid Tweet: Special Wishes To India Occupied Jammu And Kashmir

ಪಾಕಿಸ್ತಾನಿಗಳು ಕಾಶ್ಮೀರದ ವಿಚಾರವನ್ನು ಪ್ರಸ್ತಾವಿಸುವುದು ಇದೇನು ಮೊದಲಲ್ಲ. ಕೆಲವು ದಿನಳ ಹಿಂದೆ, ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್, ಭಾರತದ ವಿರುದ್ದ ದಾಳಿ ನಡೆಸುವಂತೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಒತ್ತಾಯಿಸಿದ್ದರು.

ಪಿಒಕೆಯನ್ನು ಭಾರತದ್ದು ಎಂದು ಬಿಂಬಿಸುವಂತೆ ಹವಾಮಾನ ವರದಿ ಪ್ರಕಟ ಮಾಡಲಾಗಿದ್ದು, ಭಾರತದ ಈ ಉದ್ಧಟತನಕ್ಕೆ ತಕ್ಕ ಶಾಸ್ತಿ ಮಾಡಬೇಕು. ಕೂಡಲೇ ಭಾರತದ ಮೇಲೆ ಸೇನಾ ದಾಳಿ ನಡೆಸಿ ಎಂದು ಫಾರೂಕ್ ಹೈದರ್, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ಗೆ ಒತ್ತಾಯಿಸಿದ್ದರು.

ಗಿಲ್ಗಿಟ್, ಬಲ್ಟಿಸ್ತಾನ ಚುನಾವಣೆ: ಇಮ್ರಾನ್ ನಡೆಗೆ ಪಿಒಕೆ ಜನರಿಂದ ವಿರೋಧಗಿಲ್ಗಿಟ್, ಬಲ್ಟಿಸ್ತಾನ ಚುನಾವಣೆ: ಇಮ್ರಾನ್ ನಡೆಗೆ ಪಿಒಕೆ ಜನರಿಂದ ವಿರೋಧ

ಗಡಿ ನಿಯಂತ್ರಣ ರೇಖೆಯ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಪ್ರತಿಕ್ರಿಯೆ ಕೊಟ್ಟ ರಾಜಾ ಫಾರೂಕ್ ಹೈದರ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಭಾರತಕ್ಕೆ ಉತ್ತರ ನೀಡಬೇಕಿದೆ. ಕೇವಲ ಮೌಖಿಕ ಹೇಳಿಕೆಗಳು ಮಾತ್ರ ಕೆಲಸ ಮಾಡಲ್ಲ. ನೀವು ಮುಂದೆ ಬಂದು ಭಾರತದ ಮೇಲೆ ಸೇನಾ ದಾಳಿ ನಡೆಸುವಂತೆ ಆದೇಶಿಸಬೇಕು. ಜೊತೆಗೆ ನಿಮ್ಮ ಸಹೋದರ ಹಾಗೂ ಸಹೋದರಿಯರನ್ನು ರಕ್ಷಿಸುವುದು ನಿಮ್ಮ ಕರ್ತವ್ಯ ಎಂದು ಹೇಳಿದರು.

English summary
Pakistan Prime Minister Imran Khan Eid Tweet: Special Wishes To India Occupied Jammu And Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X