ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪರ ನಿಲ್ಲುವ ದೇಶಗಳ ಮೇಲೂ ಅಣುಯುದ್ಧ: ಪಾಕಿಸ್ತಾನದ ಬೆದರಿಕೆ

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 30: ಭಾರತದ ಮೇಲೆ ಮಾತ್ರವಲ್ಲ ಭಾರತವನ್ನು ಬೆಂಬಲಿಸುವ ಎಲ್ಲಾ ದೇಶಗಳ ಮೇಲೂ ಅಣ್ವಸ್ತ್ರ ಪ್ರಯೋಗಿಸುವುದಾಗಿ ಪಾಕಿಸ್ತಾನ ಬೆದರಿಕೆ ಒಡ್ಡಿದೆ.

Pak Minister warns Countries Backing India Of Nuclear war Against Them

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತವನ್ನು ಬೆಂಬಲಿಸುವ ಯಾವುದೇ ದೇಶಗಳ ಮೇಲೆ ಪಾಕಿಸ್ತಾನ ತನ್ನ ಮಿಸೆಲ್ ಗಳನ್ನು ಕಳಿಸಲಿದೆ ಮತ್ತು ಆ ದೇಶವನ್ನು ತನ್ನ ಶತ್ರು ಎಂದೇ ಪರಿಗಣಿಸಲಿದೆ ಎಂದು ಪಾಕಿಸ್ತಾನಿ ಸಚಿವ ಕಾಶ್ಮೀರ ವ್ಯವಹಾರ ಮತ್ತು ಗಿಲಲ್ಗಿಟ್ ಬಲ್ತಿಸ್ತಾನ್ ಸಚಿವ ಅಲಿ ಅಮಿನ್ ಗಂಡಾಪುರ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ವಿಶ್ವದ ಹಲವು ದೇಶಗಳು ಭಾರತದ ಪರ ನಿಂತಿದ್ದನ್ನು ಅವರು ವಿರೋಧಿಸಿದರು.

"ಅಕಸ್ಮಾತ್ ಸಾಂಪ್ರದಾಯಿಕ ಯುದ್ಧ ನಡೆದರೆ ಏನುಬೇಕಾದರೂ ಆಗಬಹುದು.ಭಾರತಕ್ಕಿಂತ ಏಳುಪಟ್ಟು ಸಣ್ಣ ಇರುವ ದೇಶವೊಂದು ಯುದ್ಧ ನಡೆದರೆ ಒಂದು ಶರಣಾಗಬೇಕಾಗುತ್ತದೆ ಅಥವಾ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಗುತ್ತದೆ. ಅಣುಯುದ್ಧ ನಡೆದರೆ ಅದರಲ್ಲಿ ಯಾರೂ ಗೆಲ್ಲುವುದಿಲ್ಲ. ಬದಲಾಗಿ ಎಲ್ಲರೂ ಸಾಯುತ್ತಾರೆ" ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಮೊದಲೇ ಹೇಳಿದ್ದರು.

English summary
Pak Minister warns Countries Backing India Of Nuclear war Against Them
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X