ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಅಣ್ವಸ್ತ್ರ ಯುದ್ಧದ ಬೆದರಿಕೆ ಹಾಕಿದ ಪಾಕ್ ಸಚಿವರು

|
Google Oneindia Kannada News

ಇಸ್ಲಮಾಬಾದ್, ಆಗಸ್ಟ್.21: ಭಾರತದ ವಿರುದ್ಧ ಅಣ್ವಸ್ತ್ರ ಯುದ್ಧ ನಡೆಸುವುದಾಗಿ ಪಾಕಿಸ್ತಾನದ ಫೆಡರಲ್ ಸಚಿವ ಶೇಖ್ ರಷೀದ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳು ಮುಸ್ಲಿಮರ ಪ್ರಾಣವನ್ನು ಕಾಪಾಡುತ್ತವೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಬಳಿಯಿರುವ ಅಣ್ವಸ್ತ್ರಗಳಿಗೆ ಭಾರತದ ಆಯ್ದ ಪ್ರದೇಶಗಳ ಮೇಲೆ ಮಾತ್ರ ದಾಳಿ ಮಾಡುವ ಕ್ಷಮತೆಯಿದೆ. ಪಾಕಿಸ್ತಾನವವು ಭಾರಿ ಪ್ರಮಾಣದ ಅಣ್ವಸ್ತ್ರಗಳನ್ನು ಹೊಂದಿದೆ. ಅವುಗಳು ಚಿಕ್ಕದಾಗಿದ್ದರೂ ಭಾರಿ ಕ್ಷಮತೆಯನ್ನು ಹೊಂದಿವೆ ಎಂದು ಸಚಿವ ಶೇಖ್ ರಷೀದ್ ಹೇಳಿದ್ದಾರೆ.

ಭೇಟಿ ನಿರಾಕರಿಸಿದ ಸೌದಿ ಯುವರಾಜ: ಕ್ಷಮೆಯಾಚಿಸಲು ದೂತನ ಕಳುಹಿಸಿದ ಇಮ್ರಾನ್ ಖಾನ್ ಗೆ ಮುಖಭಂಗ ಭೇಟಿ ನಿರಾಕರಿಸಿದ ಸೌದಿ ಯುವರಾಜ: ಕ್ಷಮೆಯಾಚಿಸಲು ದೂತನ ಕಳುಹಿಸಿದ ಇಮ್ರಾನ್ ಖಾನ್ ಗೆ ಮುಖಭಂಗ

ಸಾಂಪ್ರದಾಯಿಕ ಸಮರದಲ್ಲಿ ಪಾಕಿಸ್ತಾನಕ್ಕೆ ಯಾವುದೇ ನಂಬಿಕೆಯಿಲ್ಲ. ನಮ್ಮ ಬಳಿಯಿರುವ ಅಣ್ವಸ್ತ್ರಗಳು ಭಾರತದ ಅಸ್ಸಾಂವರೆಗೂ ದಾಳಿ ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿವೆ. ಒಂದು ವೇಳೆ ಯುದ್ಧವೇನಾದರೂ ಸಂಭವಿಸಿದ್ದಲ್ಲಿ ಅದು ಕೊನೆಯ ಸಮರವಾಗಲಿದೆ ಎಂದು ಶೇಖ್ ರಷೀದ್ ತಿಳಿಸಿದ್ದಾರೆ.

Pak Minister Threatens India With Nuclear War, Says It Won’t Harm Muslims

ಪಾಕಿಸ್ತಾನ ಸಚಿವರ ಬೆದರಿಕೆ ಮೊದಲೇನಲ್ಲ:

ಪಾಕಿಸ್ತಾನ ಸಚಿವ ಶೇಖ್ ರಷೀದ್, ಭಾರತದ ಜೊತೆಗೆ ಅಣ್ವಸ್ತ್ರ ಯುದ್ಧ ಮಾಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೂಡಾ ಇದೇ ಸಚಿವರು ಭಾರತದ ವಿರುದ್ಧ ಯುದ್ಧ ಮಾಡುವುದಾಗಿ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ 2019ರಲ್ಲಿ ಸ್ವತಃ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಭಾರತದ ಜೊತೆಗೆ ಅಣುಯುದ್ಧ ನಡೆಸುವುದಾಗಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದರು.

English summary
Pakistan Minister Sheikh Rashid Threatens India With Nuclear War, Says It Won’t Harm Muslims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X