ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಉಗ್ರ ಮಸೂದ್ ಅಜರ್ ಆಸ್ತಿ ಮುಟ್ಟುಗೋಲು ಹಾಕಿದ ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್ , ಮೇ 3 : ಕಳೆದ ಎರಡು ದಿಗಳ ಹಿಂದೆ ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಪಟ್ಟ ಕಟ್ಟಿಸಿಕೊಂಡ ಜೈಷ್ ಎ ಮೊಹಮ್ಮದ್ ಸಂಘಟನೆ ಉಗ್ರ ಮಸೂದ್ ಅಜರ್ ಆಸ್ತಿಯನ್ನು ಪಾಕಿಸ್ತಾನ ಮುಟ್ಟುಗೋಲು ಹಾಕಿಕೊಂಡಿದೆ.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್ ವಿರುದ್ಧ ನಾಲ್ಕು ಬಾರಿ ನಿರ್ಣಯಗಳಾಗಿದ್ದವು. ಪ್ರತೀ ಬಾರಿಯೂ ಚೀನಾ ಪಾಕಿಸ್ತಾನದ ಪರವಾಗಿ ನಿಂತು ಪಾಕಿಸ್ತಾನವನ್ನು ರಕ್ಷಿಸುತ್ತಿತ್ತು.

ಭಾರತಕ್ಕೆ ಜಯ, ಪಾಕಿಸ್ತಾನಕ್ಕೆ ಮುಖಭಂಗ: ಮಸೂದ್ ಅಜರ್ ಜಾಗತಿಕ ಉಗ್ರ ಭಾರತಕ್ಕೆ ಜಯ, ಪಾಕಿಸ್ತಾನಕ್ಕೆ ಮುಖಭಂಗ: ಮಸೂದ್ ಅಜರ್ ಜಾಗತಿಕ ಉಗ್ರ

ಆದರೆ ಈ ಬಾರಿ ಚೀನಾವು ಬೆಂಬಲ ಹಿಂಪಡೆದ ಕಾರಣ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ಸಾದ್ಯವಾಯಿತು. ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 30ಕ್ಕೂ ಹೆಚ್ಚು ಸೈನಿಕರನ್ನು ಬಲಿತೆಗೆದುಕೊಂಡ ಘಟನೆ ನಡೆದ ಬಳಿಕ ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕ ದೇಶಗಳು ಮಸೂದ್ ಅಜರ್​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವವನ್ನು ಮತ್ತೊಮ್ಮೆ ಮುಂದಿಟ್ಟಿದ್ದವು.

Pak Issues Order To Freeze Assets of Masood Azhar

ಮಸೂದ್ ಅಜರ್​ನ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಪಾಕಿಸ್ತಾನ ಸರ್ಕಾರ ಆದೇಶಿಸಿದೆ. ಅಲ್ಲದೆ, ಆತನ ವಿದೇಶಿ ಪ್ರಯಾಣದ ಮೇಲೆ ನಿಷೇಧ ಹೇರಲಾಗಿದೆ. ವಿಶ್ವಸಂಸ್ಥೆ ಅಜರ್​ ಮೇಲೆ ನಿಷೇಧ ಹೇರಿರುವದರಿಂದ ಆತನಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಹಾಗೂ ಕೊಂಡುಕೊಳ್ಳುವುದರ ಮೇಲೂ ನಿಷೇಧ ಜಾರಿಯಾಗಿದೆ. ಅಜರ್​ನ ವಿರುದ್ಧ ನಾವು ಸಂಪೂರ್ಣವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಕಿಸ್ತಾನ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಚೀನಾದ ಮನವೊಲಿಸಲು ಭಾರತ ಸಾಕಷ್ಟು ಪ್ರಯತ್ನ ಮಾಡಿತು. ಫ್ರಾನ್ಸ್ ಮತ್ತು ಅಮೆರಿಕ ದೇಶಗಳೂ ಚೀನಾ ಮೇಲೆ ಒತ್ತಡ ಹಾಕಿದವು. ಹೀಗಾಗಿ, ಚೀನಾ ತನ್ನ ನಿರ್ಧಾರವನ್ನು ಬದಲಿಸಿತು.

ಈ ಮಂಡಳಿಯಲ್ಲಿ ಒಟ್ಟು 15 ಸದಸ್ಯ ರಾಷ್ಟ್ರಗಳಿರುತ್ತವೆ. ಅವುಗಳ ಪೈಕಿ ರಷ್ಯಾ, ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ಈ ಐದು ರಾಷ್ಟ್ರಗಳು ಖಾಯಂ ಸದಸ್ಯತ್ವ ಹೊಂದಿವೆ. ಉಳಿದ 10 ಸದಸ್ಯರನ್ನು ಪ್ರಾದೇಶಿಕತೆ ಆಧಾರದ ಮೇಲೆ ಆವರ್ತನೆ ಮಾಡಲಾಗುತ್ತದೆ.

ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಪಾಲನೆಯ ಜವಾಬ್ದಾರಿ ಇದಕ್ಕಿದೆ. ವಿಶ್ವ ಸಂಸ್ಥೆಗೆ ಹೊಸ ಸದಸ್ಯ ರಾಷ್ಟ್ರಗಳನ್ನು ಸೇರಿಸಲು ಅಥವಾ ಅದರ ನಿಯಮಾವಳಿಯಲ್ಲಿ ಏನಾದರೂ ಬದಲಾವಣೆ ಮಾಡಲು ಈ ಮಂಡಳಿಯ ಅನುಮೋದನೆ ಅಗತ್ಯವಾಗಿರುತ್ತದೆ.

English summary
Pakistan has issued an official order to freeze the assets and impose travel ban on Jaish-e-Mohammed chief Masood Azhar after the United Nations declared him a "global terrorist".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X