ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್, ಜೂನ್ 25: ಪಾಕಿಸ್ತಾನವು ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗವನ್ನು ಅನುಭವಿಸಿದೆ.

ಎಫ್ಎಟಿಎಎಫ್ ಪಾಕಿಸ್ತಾನವನ್ನು ಮತ್ತೆ ಬೂದು(ಗ್ರೇ) ಪಟ್ಟಿಯಲ್ಲೇ ಮುಂದುವರೆಸಲು ತೀರ್ಮಾನಿಸಿರುವುದು ಪಾಕಿಸ್ತಾನದ ಮಟ್ಟಿಗೆ ಜಾಗತಿಕ ಮಟ್ಟದಲ್ಲಿ ತೀವ್ರ ಹಿನ್ನೆಡೆಯಾಗಿ ಪರಿಣಮಿಸಿದೆ.

3 ತಿಂಗಳಲ್ಲಿ ಭಯೋತ್ಪಾದನೆ ನಿಯಂತ್ರಿಸಿ, ಇಲ್ಲದಿದ್ದರೆ...: ಪಾಕಿಸ್ತಾನಕ್ಕೆ ಎಚ್ಚರಿಕೆ3 ತಿಂಗಳಲ್ಲಿ ಭಯೋತ್ಪಾದನೆ ನಿಯಂತ್ರಿಸಿ, ಇಲ್ಲದಿದ್ದರೆ...: ಪಾಕಿಸ್ತಾನಕ್ಕೆ ಎಚ್ಚರಿಕೆ

ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಜೈಶ್-ಎ-ಮೊಹಮ್ಮದ್ (ಜೆಇಎಂ) ಸೇರಿದಂತೆ ಹಲವು ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ಸಿಗುವುದನ್ನು ಪಾಕಿಸ್ತಾನ ಸಮರ್ಥವಾಗಿ ತಡೆಗಟ್ಟಿಲ್ಲದ ಕಾರಣ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಉಳಿಸಲಾಗುತ್ತಿದೆ ಎಂದು ಎಫ್ಎಟಿಎಫ್ ತಿಳಿಸಿದೆ.

Pak Fails To Check Terror Group Funding, Stays Grey List

ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದನ್ನು ತಡೆಗಟ್ಟಲು ಇರುವ ಜಾಗತಿಕ ಕಣ್ಗಾವಲು ಸಂಸ್ಥೆ (ಎಫ್ ಎಟಿಎಫ್)ಯಿಂದ ಮತ್ತೆ ಪಾಕಿಸ್ತಾನಕ್ಕೆ ಮುಖಭಂಗ ಉಂಟಾಗಿದೆ.

ಜೂ.25 ರಂದು ನಡೆದ ಸಭೆಯಲ್ಲಿ ಈ ಎಫ್ಎಟಿಎಫ್ ಈ ನಿರ್ಧಾರ ಪ್ರಕಟಿಸಿದ್ದು, ಅಕ್ಟೋಬರ್ ನಲ್ಲಿ ನಡೆಯಲಿರುವ ಮುಂದಿನ ಸಭೆಯವರೆಗೂ ಈ ಆದೇಶ ಅನ್ವಯವಾಗಲಿದೆ. ಪಾಕಿಸ್ತಾನ ಭಯೋತ್ಪಾದಕರ ಪಾಲಿಗೆ ಸ್ವರ್ಗವಾಗಿದೆ ಎಂಬ ಅಮೆರಿಕ ಹೇಳಿಕೆಯ ಬೆನ್ನಲ್ಲೇ ಎಫ್ಎಟಿಎಫ್ ಈ ಆದೇಶ ಹೊರಡಿಸಿದೆ.

ಭಯೋತ್ಪಾದ ಸಂಘಟನೆಗಳಿಗೆ ಹಾಗೂ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಇಸ್ಲಾಮಾಬಾದ್‌ಗೆ ನಿರ್ದೇಶನ ನೀಡಿದೆ.

ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಗಡುವು ನೀಡಿತ್ತು. ಈ ಗಡುವಿನೊಳಗೆ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲ ಹತ್ತಿಕ್ಕದಿದ್ದರೆ, ಕಪ್ಪು ಪಟ್ಟಿಗೆ ಸೇರಿಸುವುದಾಗಿ ಹೇಳಿತ್ತು. ಈ ಕುರಿತಂತೆ ಪಾಕ್‌ ಆಸಕ್ತಿ ತೋರಿಲ್ಲದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಪ್ಪು ಪಟ್ಟಿ ಸೇರುವ ಎಲ್ಲ ಲಕ್ಷಣಗಳೂ ಇವೆ.

English summary
The global terror financing watchdog, FATF, on Wednesday decided to keep Pakistan in the "Grey List" as it has failed to check flow of money to terror groups like the LeT and the JeM, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X