ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೇಟಿ ನಿರಾಕರಿಸಿದ ಸೌದಿ ಯುವರಾಜ: ಕ್ಷಮೆಯಾಚಿಸಲು ದೂತನ ಕಳುಹಿಸಿದ ಇಮ್ರಾನ್ ಖಾನ್ ಗೆ ಮುಖಭಂಗ

|
Google Oneindia Kannada News

ರಿಯಾದ್, ಆ 20: ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾಗಲು ಹೋದ, ಪಾಕಿಸ್ತಾನದ ನಿಯೋಗಕ್ಕೆ ಮುಖಭಂಗವಾಗಿದೆ.

ಜಮ್ಮು-ಕಾಶ್ಮೀರ ತನ್ನದು ಎಂದ ಪಾಕಿಸ್ತಾನಕ್ಕೆ ಭಾರತದ ಉತ್ತರವೇನು? ಜಮ್ಮು-ಕಾಶ್ಮೀರ ತನ್ನದು ಎಂದ ಪಾಕಿಸ್ತಾನಕ್ಕೆ ಭಾರತದ ಉತ್ತರವೇನು?

ತಮ್ಮ ಭೇಟಿ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಯುವರಾಜ ಸಲ್ಮಾನ್, ತಮ್ಮ ಪರವಾಗಿ ದೇಶದ ಉಪ ರಕ್ಷಣಾ ಸಚಿವ ಮತ್ತು ಸಹೋದರ ಶೇಖ್ ಖಾಲಿದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾದರೆ ಸಾಕು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖ್ವಾಮರ್ ಜಾವೇದ್ ಬಾಜ್ವಾ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಕ್ಷಮಾ ಸಂದೇಶವನ್ನು ಹೊತ್ತು ತಂದಿದ್ದರು. ಈಗ, ಯುವರಾಜರನ್ನು ನೇರವಾಗಿ ಭೇಟಿಯಾಗಲು ಅವಕಾಶ ಸಿಗದಿದ್ದರಿಂದ, ಇಮ್ರಾನ್ ಮುಜುಗರಕ್ಕೀಡಾಗಿದ್ದಾರೆ.

 ಸಿಟ್ಟಾಗಿರುವ ಸೌದಿ ಅರೇಬಿಯಾವನ್ನ ಶಾಂತಗೊಳಿಸಲು ಪಾಕ್ ಪ್ರಯತ್ನ: ಸೇನಾ ಮುಖ್ಯಸ್ಥ ಸೌದಿಗೆ ಭೇಟಿ ಸಿಟ್ಟಾಗಿರುವ ಸೌದಿ ಅರೇಬಿಯಾವನ್ನ ಶಾಂತಗೊಳಿಸಲು ಪಾಕ್ ಪ್ರಯತ್ನ: ಸೇನಾ ಮುಖ್ಯಸ್ಥ ಸೌದಿಗೆ ಭೇಟಿ

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ, ಪಾಕಿಸ್ತಾನದ ವಿದೇಶಾಂಗ ಸಚಿವರು ನೀಡಿದ ಹೇಳಿಕೆ, ಸೌದಿ ಯುವರಾಜನ ಸಿಟ್ಟಿಗೆ ಕಾರಣವಾಗಿದೆ. ಏನು ಪಾಕ್ ವಿದೇಶಾಂಗ ಸಚಿವರು ನೀಡಿದ್ದ ಹೇಳಿಕೆ?

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖ್ವಾಮರ್ ಜಾವೇದ್ ಬಾಜ್ವಾ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖ್ವಾಮರ್ ಜಾವೇದ್ ಬಾಜ್ವಾ

ಯುವರಾಜ ಸಲ್ಮಾನ್ ಜೊತೆಗಿನ ಸಂಬಂಧ ಹಳಸದಂತೆ, ಸೌಹಾರ್ದಯುತವಾಗಿ ಮಾತುಕತೆ ನಡೆಸಿ, ಕ್ಷಮೆ ಕೇಳಿ ಬರುವಂತೆ, ಇಮ್ರಾನ್ ಖಾನ್, ಸೇನಾ ಮುಖ್ಯಸ್ಥ ಬಾಜ್ವಾ ಮತ್ತು ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್, ರಿಯಾದ್ ಗೆ ಕಳುಹಿಸಿದ್ದರು.

ಪಾಕಿಸ್ತಾನದ ಕ್ಷಮೆಯನ್ನು ಒಪ್ಪಲು ಸಾಧ್ಯವಿಲ್ಲ

ಪಾಕಿಸ್ತಾನದ ಕ್ಷಮೆಯನ್ನು ಒಪ್ಪಲು ಸಾಧ್ಯವಿಲ್ಲ

ಜನರಲ್ ಬಾಜ್ವಾ ಜೊತೆ ನಡೆಸಿದ ಭೇಟಿಯ ವೇಳೆ, ಪಾಕಿಸ್ತಾನದ ಕ್ಷಮೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸೌದಿ ರಕ್ಷಣಾ ಸಚಿವರು ನೇರವಾಗಿ ಪ್ರತಿಕ್ರಿಯಿಸಿದ್ದಾರೆಂದು ಹೇಳಲಾಗುತ್ತಿದೆ. ಹಾಗಾಗಿ, ಬಂದ ದಾರಿಗೆ ಸುಂಕವಿಲ್ಲದಂತೆ, ಪಾಕ್ ನಿಯೋಗ ವಾಪಸ್ ತೆರಳಿದೆ. ಇದರಿಂದಾಗಿ, ಸೌದಿ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಇನ್ನಷ್ಟು ಹಳಸುವ ಸಾಧ್ಯತೆಯಿದೆ.

ಪಾಕ್ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ

ಪಾಕ್ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ

ಕಾಶ್ಮೀರ ವಿಚಾರವನ್ನು ಅಂತರಾಷ್ಟ್ರೀಯಗೊಳಿಸಲು ಪಾಕಿಸ್ತಾನ ಪ್ರಯತ್ನ ನಡೆಸುತ್ತಲೇ ಇದೆ. ತೈಲ ಉತ್ಪಾದನಾ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಸಭೆಯನ್ನು ಈ ಸಂಬಂಧ ಚರ್ಚಿಸಲು ಕರೆಯಬೇಕು ಎಂದು ಪಾಕ್ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ ಒತ್ತಾಯಿಸಿದ್ದರು. ಸೌದಿ ಅರೇಬಿಯಾ ನೇತೃತ್ವದಲ್ಲಿರುವ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಕಾಶ್ಮೀರ ವಿಚಾರವಾಗಿ ಪರಿಣಾಮಕಾರಿಯಾಗಿ ಧ್ವನಿ ಎತ್ತುತ್ತಿಲ್ಲ ಎಂದು ಖುರೇಷಿ ಆರೋಪಿಸಿದ್ದರು.

ಯುವರಾಜನ ಕ್ಷಮೆ ಕೇಳಲು ಇಮ್ರಾನ್, ಬಾಜ್ವಾ ಅವರನ್ನು ಕಳುಹಿಸಿದ್ದರು

ಯುವರಾಜನ ಕ್ಷಮೆ ಕೇಳಲು ಇಮ್ರಾನ್, ಬಾಜ್ವಾ ಅವರನ್ನು ಕಳುಹಿಸಿದ್ದರು

ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧವಾಗಿ ಯಾರೂ ಧ್ವನಿ ಎತ್ತುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಐಸಿಯ ಒಂದು ಗುಂಪಿನ ನೇತೃತ್ವವನ್ನು ತಾನೇ ವಹಿಸಿಕೊಳ್ಳುವುದಾಗಿ ಪಾಕಿಸ್ತಾನ, ಸೌದಿ ಅರೇಬಿಯಾಗೆ ಸವಾಲಾಕಿತ್ತು. ಇದು, ಯುವರಾಜ ಸಲ್ಮಾನ್ ಕೆಂಗಣ್ಣಿಗೆ ಗುರಿಯಾಗಿತ್ತು. ಜೊತೆಗೆ, ಪಾಕಿಸ್ತಾನಕ್ಕೆ ಇನ್ನು ಮುಂದೆ ಆರ್ಥಿಕ ಸಹಾಯ ಅಥವಾ ತೈಲ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಹೇಳಿತ್ತು.ಇದರಿಂದ ಕಂಗಾಲಾದ ಇಮ್ರಾನ್, ಯುವರಾಜನ ಕ್ಷಮೆ ಕೇಳಲು ಬಾಜ್ವಾ ಅವರನ್ನು ರಿಯಾದ್ ಗೆ ಕಳುಹಿಸಿದ್ದರು.

English summary
Pak Army Chief Gen Bajwa’s Apology Doesn’t Help, Gets A Royal Snub In Saudi Kingdom,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X