• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವೆಂಬರ್ 15 ರಂದು ಗಿಲ್ಗಿಟ್, ಬಾಲ್ಟಿಸ್ತಾನ ಶಾಸನಸಭೆಗೆ ಚುನಾವಣೆ

|

ಇಸ್ಲಾಮಾಬಾದ್, ಸೆಪ್ಟೆಂಬರ್ 24: ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ ಶಾಸನಸಭೆಗೆ ನವೆಂಬರ್ 15 ರಂದು ಪಾಕಿಸ್ತಾನ ಚುನಾವಣೆ ಘೋಷಣೆ ಮಾಡಿದೆ.

ಭಾರತದ ತೀವ್ರ ಆಕ್ಷೇಪದ ನಡುವೆಯೂ ಪಾಕಿಸ್ತಾನವು ಗಿಲ್ಗಿಟ್‌- ಬಾಲ್ಟಿಸ್ತಾನ ಶಾಸನಸಭೆಗೆ ಚುನಾವಣಾ ದಿನಾಂಕ ಘೋಷಿಸಿದೆ. ಪಾಕ್‌ ಅಧ್ಯಕ್ಷ ಆರಿಫ್‌ ಅಲ್ವಿ ಅವರು ಚುನಾವಣಾ ದಿನಾಂಕ ನಿಗದಿಪಡಿಸಿ ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ. ಈ ಪ್ರದೇಶಕ್ಕೆ ಹಿಂದೆ ನಿಗದಿಯಾಗಿದ್ದ (ಆಗಸ್ಟ್‌ 18) ಚುನಾವಣೆಯು, ಕೊವಿಡ್‌-19 ವ್ಯಾಪಿಸುತ್ತಿದ್ದ ಕಾರಣಕ್ಕೆ ಮುಂದೂಡಲಾಗಿತ್ತು.

ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪರಿಪೂರ್ಣ ಪ್ರಾಂತ್ಯದ ಸ್ಥಾನಮಾನ ನೀಡಲು ಪಾಕ್ ತೀರ್ಮಾನ

'ಪರಿಪೂರ್ಣ ಪ್ರಾಂತ್ಯದ ಸ್ಥಾನಪಡೆಯಲಿರುವ ಗಿಲ್ಗಿಟ್‌-ಬಾಲ್ಟಿಸ್ತಾನ್ ಪ್ರದೇಶವು ರಾಷ್ಟ್ರೀಯ ಅಸೆಂಬ್ಲಿ ಮತ್ತು ಸೆನೆಟ್ ಸೇರಿದಂತೆ ಎಲ್ಲ ರೀತಿಯ ಸಾಂವಿಧಾನಿಕ ಸಂಸ್ಥೆಗಳ ಪ್ರಾತಿನಿಧ್ಯವನ್ನು ಪಡೆಯಲಿದೆ' ಎಂದು ಗಂಡಾಪುರ್ ಹೇಳಿದ್ದಾರೆ.

'ಪಾಕಿಸ್ತಾನ ಸರ್ಕಾರ ಎಲ್ಲ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಗಿಲ್ಗಿಟ್- ಬಾಲ್ಟಿಸ್ತಾನ ಪ್ರಾಂತ್ಯಕ್ಕೆ ತಾತ್ವಿಕವಾಗಿ ಸಾಂವಿಧಾನಿಕ ಹಕ್ಕಗಳನ್ನು ನೀಡಲು ನಿರ್ಧಿರಿಸಿದೆ' ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದರು.

ಈಗ 'ಗಿಲ್ಗಿಟ್-ಬಾಲ್ಟಿಸ್ತಾನ್‌ ಪ್ರದೇಶಗಳನ್ನು ಪಾಕಿಸ್ತಾನ ಅಕ್ರಮವಾಗಿ ಅತಿಕ್ರಮಿಸಿಕೊಂಡಿದೆ. ಹೀಗಾಗಿ ಆ ಪ್ರದೇಶಗಳ ಮೇಲೆ ಪಾಕಿಸ್ತಾನಕ್ಕಾಗಲೀ ಆ ದೇಶದ ನ್ಯಾಯಾಂಗಕ್ಕಾಗಿ ಯಾವುದೇ ಹಕ್ಕಿಲ್ಲ ಎಂದು ಭಾರತ ಪುನರುಚ್ಚರಿಸಿದೆ.

ಈ ಹಿಂದೆ ' ಗಿಲ್ಗಿಟ್-ಬಾಲ್ಟಿಸ್ತಾನ ಸೇರಿದಂತೆ ಇಡೀ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದ್ದು, ಇಲ್ಲಿ ಯಾವುದೇ ರೀತಿಯ ಕಾನೂನು ಬದಲಾವಣೆಯಂತಹ ಪ್ರಯತ್ನಗಳಳನ್ನು ನಡೆಸುವಂತಿಲ್ಲ' ಎಂದು ಭಾರತ, ಪಾಕಿಸ್ತಾನಕ್ಕೆ ಹೇಳಿತ್ತು.

ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ ಭಾರತದ ಅವಿಭಾಜ್ಯ ಅಂಗ

ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ ಭಾರತದ ಅವಿಭಾಜ್ಯ ಅಂಗ

‘ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳನ್ನು ಒಳಗೊಂಡಂತೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗ. ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಈ ಪ್ರದೇಶಗಳ ಮೇಲೆ ಪಾಕಿಸ್ತಾನ ಸರ್ಕಾರ ಅಥವಾ ಅದರ ನ್ಯಾಯಾಂಗಕ್ಕೆ ಯಾವುದೇ ಅಧಿಕಾರ ಅಥವಾ ಹಕ್ಕು ಇರುವುದಿಲ್ಲ' ಎಂದು ಭಾರತ ಹೇಳಿದೆ.

ವಿಷಯ ಚರ್ಚೆಗೆ ಬಂದಿತ್ತು

ವಿಷಯ ಚರ್ಚೆಗೆ ಬಂದಿತ್ತು

ಸೆಪ್ಟೆಂಬರ್ 16 ರಂದು ವಿರೋಧ ಪಕ್ಷದ ನಾಯಕರು ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೆದ್ ಬಜ್ವಾ ಅವರ ನಡುವಿನ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಬಂದಿತ್ತು.

24 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ

24 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ

ಶಾಸನಸಭೆಯ ಒಟ್ಟು 33 ಸ್ಥಾನಗಳ ಪೈಕಿ 24 ಸ್ಥಾನಗಳಿಗೆ ಚುನಾವಣೆ ನಡೆಯಲಿವೆ. ಆರು ಸ್ಥಾನಗಳು ತಂತ್ರಜ್ಞರಿಗೆ ಮತ್ತು ಮೂರು ಸ್ಥಾನಗಳು ಮಹಿಳೆಯರಿಗೆ ಮೀಸಲಿವೆ. ಸದಸ್ಯರ ಅಧಿಕಾರ ಅವಧಿ ಐದು ವರ್ಷ. ಕಳೆದ ಶಾಸನ ಸಭೆಯ ಅವಧಿ ಜೂನ್‌ 24ಕ್ಕೆ ಕೊನೆಗೊಂಡಿತ್ತು. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಆಡಳಿತ ನಡೆಸಿತ್ತು.

ಪೂರ್ಣ ಪ್ರಮಾಣದ ಪ್ರಾಂತ್ಯದ ಸ್ಥಾನಮಾನ

ಪೂರ್ಣ ಪ್ರಮಾಣದ ಪ್ರಾಂತ್ಯದ ಸ್ಥಾನಮಾನ

ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪೂರ್ಣ ಪ್ರಮಾಣ ಪ್ರಾಂತ್ಯದ ಸ್ಥಾನಮಾನ ನೀಡುವ ಸಂಬಂಧ ಪಾಕ್‌ನಲ್ಲಿ ಚರ್ಚೆಗಳು ನಡೆಯತ್ತಿರುವ ಬೆನ್ನಲ್ಲೇ ಚುನಾವಣಾ ದಿನಾಂಕ ಘೋಷಿಸಲಾಗಿದೆ.

English summary
Pakistan has announced that the once-postponed election for the legislative assembly of Gilgit-Baltistan will be held on November 15, amidst India’s objection to Islamabad’s moves in the strategically-located region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X