• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನ್‌ಗೆ ಗೋಧಿ, ಔಷಧ ಸಾಗಿಸಲು ಭಾರತಕ್ಕೆ ಪಾಕ್ ಒಪ್ಪಿಗೆ

|
Google Oneindia Kannada News

ನವದೆಹಲಿ, ಡಿಸೆಂಬರ್ 04: ವಾಘಾ ಗಡಿ ಮೂಲಕ ಅಫ್ಘಾನಿಸ್ತಾನಕ್ಕೆ ಗೋಧಿ ಹಾಗೂ ಜೀವರಕ್ಷಕ ಔಷಧ ಸಾಗಿಸಲು ಪಾಕಿಸ್ತಾನವು ಭಾರತಕ್ಕೆ ಒಪ್ಪಿಗೆ ನೀಡಿದೆ.

ಅಪ್ಘನ್ ಟ್ರಕ್ ಗಳಲ್ಲಿ 50 ಸಾವಿರ ಮೆಟ್ರಿಕ್ ಟನ್ ಗೋಧಿ ಮತ್ತು ಜೀವ ರಕ್ಷಕ ಔಷಧವನ್ನು ಭಾರತ ಸಾಗಿಸಲು ಪಾಕಿಸ್ತಾನ ಶುಕ್ರವಾರ ಒಪ್ಪಿಕೊಂಡಿದೆ.

ಈ ಸಾಗಾಣಿಕೆ ವಿಚಾರವಾಗಿ ಉಭಯ ದೇಶಗಳ ನಡುವೆ ವಿವಾದ ತಲೆದೋರಿತ್ತು. ಮಾನವೀಯ ಉದ್ದೇಶಗಳಿಗಾಗಿ ನೆರೆಯ ಅಫ್ಘಾನಿಸ್ತಾನಕ್ಕೆ ತನ್ನ ನೆಲದ ಮೂಲಕ ಗೋಧಿ ಹಾಗೂ ಜೀವ ರಕ್ಷಕ ಸಾಗಿಸಲು ಅವಕಾಶ ಮಾಡಿಕೊಡುವುದಾಗಿ ಪಾಕಿಸ್ತಾನ ಕಳೆದ ವಾರ ಭಾರತಕ್ಕೆ ಔಪಚಾರಿಕವಾಗಿ ತಿಳಿಸಿತ್ತು.

ಆದಾಗ್ಯೂ, ಗುರುವಾರ ಉಲ್ಟಾ ಹೊಡೆದಿತ್ತು. ಇದೀಗ ಅಪ್ಘನ್ ಟ್ರಕ್ ಗಳಲ್ಲಿ ಅಪ್ಘಾನಿಸ್ತಾನದಿಂದ ಭಾರತದಿಂದ ಗೋಧಿ ಮತ್ತು ಜೀವ ರಕ್ಷಕ ಸಾಗಿಸಲು ಒಪ್ಪಿಕೊಂಡಿರುವುದಾಗಿ ಪಾಕಿಸ್ತಾನ ವಿದೇಶಾಂಗ ಇಲಾಖೆ ಶುಕ್ರವಾರ ಹೇಳಿದೆ.

ತ್ವರಿತಗತಿಯಲ್ಲಿ ಮಾನವೀಯ ನೆರವನ್ನು ಪೂರೈಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಪಾಕ್ ವಿದೇಶಾಂಗ ಇಲಾಖೆ ತಿಳಿಸಿದೆ.

ಪಾಕ್ ನೆಲದ ಮೂಲಕ ಅಫ್ಘಾನಿಸ್ತಾನಕ್ಕೆ ಗೋಧಿ ಹಾಗೂ ಜೀವ ರಕ್ಷಕವನ್ನು ಸಾಗಿಸಲು ಮಾರ್ಗವನ್ನು ಅಂತಿಮಗೊಳಿಸಲು ಪಾಕಿಸ್ತಾನದೊಂದಿಗೆ ಚರ್ಚೆ ನಡೆಯುತ್ತಿರುವುದಾಗಿ ಗುರುವಾರ ಭಾರತ ಹೇಳಿತ್ತು.

ಮಾನವೀಯತೆ ನೆಲೆಯಲ್ಲಿ ನೆರವು ನೀಡುವುದಕ್ಕೆ ಯಾವುದೇ ಷರತ್ತನ್ನು ಹಾಕಬಾರದು ಎಂದಿತ್ತು.ಮಾನವೀಯ ನೆರವಿಗೆ ಷರತ್ತು ಹಾಕಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು.

ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಬೆನ್ನಲ್ಲೇ ಆ ದೇಶದೊಂದಿಗೆ ಭಾರತಕ್ಕಿದ್ದ ಎಲ್ಲಾ ಆಮದು, ರಫ್ತು ವ್ಯವಹಾರ ಸ್ಥಗಿತಗೊಂಡಿತ್ತು. ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇದ್ದ ಸರಕು ಸಾಗಣೆಯ ಮಾರ್ಗವನ್ನು ತಾಲಿಬಾನ್ ನಿಲ್ಲಿಸಿದೆ.

ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳು ಪಾಕಿಸ್ತಾನದ ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿದ್ದವು. ಇದೀಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮಧ್ಯೆ ಸರಕು ಸಾಗಣೆಯನ್ನು ತಾಲಿಬಾನ್ ನಿಲ್ಲಿಸಿದೆ. ಪರಿಣಾಮವಾಗಿ ಭಾರತಕ್ಕೂ ಆಮದಾಗುವುದು ನಿಂತಿದೆ ಎಂದು ಅಜಯ್ ಸಹಾಯ್ ತಿಳಿಸಿದ್ದರು.

ಅಫ್ಘಾನಿಸ್ತಾನದೊಂದಿಗೆ ಭಾರತ ದೀರ್ಘ ಕಾಲದಿಂದ ವ್ಯಾವಹಾರಿಕ ಸಂಬಂಧ ಹೊಂದಿದೆ. ಆಫ್ಘಾನಿಸ್ತಾನದೊಂದಿಗೆ ಅತಿ ಹೆಚ್ಚು ವ್ಯವಹಾರ ಹೊಂದಿರುವ ದೇಶಗಳಲ್ಲಿ ಭಾರತವೂ ಇದೆ.

2021ರಲ್ಲಿ ಅಫ್ಘಾನಿಸ್ತಾನಕ್ಕೆ ಭಾರತದಿಂದ ರಫ್ತಾದ ಸರಕುಗಳ ಮೌಲ್ಯ 835 ಮಿಲಿಯನ್ ಡಾಲರ್ (ಸುಮಾರು 6,200 ಕೋಟಿ ರೂಪಾಯಿ) ಇದೆ. ಇದೇ ಅವಧಿಯಲ್ಲಿ 510 ಮಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನ ನಾವು ಆಮದು ಮಾಡಿಕೊಂಡಿದ್ದೇವೆ.

ಈ ಆಮದು ರಫ್ತು ವ್ಯವಹಾರದ ಜೊತೆಗೆ ನಾವು ಅಫ್ಘಾನಿಸ್ತಾನದಲ್ಲಿ ಬಹಳಷ್ಟು ಹೂಡಿಕೆ ಮಾಡಿದ್ದೇವೆ. 400ಕ್ಕೂ ಹೆಚ್ಚು ಯೋಜನೆಗಳಲ್ಲಿ ಭಾರತ 3 ಬಿಲಿಯನ್ ಡಾಲರ್ (ಸುಮಾರು 22 ಸಾವಿರ ಕೋಟಿ ರೂಪಾಯಿ) ಹಣವನ್ನು ಹೂಡಿಕೆ ಮಾಡಿದೆ ಎಂದು ಎಫ್ ಐಇಒ ಡಿಜಿ ಡಾ. ಅಜಯ್ ಸಹಾಯ್ ಮಾಹಿತಿ ನೀಡಿದ್ದರು,

ಅಫ್ಘಾನಿಸ್ತಾನ ಮತ್ತು ಭಾರತದ ಮಧ್ಯೆ ಸರಕು ಸಾಗಣೆಗೆ ವಿವಿಧ ಮಾರ್ಗಗಳಿವೆ. ಪಾಕಿಸ್ತಾನದ ಟ್ರಾನ್ಸಿಟ್ ರೂಟ್ ಮೂಲಕ ಸಾಗುವ ಮಾರ್ಗ ಪ್ರಮುಖವಾದುದು. ಹಾಗೆಯೇ, ಇಂಟರ್ ನ್ಯಾಷನಲ್ ನಾರ್ಥ್-ಸೌಥ್ ಟ್ರಾನ್ಸ್ ಪೋರ್ಟ್ ಕಾರಿಡಾರ್ ಮಾರ್ಗ ಹಾಗೂ ದುಬೈ ಮೂಲಕ ಹೋಗುವ ಮಾರ್ಗಗಳೂ ಇವೆ. ಈ ಎರಡು ಮಾರ್ಗಗಳಲ್ಲಿ ಸದ್ಯಕ್ಕೆ ಭಾರತದ ಸರಕುಗಳು ಆಫ್ಘಾನಿಸ್ತಾನಕ್ಕೆ ಸಾಗಣೆ ಆಗುತ್ತಿವೆ.

ಆದರೆ, ಪಾಕಿಸ್ತಾನದ ಮೂಲಕ ಹೋಗುವ ಟ್ರಾನ್ಸಿಟ್ ರೂಟ್ ಅನ್ನು ತಾಲಿಬಾನ್ ಸ್ಥಗಿತಗೊಳಿಸಿದೆ. ಅಫ್ಘಾನಿಸ್ತಾನಕ್ಕೆ ಭಾರತದಿಂದ ರಫ್ತಾಗುವ ಬಹುತೇಕ ಸರಕುಗಳು ಇದೇ ಮಾರ್ಗದಲ್ಲಿ ಸಾಗಣೆಯಾಗುತ್ತವೆ. ಹೀಗಾಗಿ, ಭಾರತದ ರಫ್ತು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು.

ಭಾರತ ಮತ್ತು ಅಫ್ಘಾನಿಸ್ತಾನದ ಮಧ್ಯೆ ಉತ್ತಮ ವ್ಯಾಪಾರ ಸಂಬಂಧ ಇದೆ. ಅಫ್ಘಾನಿಸ್ತಾನಕ್ಕೆ ಭಾರತದಿಂದ ಸಕ್ಕರೆ, ಔಷಧ, ಬಟ್ಟೆ, ಚಹಾ, ಕಾಫಿ, ಮಸಾಲೆ ಪದಾರ್ಥ ಮತ್ತು ಟ್ರಾನ್ಸ್ ಮಿಷನ್ ಟವರ್ ಗಳು ರಫ್ತಾಗುತ್ತವೆ.

   ಓಮಿಕ್ರಾನ್ ರೂಪಾಂತರ, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. | Oneindia Kannada | Oneindia Kannada

   ಅಫ್ಘಾನಿಸ್ತಾನದಿಂದ ಭಾರತ ರಫ್ತು ಮಾಡಿಕೊಳ್ಳುವ ಪದಾರ್ಥಗಳಲ್ಲಿ ಪ್ರಮುಖವಾದುದು ಡ್ರೈ ಫ್ರೂಟ್ ಗಳು. ಇದರ ಜೊತೆಗೆ ಗಮ್, ಈರುಳ್ಳಿ ಮೊದಲಾದವನ್ನೂ ಆಮದು ಮಾಡಿಕೊಳ್ಳುತ್ತೇವೆ ಎಂದು ಡಾ. ಅಜಯ್ ಸಹಾಯ್ ಹೇಳಿದ್ದಾರೆ.
   ಇದೀಗ ಭಾರತವು ಗೋಧಿ ಹಾಗೂ ಅಗತ್ಯ ಔಷಧಗಳನ್ನು ರಫ್ತು ಮಾಡಲು ತಯಾರಿ ನಡೆಸಿದೆ.

   English summary
   Pakistan on Friday agreed to let India transport 50,000 metric tonnes of wheat and life-saving drugs as humanitarian assistance for the people of Afghanistan on Afghan trucks through the Wagah border crossing, after a row erupted between the two countries over the modalities of transportation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X