• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ವಿರುದ್ಧ ಮತ್ತೊಂದು ದೇಶದ ಬಂಡಾಯ..!

|

ಚೀನಿಯರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಫೆಸಿಪಿಕ್ ಮಹಾಸಾಗರದ ದ್ವೀಪರಾಷ್ಟ್ರವೊಂದು ಅಮೆರಿಕದ ಮೊರೆ ಹೋಗಿದೆ. ಅಮೆರಿಕ ನಮ್ಮ ಜಾಗದಲ್ಲೇ ಸೇನಾ ನೆಲೆ ಸ್ಥಾಪಿಸಲಿ ಅಂತಾ ಪಲಾವು(Palau)ದೇಶದ ರಾಷ್ಟ್ರಪತಿ ಅಮೆರಿಕದ ಬಳಿ ಮನವಿ ಮಾಡಿದ್ದಾರೆ.

   ಭಾರತೀಯರನ್ನು ಅಪಹರಿಸಿದ China ಸೇನೆ , Arunachal pradeshದಲ್ಲಿ ಘಟನೆ | Oneindia Kannada

   ಫಿಲಿಪೈನ್ಸ್ ದೇಶಕ್ಕೆ ನೆರೆ ರಾಷ್ಟ್ರವಾಗಿರುವ ಪಲಾವು ದೇಶಕ್ಕೆ ಚೀನಿಯರ ಭಯ ಕಾಡುತ್ತಿದೆ. ಸ್ವತಂತ್ರ ದೇಶದ ಸ್ಥಾನ ಹೊಂದಿದ್ದರೂ ಪಲಾವು ಸ್ವಂತ ಸೇನೆ ಹೊಂದಿಲ್ಲ. ಈ ಕಾರಣಕ್ಕೆ 2ನೇ ಮಹಾಯುದ್ಧದ ತರುವಾಯ ಅಮೆರಿಕದ ನೆರಳಲ್ಲೇ ಬೆಳೆದು ನಿಂತಿದೆ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಈ ದ್ವೀಪರಾಷ್ಟ್ರ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಅತ್ತ ಜಪಾನ್, ಮತ್ತೊಂದು ಕಡೆ ಅಮೆರಿಕ.

   ಸಂಪದ್ಭರಿತ ಟ್ರಿಲಿಯನ್ ಡಾಲರ್ ಜಾಗಕ್ಕಾಗಿ ವರ್ಲ್ಡ್ ವಾರ್..?

   ಹೀಗೆ ಎರಡೂ ಘಟಾನುಘಟಿ ರಾಷ್ಟ್ರಗಳ ನಡುವೆ ಸಿಲುಕಿ ಪಲಾವು ಅಪ್ಪಚ್ಚಿಯಾಗಿತ್ತು. ಅಂತಿಮವಾಗಿ ಮಹಾಯುದ್ಧ ಮುಗಿದು ಜಪಾನ್ ಸೋತ ನಂತರ ಅನಿವಾರ್ಯವಾಗಿ ಅಮೆರಿಕದ ತೆಕ್ಕೆಗೆ ಬಿದ್ದಿತ್ತು. 1947ರಲ್ಲಿ ಅಮೆರಿಕದ ಜೊತೆ ಒಪ್ಪಂದವಾಗಿ ಸ್ವತಂತ್ರಗೊಂಡಿತ್ತು. ಪಲಾವು ದೇಶದ ಮಿಲಿಟರಿ ಅಗತ್ಯತೆಯನ್ನು ಈಗಲೂ ಅಮೆರಿಕ ಪೂರೈಸುತ್ತಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಚೀನಾ ಪಲಾವು ನಾಯಕರ ಜೊತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿರುವುದು ಅಮೆರಿಕದ ನಿದ್ದೆಗೆಡಿಸಿದೆ.

   ಕರಾವಳಿ ಕಾಯುವುದೇ ಕಷ್ಟ

   ಕರಾವಳಿ ಕಾಯುವುದೇ ಕಷ್ಟ

   ಪಲಾವು ದೇಶ ಪುಟ್ಟದಾಗಿದ್ದರೂ, ಅದರ ಕರಾವಳಿ ಮೀಸಲು ಪ್ರದೇಶ ಮಾತ್ರ ಸ್ಪೇನ್ನಷ್ಟು ದೊಡ್ಡದಿದೆ. ಆದರೆ ಈ ಪ್ರದೇಶವನ್ನು ಕಾಯಲು ಪಲಾವು ರಾಷ್ಟ್ರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮಗೆ ಸಹಾಯ ಮಾಡಿ ಅಂತಾ ಅಮೆರಿಕ ಸೇನೆಗೆ ಮೊರೆಯಿಡಲಾಗಿದೆ. ಏಕೆಂದರೆ ಒಂದಿಷ್ಟು ಎಚ್ಚರ ತಪ್ಪಿದರೂ, ಕುತಂತ್ರಿ ಚೀನಾ ಅಲ್ಲಿಗೆ ನುಗ್ಗಿ ಆ ಜಾಗವನ್ನೆಲ್ಲಾ ತನ್ನ ವಶಕ್ಕೆ ಪಡೆದರೂ ಅಚ್ಚರಿ ಪಡಬೇಕಿಲ್ಲ.

   ಕಡಿಮೆ ಬಡ್ಡಿಗೆ ಸಾಲದ ಆಮಿಷ..!

   ಕಡಿಮೆ ಬಡ್ಡಿಗೆ ಸಾಲದ ಆಮಿಷ..!

   ಮೊದಲೇ ಹೇಳಿದಂತೆ ಪಲಾವು ದೇಶ ವಿಸ್ತಾರದಲ್ಲಿ ತೀರಾ ಚಿಕ್ಕದು. ಈ ದೇಶಕ್ಕೆ ಸುಮಾರು 459 ಸ್ಕ್ವೇರ್ ಕಿಲೋ ಮೀಟರ್ ಜಾಗವಿದೆ. ಹಾಗೇ ಜನಸಂಖ್ಯೆ ಕೇವಲ 17 ಸಾವಿರ. ಆದರೆ ಕೊರೊನಾ ವಕ್ಕರಿಸಿದ ನಂತರ ಪಲಾವು ದೇಶ ಆದಾಯವನ್ನೆಲ್ಲಾ ಕಳೆದುಕೊಂಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಹಾಯ ಮಾಡುವ ನೆಪದಲ್ಲಿ ಚೀನಾದ ಲೀಡರ್ಸ್ ಪಲಾವು ಕಡೆ ಕಣ್ಣು ನೆಟ್ಟಿದ್ದಾರೆ. ಇದು ಸ್ವತಃ ಪಲಾವು ಅಧ್ಯಕ್ಷರಿಗೆ ಆತಂಕ ತಂದಿದೆ. ಏಕೆಂದರೆ ಚೀನಾ ಸಹಾಯದ ನೆಪದಲ್ಲಿ ತಮ್ಮನ್ನು ಹೈಜಾಕ್ ಮಾಡಿಬಿಡುತ್ತೆ ಎಂಬ ಭಯ ಆ ದ್ವೀಪರಾಷ್ಟ್ರವನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಈ ದೇಶ ಈಗ ಅಮೆರಿಕದ ಸಹಾಯಕ್ಕೆ ಮೊರೆ ಇಡುತ್ತಿದೆ.

   ವಿಯೆಟ್ನಾಂ ಕೈ ಕುಲುಕಿದರೆ ಚೀನಾ ಮುಖ ಕೆಂಪಾಯಿತೇಕೆ?

   ತೈವಾನ್ ಜೊತೆ ರಾಜತಾಂತ್ರಿಕ ಸಂಬಂಧ

   ತೈವಾನ್ ಜೊತೆ ರಾಜತಾಂತ್ರಿಕ ಸಂಬಂಧ

   ಫೆಸಿಪಿಕ್ ವಲಯದಲ್ಲಿ ತೈವಾನ್ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಕೇವಲ 4 ರಾಷ್ಟ್ರಗಳ ಪೈಕಿ ಪಲಾವು ಕೂಡ ಒಂದು. ಮೊದಲೇ ತೈವಾನ್ ತನ್ನ ಭೂಭಾಗ ಅಂತಾ ಅಬ್ಬರಿಸುತ್ತಿರುವ ಚೀನಾ, ತೈವಾನ್ನ ವಶಕ್ಕೆ ಪಡೆಯಲು ಕಾಯುತ್ತಿದೆ. ಇಂತಹ ಹೊತ್ತಲ್ಲಿ ತೈವಾನ್ಗೆ ಜೊತೆಗಾರರ ಬೆಂಬಲ ಬೇಕು. ಅದರಲ್ಲೂ ಜಗತ್ತಿನಾದ್ಯಂತ ತೈವಾನ್ ಜೊತೆ ರಾಜತಾಂತ್ರಿಕ ಸಂಬಂಧ ಇಟ್ಟುಕೊಂಡಿರುವ ರಾಷ್ಟ್ರಗಳ ಸಂಖ್ಯೆ ಕೇವಲ 15. ಪರಿಸ್ಥಿತಿ ಹೀಗಿರುವಾಗ ಅಮೆರಿಕ ಕೂಡ ಪಲಾವು ದೇಶದ ಮನವಿಗೆ ಒಲ್ಲೆ ಎಂದಿಲ್ಲ. ಸಹಾಯ ಮಾಡುವ ಭರವಸೆ ನೀಡಿದೆ. ದಕ್ಷಿಣ ಚೀನಾ ಸಮುದ್ರ ಹಾಗೂ ಫೆಸಿಫಿಕ್ ಮಹಾಸಾಗರದಲ್ಲಿ ಚೀನಾ ಪ್ರಭಾವ ತಗ್ಗಿಸಲು ಅಮೆರಿಕ ಸಾಕಷ್ಟು ಪ್ರಯತ್ನಪಡುತ್ತಿದೆ.

   ಎಲ್ಲರ ಜೊತೆಗೂ ಚೀನಾ ಕಿರಿಕ್

   ಎಲ್ಲರ ಜೊತೆಗೂ ಚೀನಾ ಕಿರಿಕ್

   ಚೀನಾ ದೇಶವಾಗಿ ಉಳಿದಿದೆಯೋ ಅಥವಾ ರಿಯಲ್ ಎಸ್ಟೇಟ್ ಏಜೆನ್ಸಿಯಂತೆ ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ. ಯಾರದ್ದೇ ಭೂಭಾಗ ಕಂಡರು ಅದು ತನ್ನದು, ತನ್ನದು ಅಂತಾ ಬಾಯಿಬಡಿದುಕೊಳ್ಳುತ್ತದೆ. ಈಗ ಪಲಾವು ವಿಚಾರ ಕೂಡ ಹಾಗೇ ಆಗುವ ಸಾಧ್ಯತೆಯಿದೆ. ಆದರೆ ಇದಕ್ಕೆ ಅಮೆರಿಕ ಅವಕಾಶ ಕೊಡುವುದಿಲ್ಲ. ಆದರೂ ದಿನದಿಂದ ದಿನಕ್ಕೆ ಚೀನಾ ಸಾಮ್ರಾಜ್ಯಶಾಹಿ ವರ್ತನೆ ತೋರುತ್ತಿರುವುದು ಇಡೀ ಜಗತ್ತಿನ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

   English summary
   Pacific nation of Palau urged the American military to build bases on its territory. Which lies in a region where Washington is pushing back against growing Chinese influence.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X