ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಲಕ್ಷ ಬಲಿ ಪಡೆದ ಕೊರೊನಾ ವೈರಸ್ ಸೋಂಕಿಗೆ ಸಿಕ್ಕಿತು ಔಷಧಿ!

|
Google Oneindia Kannada News

ಜಿನೆವಾ, ಏಪ್ರಿಲ್.22: ನೊವೆಲ್ ಕೊರೊನಾ ವೈರಸ್ ನ್ನು ವೈದ್ಯಕೀಯ ಸಂಶೋಧಕರು ಸಾರ್ಸ್ ಕೊರೊನಾ ವೈರಸ್-2(SARS-CoV-2) ಎಂದು ಗುರುತಿಸಿದ್ದು ಆಗಿದೆ. ಚೀನಾದ ವುಹಾನ್ ನಗರದಲ್ಲಿ ಡಿಸೆಂಬರ್.2019ರಲ್ಲಿ ಮೊದಲು ಕಾಣಿಸಿಕೊಂಡ ಸೋಂಕು ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.

ಆರಂಭಿಕ ಹಂತದಲ್ಲಿ ನಿಮೋನಿಯಾ ರೀತಿ ಗೋಚರಿಸಿದ ಸೋಂಕು ಸಾಲು ಸಾಲಾಗಿ ಸೋಂಕಿತರನ್ನು ಸಾವಿನ ಮನೆ ಸೇರಿಸಿದ್ದೇ ತಡ ಜನವರಿ.30, 2020ರಂದು ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿತು.

ಕೊರೊನಾ ವೈರಸ್ ಎಂದರೇನು? ಸೋಂಕಿತರ ಲಕ್ಷಣ ಮತ್ತು ಸಾವಿನ ಸುದ್ದಿ!ಕೊರೊನಾ ವೈರಸ್ ಎಂದರೇನು? ಸೋಂಕಿತರ ಲಕ್ಷಣ ಮತ್ತು ಸಾವಿನ ಸುದ್ದಿ!

ಸಾರ್ಸ್ ಕೊರೊನಾ ವೈರಸ್-2 (ಕೊರೊನಾ ವೈರಸ್) ಅನ್ನು ವಿಶ್ವ ಆರೋಗ್ಯ ಸಂಸ್ಥೆಯು 2020ರ ಫೆಬ್ರವರಿ.11ರಂದು ಅಧಿಕೃತವಾಗಿ ಕೊವಿಡ್-19 ಎಂದು ಹೆಸರಿಸಿತು. ಇದರ ಬೆನ್ನಲ್ಲೇ ಸೋಂಕು ವಿಶ್ವವನ್ನೇ ವ್ಯಾಪಿಸಿತು. ಈ ಸೂಕ್ಷ್ಮತೆಯನ್ನು ಅರಿತ WHO ಕೊರೊನಾ ವೈರಸ್ ನ್ನು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿತು.

ವಿಶ್ವದಾದ್ಯಂತ ಕೊರೊನಾ ಔಷಧಿ ಪತ್ತೆಗೆ ಶತಪ್ರಯತ್ನ

ವಿಶ್ವದಾದ್ಯಂತ ಕೊರೊನಾ ಔಷಧಿ ಪತ್ತೆಗೆ ಶತಪ್ರಯತ್ನ

ಕೊರೊನಾ ವೈರಸ್ ಸೋಂಕಿಗೆ ಮದ್ದು ಕಂಡು ಹಿಡಿಯುವುದಕ್ಕಾಗಿ ವಿಶ್ವದಾದ್ಯಂತ ವಿಜ್ಞಾನಿಗಳು ಮತ್ತು ಸಂಶೋಧಕರು ಶತಪ್ರಯತ್ನ ನಡೆಸಿದ್ದಾರೆ. ಆಕ್ಸಫರ್ಡ್ ನಲ್ಲಿ ಪ್ರೊ.ಸರಹಾ ಗಿಲ್ಬರ್ಟ್ ನೇತೃತ್ವದಲ್ಲಿ ಪ್ರೊ. ಆಂಡ್ರೋ ಪೊಲಾರ್ಡ್, ಪ್ರೊ.ಟೆರೆಸಾ ಲಂಬೆ, ಡಾ.ಸ್ಯಾಂಡಿ ಡೌಗ್ಲಸ್ ಮತ್ತು ಪ್ರೊ.ಆಂಡ್ರಿಯಾನ್ ಹಿಲ್ ರನ್ನು ಒಳಗೊಂಡ ತಂಡವು ಕಳೆದ ಜನವರಿ.10, 2020ರಿಂದಲೇ ಔಷಧಿ ಪತ್ತೆಗೆ ಸಂಶೋಧನೆ ನಡೆಸುತ್ತಿತ್ತು. ಈ ತಂಡವೀಗ ಔಷಧಿಯೊಂದನ್ನು ಪತ್ತೆ ಹಚ್ಚಿದ್ದು, ಮೊದಲ ಹಂತದಲ್ಲಿ ತಪಾಸಣೆ ನಡೆಸಲು ಮುಂದಾಗಿದೆ.

ಹೊಸ ಔಷಧಿ ಪತ್ತೆ ಹಚ್ಚಿದ ಆಕ್ಸ್ ಫರ್ಡ್ ಇನ್ಸ್ ಟಿಟ್ಯೂಟ್

ಹೊಸ ಔಷಧಿ ಪತ್ತೆ ಹಚ್ಚಿದ ಆಕ್ಸ್ ಫರ್ಡ್ ಇನ್ಸ್ ಟಿಟ್ಯೂಟ್

ಇಂಗ್ಲೆಂಡ್ ನಲ್ಲಿರುವ ಆಕ್ಸ್ ಫರ್ಡ್ ಜೆನ್ನರ್ ಇನ್ಸ್ ಟಿಟ್ಯೂಟ್ ಕೊರೊನಾ ವೈರಸ್ ಸೋಂಕಿಗೆ ಎ ಚಿಂಪಾಂಝಿ ಅದೆನೊವೈರಸ್ ವ್ಯಾಕ್ಸಿನ್ ವೆಕ್ಟರ್ (ChAdOx1) ಎಂಬ ಔಷಧಿ ಕಂಡು ಹಿಡಿದಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕೆ ChAdOx1 ಔಷಧಿಯು ಹೆಚ್ಚು ಪರಿಣಾಮಕಾರಿಯಾಗಿದೆ. ಈ ಔಷಧಿಯ ಒಂದು ಡೋಸ್ ನಿಂದ ಕೊರೊನಾ ವೈರಸ್ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕೊರೊನಾ ಸೋಂಕಿತರಿಗೆ ಪರಿಣಾಮಕಾರಿ ಔಷಧಿ

ಕೊರೊನಾ ಸೋಂಕಿತರಿಗೆ ಪರಿಣಾಮಕಾರಿ ಔಷಧಿ

ಚಿಂಪಾಂಝಿ ಅದೆನೊವೈರಸ್ ವೆಕ್ಟರ್ ಎನ್ನುವುದು ದೀರ್ಘಕಾಲಿಕ ಅಧ್ಯಯನದಿಂದ ಪತ್ತೆ ಮಾಡಿರುವ ಔಷಧಿಯಾಗಿದೆ. ಕಳೆದ ಒಂದು ವಾರದಿಂದ ಈ ಔಷಧಿಯು 90 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎನ್ನುವುದರ ಬಗ್ಗೆ ಅಧ್ಯಯನ ಮಾಡಲಾಗಿದೆ. 10ಕ್ಕೂ ಅಧಿಕ ಸೋಂಕುಗಳನ್ನು ನಿವಾರಿಸುವ ಉದ್ದೇಶವನ್ನು ಇಟ್ಟುಕೊಂಡು ಈ ಔಷಧಿ ಸಿದ್ಧಪಡಿಸಲಾಗಿದೆ ಎನ್ನುವುದು ಸಂಶೋಧಕರ ಮಾತಾಗಿದೆ.

ಕೊವಿಡ್19 ಮೇಲ್ಮೈ ಪದರವೇ ಸಂಶೋಧಕರ ಟಾರ್ಗೆಟ್

ಕೊವಿಡ್19 ಮೇಲ್ಮೈ ಪದರವೇ ಸಂಶೋಧಕರ ಟಾರ್ಗೆಟ್

ನೊವೆಲ್ ಕೊರೊನಾ ವೈರಸ್ ಎನ್ನುವುದು ವೈರಸ್ ಗಳಿಗೆ ಸೇರಿದ ಸಮೂಹ. ಈ ವೈರಸ್ ನಲ್ಲಿ ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (MERS-CoV) ಮತ್ತು ಸೆವೆರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (SARS-CoV) ಜಾತಿಗೆ ಸೇರಿದ ವೈರಸ್ ಆಗಿದೆ. ನೊವೆಲ್ ಕೊರೊನಾ ವೈರಸ್ ಮೇಲ್ಮೈ ಪದರದಲ್ಲಿ ಕಿರೀಟದಂತಾ ವಿನ್ಯಾಸ ಪತ್ತೆಯಾಗಿದ್ದು, ಈ ಕಿರೀಟವು ಔಷಧಿ ಪರಿಣಾಮವನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದ್ದು ಅಲ್ಲದೇ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.

ರೋಗಾಣುವಿನ ಮೇಲ್ಮೈ ಪದರದ ಮೇಲೆ ಪ್ರಭಾವ

ರೋಗಾಣುವಿನ ಮೇಲ್ಮೈ ಪದರದ ಮೇಲೆ ಪ್ರಭಾವ

ಮನುಷ್ಯರಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಕೊರೊನಾ ವೈರಸ್ ಮೇಲ್ಮೈ ಪದರವನ್ನು ಗುರಿಯಾಗಿಸಿಕೊಂಡು ಚಿಂಪಾಂಝಿ ಅದೆನೊವೈರಸ್ ವ್ಯಾಕ್ಸಿನ್ ಔಷಧಿಯನ್ನು ಸಿದ್ಧಪಡಿಸಲಾಗಿದೆ. ಕೊರೊನಾ ಸೋಂಕಿತರಿಗೆ ಔಷಧಿ ನೀಡುತ್ತಿದ್ದಂತೆ ರೋಗ ನಿರೋಧಕ ಶಕ್ತಿಯನ್ನು ತಗ್ಗಿಸುವ ವೈರಸ್ ನ ಮೇಲ್ಮೈ ಪದರಗಳ ಮೇಲೆ ಔಷಧಿಯು ದಾಳಿ ಇಡುತ್ತದೆ. ನಂತದಲ್ಲಿ ಸೋಂಕಿತರ ದೇಹದ ಆಳಕ್ಕೆ ಇಳಿಯುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

English summary
Oxford Vaccine Group Develop A Vaccine To Prevent Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X