ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾ ಲಸಿಕೆ ಶೇ 70ರಷ್ಟು ಪರಿಣಾಮಕಾರಿ

|
Google Oneindia Kannada News

ಲಂಡನ್, ಡಿಸೆಂಬರ್ 8: ಕೊರೊನಾ ವೈರಸ್ ಲಸಿಕೆಯ ಪ್ರಯೋಗಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಪತ್ರಿಕೆಯಲ್ಲಿ ಅಂತಿಮ ಹಂತದ ಪ್ರಯೋಗದ ಫಲಿತಾಂಶ ಪ್ರಕಟಿಸಿದ ಮೊದಲ ಲಸಿಕೆ ಉತ್ಪಾದಕರು ಎಂಬ ಹೆಗ್ಗಳಿಕೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಪಾತ್ರವಾಗಿವೆ. ಈ ಮೂಲಕ ಅದು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ತಯಾರಿಸುವ ಜಾಗತಿಕ ಪೈಪೋಟಿಯಲ್ಲಿ ತನ್ನ ಪ್ರಯತ್ನದ ಕುರಿತು ಮಹತ್ವದ ಮಾಹಿತಿ ನೀಡಿದೆ.

ಲ್ಯಾನ್ಸೆಟ್ ಮೆಡಿಕಲ್ ಪತ್ರಿಕೆಯಲ್ಲಿ ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್ ವಿವಿಯ ಅಧ್ಯಯನ ವರದಿ ಪ್ರಕಟವಾಗಿದೆ. ಇದರಲ್ಲಿ ತನ್ನ ಲಸಿಕೆ ಶೇ 70ರಷ್ಟು ಪರಿಣಾಮಕಾರಿ ಎಂದು ಸಂಸ್ಥೆಗಳು ಹೇಳಿಕೊಂಡಿವೆ. ಈ ಎರಡೂ ಸಂಸ್ಥೆಗಳು ಭಾರತದಲ್ಲಿ ಪುಣೆಯ ಸೆರಮ್ ಸಂಸ್ಥೆಯ ಸಹಭಾಗಿತ್ವದಲ್ಲಿ ಲಸಿಕೆ ಉತ್ಪಾದಿಸುವ ಮತ್ತು ಪರೀಕ್ಷೆ ನಡೆಸುವ ಚಟುವಟಿಕೆಗಳನ್ನು ನಡೆಸುತ್ತಿದೆ. ಭಾರತದಲ್ಲಿ ಇದಕ್ಕೆ 'ಕೋವಿಶೀಲ್ಡ್' ಎಂಬ ಹೆಸರು ಇಡಲಾಗಿದೆ.

ದೇಶದಲ್ಲಿ ಆರು ಲಸಿಕೆಗಳು ಪ್ರಯೋಗದ ಹಂತದಲ್ಲಿದೇಶದಲ್ಲಿ ಆರು ಲಸಿಕೆಗಳು ಪ್ರಯೋಗದ ಹಂತದಲ್ಲಿ

ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯು ಔಷಧ ಉತ್ಪಾದಕರು ದತ್ತಾಂಶಗಳನ್ನು ಹಂಚಿಕೊಳ್ಳುವುದರಲ್ಲಿ ಪಾರದರ್ಶಕತೆ ಪಾಲಿಸುತ್ತಿದ್ದಾರೆ ಎಂಬುದನ್ನು ತೋರಿಸಿದೆ ಎಂದು ಆಕ್ಸ್‌ಫರ್ಡ್ ಲಸಿಕೆ ಸಮೂಹದ ನಿರ್ದೇಶಕ ಆಂಡ್ರೂ ಪೊಲಾರ್ಡ್ ಹೇಳಿದ್ದಾರೆ.

Oxford-Astrazeneca Publishes Final Stage Vaccine Trial Results Claims 70 Percent Efficacy

ಬ್ರಿಟನ್ ಮತ್ತು ಬ್ರೆಜಿಲ್ ಗಳಲ್ಲಿ 11,636 ಸ್ವಯಂಸೇವಕರ ಮೇಲೆ ನಡೆಸಿದ ಪ್ರಯೋಗಗಳ ಫಲಿತಾಂಶದ ಆಧಾರದಲ್ಲಿ ಈ ವರದಿ ಪ್ರಕಟಿಸಲಾಗಿದೆ. ಇದರಲ್ಲಿ ಭಾರತ ಹಾಗೂ ಇತರೆ ದೇಶಗಳಲ್ಲಿ ನಡೆದ ಕ್ಲಿನಿಕಲ್ ಪ್ರಯೋಗದ ವಿವರಗಳನ್ನು ಪರಿಗಣಿಸಲಾಗಿಲ್ಲ.

ಕಡಿಮೆ ಪ್ರಮಾಣದಲ್ಲಿ ಮೊದಲ ಡೋಸ್ ಲಸಿಕೆ ಪಡೆದ ಎರಡನೆಯ ಗುಂಪಿನಲ್ಲಿ ಈ ಲಸಿಕೆಯು ಶೇ 90ರಷ್ಟು ಪರಿಣಾಮಕಾರಿ ಎನಿಸಿದೆ. ಆದರೆ ನಿರ್ದಿಷ್ಟ ಪ್ರಮಾಣದ ಡೋಸ್ ಪಡೆದ ಮೊದಲ ಗುಂಪಿನಲ್ಲಿ ಶೇ 62.1ರಷ್ಟು ಪರಿಣಾಮ ಕಂಡುಬಂದಿದೆ. ಒಟ್ಟಾರೆಯಾಗಿ ಎರಡನೆಯ ಡೋಸ್ ಲಸಿಕೆ ಪಡೆದ ಕನಿಷ್ಠ 14 ದಿನಗಳ ಬಳಿಕ ಪರಿಣಾಮ ಕಂಡುಬರುವುದರಿಂದ ಅದನ್ನು ಶೇ 70.4 ರಂದು ಅಂದಾಜಿಸಲಾಗಿದೆ ಎಂಬುದಾಗಿ ವರದಿ ಹೇಳಿದೆ.

ಸೆರಂನಿಂದ ಕೋವಿಡ್ ಲಸಿಕೆ; ಪ್ರತಿ ಡೋಸ್‌ಗೆ ದರ ಎಷ್ಟು?ಸೆರಂನಿಂದ ಕೋವಿಡ್ ಲಸಿಕೆ; ಪ್ರತಿ ಡೋಸ್‌ಗೆ ದರ ಎಷ್ಟು?

'ಮೂರನೇ ಹಂತದ ಲಸಿಕೆ ಪ್ರಯೋಗದ ಮಧ್ಯಂತರ ವಿಶ್ಲೇಷಣೆಯನ್ನು ನಾವು ಪ್ರಕಟಿಸಿದ್ದೇವೆ. ಹೊಸ ಲಸಿಕೆಯು ಉತ್ತಮ ಸುರಕ್ಷತೆ ಮತ್ತು ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಈ ಲಸಿಕೆ ಪಡೆಯ ಯಾರಲ್ಲಿಯೂ ಗಂಭೀರ ಕಾಯಿಲೆ ಅಥವಾ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಉಂಟಾಗಿಲ್ಲ' ಎಂದು ಪೊಲಾರ್ಡ್ ಹೇಳಿದ್ದಾರೆ.

Recommended Video

ಸಿದ್ದರಾಮಯ್ಯಗೆ ತೀವ್ರ ಮುಜುಗರ ತಂದೊಡ್ಡಿದ ಅವರು ಬರೆದಿದ್ದ 7ವರ್ಷದ ಹಿಂದಿನ ಆ ಪತ್ರ | Oneindia Kannada

English summary
Oxford-Astrazeneca become the first covid-19 vaccine makers to publish final stage clinical trial results and said it has 70% efficacy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X