ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಲಸಿಕೆ: ಜನವರಿಯಲ್ಲಿ ಆಸ್ಟ್ರಾಜೆನಿಕಾ-ಆಕ್ಸ್ ಫರ್ಡ್ ಲಸಿಕೆ ಫಲಿತಾಂಶ

|
Google Oneindia Kannada News

ನವದೆಹಲಿ, ಡಿಸೆಂಬರ್.03: ಕೊರೊನಾವೈರಸ್ ಸೋಂಕಿನ ಮೂರು ಲಸಿಕೆಗಳ ಬಳಕೆಗೆ ಜಾಗತಿಕ ಮಟ್ಟದಲ್ಲಿ ಇಂಗ್ಲೆಂಡ್ ಮತ್ತು ರಷ್ಯಾ ಸರ್ಕಾರಗಳು ಅನುಮೋದನೆ ನೀಡಿವೆ. ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನಿಕಾ ಕಂಪನಿಗಳು ನಡೆಸಿದ ಕೊವಿಡ್-19 ಲಸಿಕೆ ತುರ್ತು ಸಂದರ್ಭದಲ್ಲಿ ಬಳಸಲು ಯೋಗ್ಯವಾಗಿದೆಯೇ ಎಂಬುದರ ಫಲಿತಾಶಂ ಇನ್ನೇನು ಹೊರ ಬೀಳಲಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಜನವರಿ ನಂತರ ಲಸಿಕೆಯ ಬಳಕೆಗೆ ಅವಕಾಶ ನೀಡಲು ಮನವಿ ಮಾಡಿಕೊಳ್ಳಲಾಗಿದೆ. ಬ್ರಿಟಿಷ್ ಮತ್ತು ಸ್ವೆಡಿಶ್ ಔಷಧಿ ಸಂಶೋಧನಾ ಸಂಸ್ಥೆಗಳು ಕಳೆದ ನವೆಂಬರ್ ತಿಂಗಳಿನಲ್ಲೇ ವೈದ್ಯಕೀಯ ಪ್ರಯೋಗದ ಫಲಿತಾಂಶಗಳ ಬಗ್ಗೆ ಪ್ರಕಟಿಸಿತ್ತಾದರೂ, ಸಂಶೋಧಕರಿಗೆ ಆ ಫಲಿತಾಂಶವು ತೃಪ್ತಿದಾಯಕ ಎನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ವೈದ್ಯಕೀಯ ಸಂಶೋಧನೆ ಕಾರ್ಯವನ್ನು ನಡೆಸಲಾಗುತ್ತಿದ್ದು, ಜನವರಿ ತಿಂಗಳಿನಲ್ಲಿ ವೈದ್ಯಕೀಯ ಸಂಶೋಧನೆಯ ಫಲಿತಾಂಶ ಹೊರ ಬೀಳಲಿದೆ.

ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ?ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ?

ಜರ್ಮನ್ ಫಾರ್ಮಾಸೆಂಟಿಕಲ್ ಕಂಪನಿ ಆಗಿರುವ ಬಯೋನೆಟೆಕ್ ಮತ್ತು ಯುನೈಟೆಡ್ ಸ್ಟೇಟ್ಸ್ ಸಹಭಾಗಿತ್ವದ ಫೈಜರ್ ಕಂಪನಿ ಸಂಶೋಧಿಸಿರುವ ಕೊವಿಡ್-19 ಲಸಿಕೆಗಳನ್ನು ಇಂಗ್ಲೆಂಡ್ ಸರ್ಕಾರವು ಅನುಮೋದನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Oxford-AstraZeneca Covid-19 Vaccine Results Likely In Late-January: Report

ಜನವರಿ ತಿಂಗಳಿನಲ್ಲಿ ಕೊವಿಡ್-19 ಲಸಿಕೆ ಬಳಕೆ:

"2021ರ ಜನವರಿ ಅಥವಾ ಅದೇ ತಿಂಗಳ ಮೂರನೇ ವಾರದಲ್ಲಿ ಕೊರೊನಾವೈರಸ್ ಲಸಿಕೆಯ ವೈದ್ಯಕೀಯ ಪ್ರಯೋಗದ ಫಲಿತಾಂಶ ಹೊರ ಬೀಳಲಿದೆ. ಅನಂತರದಲ್ಲಿ ಲಸಿಕೆಯ ತುರ್ತು ಬಳಕೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದ್ದು, ಬಳಿಕ ದೃಢೀಕರಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ" ಎಂದು ಓಡಬ್ಲ್ಯುಎಸ್ ಮುಖ್ಯ ಸಲಹೆಗಾರ ಮೊನ್ಸೆಫ್ ಸ್ಲೌಯಿ ತಿಳಿಸಿದ್ದಾರೆ. ಆಕ್ಸ್ ಫರ್ಡ್ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿದ್ದು, ಆಸ್ಟ್ರಾಜೆನಿಕಾ ಲಸಿಕೆಯು ಶೇ.90ರಷ್ಟು ಪ್ರಭಾವಶಾಲಿಯಾಗಿದೆ ಎಂಬುದು ವೈದ್ಯಕೀಯ ಪ್ರಯೋಗದಲ್ಲಿ ದೃಢಪಟ್ಟಿದೆ.

Recommended Video

Ind vs Aus 1st T20 ನಾಳೆ ನಡೆಯಲಿದ್ದು , ಸೇಡು ತೀರಿಸಿಕೊಳ್ಳಲು ಭಾರತ ಸಿದ್ದ | Oneindia Kannada

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಅಸ್ಟ್ರಾಜೆನಿಕಾ ಕಂಪನಿ ನಡೆಸುತ್ತಿರುವ ಕೊವಿಡ್-19 ಲಸಿಕೆ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ವೈದ್ಯಕೀಯ ಪ್ರಯೋಗದಲ್ಲಿ ಭಾಗಿಯಾದ ಸ್ವಯಂಸೇವಕನು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದ ಕಾರಣಕ್ಕೆ ಪ್ರಯೋಗವನ್ನು ನಿಲ್ಲಿಸಲಾಗಿತ್ತು.

English summary
Coronavirus Vaccine: Oxford-AstraZeneca Covid-19 Vaccine Results Likely In Late-January, Says Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X