ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್ ಲಸಿಕೆಯ ದಾಖಲೆಯಲ್ಲಿ 'ಪ್ರಮಾದ': ತಪ್ಪೊಪ್ಪಿಕೊಂಡ ಕಂಪೆನಿ

|
Google Oneindia Kannada News

ನವದೆಹಲಿ, ನವೆಂಬರ್ 26: ತಮ್ಮ ಕೋವಿಡ್ 19 ಲಸಿಕೆಯು ಅಧಿಕ ಪರಿಣಾಮಕಾರಿ ಎಂದು ಆಸ್ಟ್ರಾಜೆನಿಕಾ-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಘೋಷಿಸಿಕೊಂಡ ಮೂರೇ ದಿನಕ್ಕೆ ಲೋಪವೊಂದು ಕಂಡುಬಂದಿದ್ದು, ಲಸಿಕೆಯ ದಕ್ಷತೆಯ ಬಗ್ಗೆ ಅನೇಕ ವಿಜ್ಞಾನಿಗಳಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ತನ್ನ ಲಸಿಕೆಯು ಶೇ 70ರಷ್ಟು ಪರಿಣಾಮಕಾರಿ ಎಂದು ಔಷಧ ತಯಾರಕ ಸಂಸ್ಥೆ ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ವಾರದ ಆರಂಭದಲ್ಲಿ ಪ್ರಕಟಿಸಿದ್ದವು. ಕೋವಿಡ್ 19 ತಡೆಗಟ್ಟುವಲ್ಲಿ ಲಸಿಕೆ ಯಶಸ್ವಿಯಾಗುತ್ತದೆ ಎನ್ನುವುದು ಬ್ರಿಟನ್ ಮತ್ತು ಬ್ರೆಜಿಲ್‌ಗಳಲ್ಲಿ ನಡೆಸಿದ ಇತ್ತೀಚಿನ ಪ್ರಯೋಗಗಳಿಂದ ಫಲಿತಾಂಶ ಸಿಕ್ಕಿದೆ ಎಂದು ತಿಳಿಸಿದ್ದವು.

ಯುವಕರ ಮೇಲೆ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ: ಶೇ.90ರಷ್ಟು ಪರಿಣಾಮಕಾರಿ ಯುವಕರ ಮೇಲೆ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ: ಶೇ.90ರಷ್ಟು ಪರಿಣಾಮಕಾರಿ

ಪ್ರಯೋಗದ ವೇಳೆ ಕೆಲವು ಅಧ್ಯಯನಕ್ಕೊಳಗಾದ ಅನೇಕ ಸ್ವಯಂ ಸೇವಕರಿಗೆ ನಿರೀಕ್ಷೆಯಂತೆ ಎರಡು ಗುಟುಕು ಲಸಿಕೆ ನೀಡಿಲ್ಲ ಎನ್ನುವುದು ಬಹಿರಂಗವಾಗಿದ್ದು, ಈ ಪ್ರಮಾದ ಏಕೆ ಮಾಡಲಾಗಿದೆ ಎಂಬುದನ್ನು ಅದು ತನ್ನ ವರದಿಯಲ್ಲಿ ಉಲ್ಲೇಖಿಸಿರಲಿಲ್ಲ. ಅಚ್ಚರಿಯ ಸಂಗತಿಯೆಂದರೆ ಕಡಿಮೆ ಪ್ರಮಾಣದ ಡೋಸ್ ಪಡೆದ ಸ್ವಯಂ ಸೇವಕರು ಗುಂಪು, ಎರಡು ಡೋಸ್ ಸಂಪೂರ್ಣ ಲಸಿಕೆ ಪಡೆದವರಿಗಿಂತಲೂ ಹೆಚ್ಚು ಪ್ರತಿಕರಕ್ಷಣಾ ಸಾಮರ್ಥ್ಯ ಪಡೆದುಕೊಂಡಿದ್ದಾರೆ.

 Oxford-AstraZeneca Admits Manufacturing Error

ಆದರೆ ಬುಧವಾರ ತನ್ನ ಪ್ರಮಾದವನ್ನು ಒಪ್ಪಿಕೊಂಡು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹೇಳಿಕೆ ನೀಡಿದೆ. ಕೆಲವು ಬಾಟಲಿಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಲಸಿಕೆ ಇರಲಿಲ್ಲ. ಇದರಿಂದ ಕೆಲವು ಸ್ವಯಂ ಸೇವಕರಿಗೆ ಅರ್ಧ ಡೋಸ್ ಮಾತ್ರವೇ ನೀಡಲಾಗಿದೆ ಎಂದು ತಿಳಿಸಿದೆ.

ಕೊರೊನಾ ಲಸಿಕೆ: ಔಷಧ ತಯಾರಕ ಸಂಸ್ಥೆಗಳಿಗೆ ಮೋದಿ ಭೇಟಿ ಸಾಧ್ಯತೆಕೊರೊನಾ ಲಸಿಕೆ: ಔಷಧ ತಯಾರಕ ಸಂಸ್ಥೆಗಳಿಗೆ ಮೋದಿ ಭೇಟಿ ಸಾಧ್ಯತೆ

Recommended Video

ಇಂಡೋ- ಆಸೀಸ್ ಕಾದಾಟ ಶುರು!! | Oneindia Kannada

ಇದು ಉತ್ಪಾದನಾ ಹಂತದಲ್ಲಿ ಉಂಟಾದ ಸಮಸ್ಯೆ. ಇದನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದೆ. ಕಡಿಮೆ ಡೋಸ್ ಪಡೆದ ಗುಂಪುಗಳಲ್ಲಿ ಲಸಿಕೆಯು ಶೇ 90ರಷ್ಟು ಪರಿಣಾಮಕಾರಿಯಾಗಿದೆ. ಎರಡು ಡೋಸ್ ಲಸಿಕೆ ಪಡೆದವರಲ್ಲಿ ಶೇ 62ರಷ್ಟು ಪರಿಣಾಮ ಕಂಡುಬಂದಿದೆ. ಒಟ್ಟಾರೆಯಾಗಿ ಲಸಿಕೆಯು ಶೇ 70ರಷ್ಟು ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆಗಳು ತಿಳಿಸಿವೆ. ಆದರೆ, ಕಂಪೆನಿಯ ಲಸಿಕೆ ದಕ್ಷತೆ ಮತ್ತು ಅದರ ವಿಶ್ವಾಸಾರ್ಹತೆ ಬಗ್ಗೆ ಪರಿಣತರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

English summary
Oxford University-AstraZeneca admitted the error in manufacturing as many volunteers got lower dose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X