ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಮಸೀದಿ ಪ್ರವೇಶಿಸಿ ಅಪವಿತ್ರಗೊಳಿಸಲು ಯತ್ನಿಸಿದವರ ವಿರುದ್ಧ ಓವೈಸಿ ಕಿಡಿ

|
Google Oneindia Kannada News

ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ದುರ್ಗಾ ವಿಸರ್ಜನೆಗೆ ಹೊರಟಿದ್ದ ಗುಂಪೊಂದು ಇಲ್ಲಿನ ಐತಿಹಾಸಿಕ ಮಹಮೂದ್ ಗವಾನ್ ಮಸೀದಿಗೆ ನುಗ್ಗಿದೆ. ಬೀದರ್‌ನ ಈ ವಿಡಿಯೋವನ್ನು ಶೇರ್ ಮಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿ, ಹೀಗಾಗಲು ನೀವು ಹೇಗೆ ಅವಕಾಶ ನೀಡುತ್ತೀರಿ ಎಂದು ಕರ್ನಾಟಕ ಸಿಎಂಗೆ ಪ್ರಶ್ನಿಸಿದ್ದಾರೆ.

ಈ ವಿಡಿಯೋವನ್ನು ಶೇರ್ ಮಾಡಿ ಉಗ್ರಗಾಮಿಗಳು ಮುಸ್ಲಿಮರ ಪಾರಂಪರಿಕ ಸ್ಮಾರಕವನ್ನು ಅಪವಿತ್ರಗೊಳಿಸಲು ಯತ್ನಿಸಿದ್ದಾರೆ ಎಂದು ಓವೈಸಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ನೀವು ಹೀಗಾಗಲು ಹೇಗೆ ಬಿಡುತ್ತೀರಿ ಎಂದು ಕರ್ನಾಟಕ ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು. ಇದರೊಂದಿಗೆ ಮುಂಜಾನೆ ದುರ್ಗಾ ವಿಸರ್ಜನೆಗೆ ತೆರಳುತ್ತಿದ್ದ ದುಷ್ಕರ್ಮಿಗಳ ತಂಡ ಇಲ್ಲಿನ ಪಾರಂಪರಿಕ ತಾಣದಲ್ಲಿರುವ ಮೊಹಮ್ಮದ್ ಗವಾನ್ ಮದರಸಾ ಮತ್ತು ಮಸೀದಿಯ ಮುಚ್ಚಿದ ಗೇಟ್‌ಗೆ ನುಗ್ಗಿದ್ದಾರೆ ಎಂದು ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.

ಬೀದರ್-ತಿರುಪತಿ ನಡುವೆ ಹೊಸ ರೈಲು; ವೇಳಾಪಟ್ಟಿ ಬೀದರ್-ತಿರುಪತಿ ನಡುವೆ ಹೊಸ ರೈಲು; ವೇಳಾಪಟ್ಟಿ

Owaisi expressed outrage against Attempt to desecrate Bidar Masjid

ಗುರುವಾರ ಮುಂಜಾನೆ ಮಸೀದಿ ಬಳಿ ದುರ್ಗಾ ಮೂರ್ತಿ ನಿಮಜ್ಜನ ಮೆರವಣಿಗೆ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಮಸೀದಿ ಸಮಿತಿಯ ಸದಸ್ಯ ಮೊಹಮ್ಮದ್ ಶಫಿಯುದ್ದೀನ್ ದೂರಿದ್ದಾರೆ ಎಂದು ಅವರು ಹೇಳಿದರು. ಜನರು ಮಸೀದಿಯ ಗೇಟ್ ಒಡೆದು ಒಳ ಪ್ರವೇಶಿಸಿದರು.

ಹಿಂದೂ ಪರ ಘೋಷಣೆಗಳು

ಸುಮಾರು 60 ಜನರು ಪುರಾತತ್ವ ಪರಂಪರೆಯ ಮಸೀದಿಯ ಸ್ಮಾರಕದ ಬೀಗ ಮುರಿದು ಪ್ರವೇಶಿಸಿ ಹಿಂದೂ ಪರ ಘೋಷಣೆಗಳನ್ನು ಕೂಗಿದರು ಮತ್ತು ಮಸೀದಿಯ ಆವರಣದೊಳಗೆ 'ಗುಲಾಲ್' ಎಸೆದರು ಎಂದು ಓವೈಸಿ ಆರೋಪಿಸಿದ್ದಾರೆ. ಇದಾದ ಬಳಿಕ ಪೊಲೀಸರು ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಸೀದಿಯನ್ನು ಅಪವಿತ್ರಗೊಳಿಸಲು ಯತ್ನ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಓವೈಸಿ, 'ಉಗ್ರರು' ಪಾರಂಪರಿಕ ಸ್ಮಾರಕವನ್ನು ಅಪವಿತ್ರಗೊಳಿಸಲು ಯತ್ನಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ವಿಡಿಯೊವನ್ನು ಹಂಚಿಕೊಂಡ ಅವರು, "ಇದು ಐತಿಹಾಸಿಕ ಮಹಮೂದ್ ಗವಾನ್ ಮಸೀದಿ ಮತ್ತು ಬೀದರ್‌ನ ಮದರಸಾದ ನೋಟವಾಗಿದೆ, ಇದರಲ್ಲಿ ಉಗ್ರರು ಗೇಟ್‌ನ ಬೀಗವನ್ನು ಮುರಿದು ಮಸೀದಿಯನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿದ್ದಾರೆ.

English summary
In Bidar district of Karnataka, a group on their way to worship Durga broke into the historic Mahmood Gawan Masjid here. AIMIM chief Asaduddin Owaisi, who shared this video from Bidar, expressed outrage and asked the Karnataka CM how you allow this to happen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X