ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯದಲ್ಲಿ ಬೊಜ್ಜಿದ್ದರೆ ಲಕ್ವಾ ಹೊಡೆಯುವ ಸಾಧ್ಯತೆ ಹೆಚ್ಚು: ವರದಿ

|
Google Oneindia Kannada News

ವಾಷಿಂಗ್ಟನ್ ಡಿಸಿ, ಜೂನ್ 29: ನಿಮ್ಮ ಕಣ್ಣೆದುರು ಠೊಣಪವಾದ ಮಗುವೊಂದು ಅಡ್ಡಾಡುತ್ತಿದೆ ಅಂದರೆ ತುಂಬ ಮುದ್ದು ಬರುತ್ತದೆ ಅಲ್ವಾ? ಆ ರೀತಿ ಮಕ್ಕಳು ಚಿಕ್ಕ ವಯಸ್ಸಿಗೆ ಮಿತಿ ಮೀರಿ ದಪ್ಪವಾದರೆ ಯೌವನದ ದಿನಗಳಲ್ಲಿ ಲಕ್ವ ಹೊಡೆಯುವ ಸಾಧ್ಯತೆಗಳು ಹೆಚ್ಚು ಎಂದು ವರದಿಯೊಂದು ಎಚ್ಚರಿಕೆ ನೀಡಿದೆ.

ಹಣ್ಣುಹಂಪಲು ತಿಂದು ಬೊಜ್ಜನ್ನು ಜಜ್ಜಿ ಪುಡಿಪುಡಿ ಮಾಡಿ!ಹಣ್ಣುಹಂಪಲು ತಿಂದು ಬೊಜ್ಜನ್ನು ಜಜ್ಜಿ ಪುಡಿಪುಡಿ ಮಾಡಿ!

ಯಾವ ವ್ಯಕ್ತಿಯಲ್ಲಿ ಬಿಎಂಐ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೋ ಅಂಥವರಿಗೆ ಲಕ್ವ ಹೊಡೆಯುವ ಪ್ರಮಾಣ ಹೆಚ್ಚು ಇರುತ್ತದಂತೆ. ಆದರೆ ಸರಾಸರಿಯಲ್ಲಿ ಬಿಎಂಐ ಪ್ರಮಾಣ ಇರುವವರಿಗಿಂತ ಇಂಥವರಿಗೆ ಅಪಾಯದ ಪ್ರಮಾಣ ಶೇ ಇಪ್ಪತ್ತರಷ್ಟು ಹೆಚ್ಚು ಎಂಬ ಸಂಗತಿ ಬಯಲು ಮಾಡಿದ್ದಾರೆ.

Overweight teens are 80% more likely to suffer a stroke in adulthood

ಬಾಲ್ಯ ಹಾಗೂ ಯೌವನಾವಸ್ಥೆಯಲ್ಲಿ ಸ್ಥೂಲ ಕಾಯರಾಗಿರುವ ಪುರುಷರಲ್ಲಿ ಅಪಾಯದ ಪ್ರಮಾಣ ಶೇ ಎಪ್ಪತ್ತರಷ್ಟು ಹೆಚ್ಚು ಎಂದು ತಿಳಿದುಬಂದಿದೆ. 990 ಮಂದಿಯ ಮೇಲೆ ಅಧ್ಯಯನ ನಡೆಸಿದ್ದು, ಅದರಲ್ಲಿ 36 ಮಂದಿಗೆ ಲಕ್ವ ಹೊಡೆದಿತ್ತು. ಅಂದರೆ ಈ ಪ್ರಮಾಣ ಶೇ 3.6ರಷ್ಟು ಎಂದು ಗೊತ್ತಾಗಿದೆ.

ಯುವ ಜನಾಂಗದಲ್ಲೇ ಈ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ವಯಸ್ಸಾದವರಲ್ಲಿ ಲಕ್ವಾದ ಪ್ರಮಾಣ ಕಡಿಮೆ ಆಗುತ್ತಿದೆ. ಇನ್ನು ಹೆಚ್ಚಿನ ರಕ್ತದೊತ್ತಡ ಇರುವವರಲ್ಲೂ ಲಕ್ವಾ ಹೊಡೆಯುವ ಸಾಧ್ಯತೆಗಳು ಹೆಚ್ಚು ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

English summary
please take note! If your son becomes overweight during his teenage years then he is 80 percent more likely to have a stroke in adulthood, warns a study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X