ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೋಣಿ ಮುಳುಗಿ 97 ವಿದೇಶಿಯರು ಸಾವು

By Mahesh
|
Google Oneindia Kannada News

ಕೌಲಾಲಂಪುರ, ಜೂ.18: ಮಲೇಷಿಯಾ ಪಶ್ಚಿಮ ಕರಾವಳಿಯಲ್ಲಿ ಸಾಗುತ್ತಿದ್ದ ಮರದ ದೋಣಿಯೊಂದು ನೀರಿನಲ್ಲಿ ಮುಳುಗಿದ ಪರಿಣಾಮ ಸುಮಾರು 97ಕ್ಕೂ ಅಧಿಕ ವಿದೇಶಿಯರು ಸಾವನ್ನಪ್ಪಿರುವ ಘಟನೆ ಬುಧವಾರ ಸಂಭವಿಸಿದೆ.

ಸಾವನ್ನಪ್ಪಿರುವ ದುರ್ದೈವಿಗಳೆಲ್ಲರೂ ಇಂಡೋನೇಷಿಯಾ ಮೂಲದವರು ಎಂದು ತಿಳಿದು ಬಂದಿದೆ. ಮಲೇಷಿಯಾದ ಪಶ್ಚಿಮ ಕರಾವಳಿ ಭಾಗದ ಸಂಗೈ ಏರ್ ಹಿತಂ ಬಳಿ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

Overloaded boat sinks off Malaysia

ಮಲೇಷಿಯಾಗಿಂದ ಅಕ್ರಮವಾಗಿ ಇಂಡೋನೇಷಿಯಾಕ್ಕೆ ಇವರೆಲ್ಲರೂ ತೆರಳುತ್ತಿದ್ದರು. ಮುಸ್ಲಿಂ ಉಪವಾಸ ತಿಂಗಳು ಆರಂಭವಾಗುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂಡೋನೇಷಿಯಾದ ಜನರು ದೋಣಿ ಮೂಲಕ ತೆರಳುತ್ತಿದ್ದರು ಎನ್ನಲಾಗಿದೆ.

ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಈ ವರೆಗೂ ಸುಮಾರು 31 ಜನರನ್ನು ರಕ್ಷಿಸಲಾಗಿದೆ. 42 ಮಂದಿ ನಾಪತ್ತೆಯಾಗಿದ್ದಾರೆ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿದು ಬಂದಿದೆ.

Malaysian Maritime Enforcement Agency (MMEA) ಅಧಿಕಾರಿ ಮಹಮ್ಮದ್ ಜೂರಿ ಪ್ರಕಾರ ಸಾವನ್ನಪ್ಪಿರುವವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ. ದೋಣಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇದ್ದರು. ದೋಣಿ ಯಾನಕ್ಕೆ ಯೋಗ್ಯವಾಗಿರಲಿಲ್ಲ ಎಂದಿದ್ದಾರೆ.

ಐವರು ಭಾರತೀಯರು ಸೇರಿದಂತೆ 239 ಜನರಿದ್ದ, ಮಲೇಷ್ಯಾ ಏರ್ ಲೈನ್ ವಿಮಾನ ಎಂಎಚ್370 ವಿಮಾನ ಹಿಂದೂ ಮಹಾಸಾಗರದಲ್ಲಿ ಮುಳುಗಿದ ದುರಂತದ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. [ಎಂಎಚ್370 ಕಣ್ಮರೆ ಪ್ರಕರಣ ದುರಂತ ಅಂತ್ಯ] (ಐಎಎನ್ಎಸ್)

English summary
A boat carrying 97 foreigners overturned about two nautical miles off the western coast of Malaysia, a media report said here on Wednesday. 33 people were rescued but others remained missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X