India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಕಿನಾ ಫಾಸೊ ದೇಶದಲ್ಲಿ ಭೀಕರ ದಾಳಿ: 50ಕ್ಕೂ ಹೆಚ್ಚು ಮಂದಿ ಸಾವು

|
Google Oneindia Kannada News

ನವದೆಹಲಿ, ಮೇ 26: ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ಬುರ್ಕಿನಾ ಫಾಸೊ (Burkina Faso) ದೇಶದಲ್ಲಿ ನಡೆದ ಸಶಸ್ತ್ರ ದಾಳಿಯೊಂದರಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘೋರ ಘಟನೆ ವರದಿಯಾಗಿದೆ. ಬುರ್ಕಿನಾ ಫಾಸೊ ದೇಶದ ಪೂರ್ವಭಾಗದಲ್ಲಿರುವ ಮಡ್ಜೋರಿ ಎಂಬಲ್ಲಿ ಮೇ 25ರಂದು ಘಟನೆ ನಡೆದಿದೆ ಎಂದು ಆ ಪ್ರದೇಶದ ಗವರ್ನರ್ ಹೂಬರ್ಟ್ ಯಮಿಯೋಗೊ ಇಂದು ಗುರುವಾರ ಮಾಹಿತಿ ನೀಡಿದ್ದಾರೆ.

ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶ್ರೀನಗರ: ಟಿಕ್‌ಟಾಕ್ ಕಲಾವಿದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರುಶ್ರೀನಗರ: ಟಿಕ್‌ಟಾಕ್ ಕಲಾವಿದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು

ಈ ಆಫ್ರಿಕನ್ ರಾಷ್ಟ್ರದಲ್ಲಿ ಇಸ್ಲಾಮೀ ಉಗ್ರಗಾಮಿ ಗುಂಪುಗಳು ಸಕ್ರಿಯವಾಗಿದ್ದು ಬಹಳಷ್ಟು ಬಾರಿ ದಾಳಿಗಳಲ್ಲಿ ಅವುಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಹಿಂಸಾಚಾರಗಳಿಂದಾಗಿ ಕಳೆದ ಕೆಲ ವರ್ಷಗಳಿಂದ ಲಕ್ಷಾಂತರ ಜನರು ಗುಳೆ ಹೋಗುವಂತಾಗಿದೆ.

ಇದೇ ಮೇ ತಿಂಗಳ ಆರಂಭದಲ್ಲಿ ಬುರ್ಕಿನಾ ಫಾಸೊದ ಸಾಹೆಲ್ ಎಂಬ ಪ್ರದೇಶದಲ್ಲಿ ಅಪರಿಚಿತ ಸಶಸ್ತ್ರಧಾರಿ ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ 10 ಸೇನಾ ಯೋಧರು ಸೇರಿ 12 ಮಂದಿ ಬಲಿಯಾಗಿದ್ದರು. ಆಹಾರ ಸರಬರಾಜು ಮಾಡುತ್ತಿದ್ದ ವಾಹನಕ್ಕೆ ಬೆಂಗಾವಲಾಗಿ ಹೋಗುತ್ತಿದ್ದ ಸೇನಾ ಯೋಧರ ತಂಡವೊಂದನ್ನು ಗುರಿಯಾಗಿಸಿ ಆ ಭೀಕರ ದಾಳಿ ನಡೆದಿತ್ತು. ಸತ್ತವರಲ್ಲಿ ಇಬ್ಬರು ನಾಗರಿಕರೂ ಸೇರಿದ್ದರು.

ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲೇ 600 ಮಂದಿ ಹತ್ಯೆಯಾಗಿದ್ದಾರೆಂಬ ಮಾಹಿತಿ ಇದೆ. ಒಂದು ಅಂದಾಜಿನ ಪ್ರಕಾರ 18 ಲಕ್ಷಕ್ಕೂ ಹೆಚ್ಚು ಮಂದಿ ಮನೆಮಠ ಕಳೆದುಕೊಂಡು ಊರು ಬಿಟ್ಟು ಹೋಗಿದ್ದಾರೆ.

ಬುರ್ಕಿನಾ ಫಾಸೊ ದೇಶದಲ್ಲಿ ಉಗ್ರಗಾಮಿ ಸಂಘಟನೆಗಳ ಅಟ್ಟಹಾಸ ಮಾತ್ರವಲ್ಲ, ಅಲ್ಲಿಯ ಭದ್ರತಾ ಪಡೆಗಳೂ ಕೂಡ ನಾಗರಿಕರ ಮೇಲೆ ದೌರ್ಜನ್ಯ ತೋರುತ್ತವೆ ಎಂಬಂತಹ ವರದಿಗಳಿವೆ. ಭದ್ರತಾ ಪಡೆಗಳು ಆಗಾಗ್ಗೆ ಕಾನೂನುಬಾಹಿರವಾಗಿ ನಾಗರಿಕರ ಹತ್ಯೆ ಮತ್ತು ಅಪಹರಣಗಳಂತಹ ಕೃತ್ಯಗಳನ್ನು ಎಸಗುತ್ತಿರುತ್ತಾರಂತೆ. ಮಹಿಳೆಯರ ಮೇಲೆ ಅತ್ಯಾಚಾರ ಅಗುವುದು ಸಾಮಾನ್ಯವಾಗಿದೆ. ಸಣ್ಣ ಮಕ್ಕಳನ್ನು ಸೇನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಕ್ಸಿನ್‌ಹುವಾ ಮೊದಲಾದ ಸುದ್ದಿ ಸಂಸ್ಥೆಗಳು ಹೇಳುತ್ತವೆ.

Over 50 people killed in attack in Burkina Faso

ಬುರ್ಕಿನಾ ಫಾಸೊ ದೇಶದಲ್ಲಿ ಇದೇ ಜನವರಿಯಲ್ಲಿ ಅಧ್ಯಕ್ಷ ರೋಚ್ ಮಾರ್ಕ್ ಕ್ರಿಸ್ಟಿಯನ್ ಕಾಬೋರೆ ಅವರನ್ನು ಕೆಳಗಿಸಿ ಸೇನೆಯೇ ಆಡಳಿತ ನಡೆಸುತ್ತಿದೆ. ಜಿಹಾದಿ ಸಂಬಂಧಿತ ಹಿಂಸಾಚಾರವನ್ನು ಸರಕಾರ ಸರಿಯಾಗಿ ನಿಭಾಯಿಸಲಿಲ್ಲ ಎಂಬ ಕಾರಣಕ್ಕೆ ಮಿಲಿಟರಿಯೇ ಆಡಳಿತ ವಹಿಸಿಕೊಂಡಿದೆ. ಆದರೂ ಕೂಡ ಅಲ್ಲಿ ಹಿಂಸಾಚಾರಗಳು ಕಡಿಮೆ ಆಗುತ್ತಿಲ್ಲ. ಉಗ್ರರ ಅಟ್ಟಹಾಸದ ಜೊತೆಗೆ ಭದ್ರತಾ ಪಡೆಗಳ ದೌರ್ಜನ್ಯವೂ ಸೇರಿಕೊಂಡು ನಾಗರಿಕರನ್ನು ಭಯಭೀತಗೊಳಿಸಿದೆ ಎಂದು ಹೇಳಲಾಗುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
More than 50 persons killed in an armed attack at Madjouri in Eastern region of Burkina Faso. This African nation has been in turmoil from past few years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X