ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ದಿನ ಕ್ವಾರಂಟೈನ್‌ ಕಡ್ಡಾಯ; ಬೆಲ್‌ಗ್ರೇಡ್‌ನಲ್ಲಿ ಸಿಲುಕಿದ 200ಕ್ಕೂ ಹೆಚ್ಚು ಭಾರತೀಯರು

|
Google Oneindia Kannada News

ಬೆಲ್‌ಗ್ರೇಡ್‌, ಜು.12: ಬೆಲ್‌ಗ್ರೇಡ್‌ ವಿಮಾನ ನಿಲ್ದಾಣದಲ್ಲಿ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡ 200 ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವುದಾಗಿ ಸೆರ್ಬಿಯಾದ ಭಾರತೀಯ ರಾಯಭಾರ ಕಚೇರಿ ಘೋಷಿಸಿದೆ.

ಸೆರ್ಬಿಯಾ ಸರ್ಕಾರ ಕಳೆದ ಶುಕ್ರವಾರದಂದು ತಮ್ಮ ಪ್ರಯಾಣದ ನಿರ್ಬಂಧದ ನಿಯಮಗಳನ್ನು ಪರಿಷ್ಕರಿಸಿದೆ. ಹೊಸ ನಿಯಮಗಳ ಪ್ರಕಾರ, ಪ್ರಯಾಣಿಕರು ಏಳು ದಿನಗಳ ಕ್ವಾರಂಟೈನ್‌ಗೆ ಒಳಗಾಗುವುದು ಅಗತ್ಯವಾಗಿದೆ. ಆದರೆ ಪ್ರಯಾಣಿಕರಿಗೆ ಸೆರ್ಬಿಯಾ ತಲುಪುವವರೆಗೆ ಹೊಸ ನಿಯಮದ ಬಗ್ಗೆ ಯಾವುದೇ ಎಚ್ಚರಿಕೆಯಾಗಲಿ ಅಥವಾ ಮಾಹಿತಿಯಾಗಲಿ ತಿಳಿದಿರಲಿಲ್ಲ.

ಕೆನಡಾಕ್ಕೆ ಪ್ರಯಾಣಿಸುವ ಜನರಿಗೆ ಸೆರ್ಬಿಯಾ ಸಾರಿಗೆ ಕೇಂದ್ರವಾಗಿರುವುದು ಭಾರತೀಯರು ಸೆರ್ಬಿಯಾಕ್ಕೆ ಆಗಾಗ್ಗೆ ತೆರಳಲು ಮುಖ್ಯ ಕಾರಣವಾಗಿದೆ.

Over 200 Indians stuck in Belgrade as Serbia imposes 7 day quarantine

ಕೆನಡಾದಲ್ಲಿ ಸರ್ಕಾರದ ಪರಿಷ್ಕೃತ ನಿಯಮಗಳ ಪ್ರಕಾರ, ಭಾರತದಿಂದ ಪ್ರಯಾಣಿಸುವ ಜನರು ಮೂರನೇ ದೇಶದಿಂದ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಕೆನಡಾ ಮತ್ತು ಯುಎಸ್ಎಗೆ ನೇರ ಪ್ರವೇಶವನ್ನು ನಿಷೇಧಿಸಲಾಗಿದೆ. ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಿ ಅದರ ವರದಿ ಪಡೆಯಲು ಬೇಕಾಗಿ ಹಾಗೂ ಇದಕ್ಕಾಗಿ ಬೆಲ್‌ಗ್ರೇಡ್‌ನಲ್ಲಿ ಉಳಿಯಲು ವಿದ್ಯಾರ್ಥಿಗಳು ಸುಮಾರು 1.4 ಲಕ್ಷ ರೂ. ಖರ್ಚು ಮಾಡಬೇಕಾಗಿ ಬಂದಿದೆ.

ಪ್ರಯಾಣಿಕರೊಬ್ಬರು ಸಹಾಯ ಕೇಳಲು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ ಬಳಿಕ ಈ ಸುದ್ದಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಯಾಣಿಕ ನಿಖಿಲ್‌ ಪರಾಶರ್‌, "ಸೆರ್ಬಿಯಾದ ಮೂಲಕ ಸಾಗಬೇಡಿ, ಏಕೆಂದರೆ 7 ದಿನಗಳಿಗಿಂತ ಕಡಿಮೆ ಕಾಲ ಕ್ವಾರಂಟೈನ್‌ ಕೂತು ಭಾರತೀಯರನ್ನು ಸಾಗಲು ಪ್ರವೇಶವನ್ನು ನಿರಾಕರಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಹಾರಾಟ ನಡೆಸುವ ಮೊದಲು ಪ್ರಯಾಣ ಸಲಹೆಯನ್ನು ಓದಿ. ತುರ್ತು ಸಂದರ್ಭಗಳನ್ನು ತಪ್ಪಿಸಲು ಪ್ರಯಾಣದ ಬಗ್ಗೆ ವಿಮಾನ ಸಂಸ್ಥೆಯಿಂದ ದೃಢೀಕರಿಸಿ," ಎಂದು ಹೇಳಿದ್ದಾರೆ.

ಸೆರ್ಬಿಯಾದ ಭಾರತೀಯ ರಾಯಭಾರ ಕಚೇರಿ ಪ್ರಯಾಣಿಕರ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲು ತಮ್ಮದೇ ಆದ ಅಧಿಕಾರಿಗಳನ್ನು ಕಳುಹಿಸಿದೆ.

ಈ ಬಗ್ಗೆ ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ರಾಯಭಾರ ಕಚೇರಿ, "ಬೆಲ್‌ಗ್ರೇಡ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ 205 ಭಾರತೀಯರಲ್ಲಿ 120 ಮಂದಿ ಇಂದು ಲುಫ್ಥನ್ಸ್‌ಗೆ ಪ್ರಯಾಣಿಸುತ್ತಿದ್ದಾರೆ. ಇತರ ವಿಮಾನಯಾನ ಸಂಸ್ಥೆಗಳಲ್ಲಿ ಪ್ರಯಾಣಿಸುವ ಭಾರತೀಯರು ಇಂದು ಅಥವಾ ನಾಳೆ ಹಾರಾಟ ನಡೆಸಲಿದ್ದಾರೆ. ಎಲ್ಲಾ ಭಾರತೀಯರ ಬಗ್ಗೆ ಖಚಿತಪಡಿಸಿಕೊಳ್ಳಲು ನಮ್ಮ ಅಧಿಕಾರಿಗಳು ವಿಮಾನ ನಿಲ್ದಾಣ ಅಧಿಕಾರಿಗಳು / ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ," ಎಂದು ತಿಳಿಸಿದ್ದಾರೆ.

Recommended Video

Rahul Gandhi's Tweet, ಭಾರತ ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Over 200 Indians stuck in Belgrade as Serbia imposes 7 day quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X