ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಕೋವಿಡ್ ಕೇಸ್‌ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ವಿಶ್ವದ ವಿವಿಧ ದೇಶಗಳಲ್ಲಿ ಕಳೆದ 1 ವಾರದಲ್ಲಿ 2 ಮಿಲಿಯನ್ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಡಿಮೆ ಅವಧಿಯಲ್ಲಿ ಇಷ್ಟು ಪ್ರಕರಣ ದಾಖಲಾಗಿದ್ದು ಇದೇ ಮೊದಲು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಒಂದು ವಾರದ ಕೋವಿಡ್ ವರದಿಯ ಅಧ್ಯಯನ ನಡೆಸಿರುವ ವಿಶ್ವ ಆರೋಗ್ಯ ಸಂಸ್ಥೆ ಹೊಸ ಪ್ರಕರಣಗಳ ದಾಖಲಾತಿ ಬಗ್ಗೆ ಮಾಹಿತಿ ನೀಡಿದೆ. ಯುರೋಪಿಯನ್ ದೇಶಗಳಲ್ಲಿ ಹೊಸ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದೆ.

2020 ಅಂತ್ಯದೊಳಗೆ ಪಿಫೈಜರ್‌ನಿಂದ 4 ಕೋಟಿ ಕೊರೊನಾ ಲಸಿಕೆ 2020 ಅಂತ್ಯದೊಳಗೆ ಪಿಫೈಜರ್‌ನಿಂದ 4 ಕೋಟಿ ಕೊರೊನಾ ಲಸಿಕೆ

ಯುರೋಪಿಯನ್ ದೇಶಗಳಲ್ಲಿ 1.3 ಮಿಲಿಯನ್ ಹೊಸ ಪ್ರಕರಣ ದಾಖಲಾಗಿದೆ. ಇದು ವಿಶ್ವದಾದ್ಯಂತ ಶೇ 46ರಷ್ಟಿದೆ ಇದೆ ಎಂದು ವರದಿ ಹೇಳಿದೆ. ಕಳೆದ ಏಳು ದಿನಗಳಲ್ಲಿ ಸಾವಿನ ಸಂಖ್ಯೆ ಸಹ ಯುರೋಪಿನ್ ದೇಶಗಳಲ್ಲಿ ಹೆಚ್ಚಾಗಿದೆ.

ಕೊರೊನಾ ಸೋಂಕಿತರಿಗೆ ವರ್ಷದೊಳಗೆ ಮತ್ತೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು: ಅಧ್ಯಯನಕೊರೊನಾ ಸೋಂಕಿತರಿಗೆ ವರ್ಷದೊಳಗೆ ಮತ್ತೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು: ಅಧ್ಯಯನ

 Over 2 Million COVID Cases Reported In Just One Week WHO

ಯುರೋಪಿನ್ ಒಕ್ಕೂಟದ 21 ದೇಶಗಳಲ್ಲಿ ಆಸ್ಪತ್ರೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಶೇ 18ರಷ್ಟು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಶೇ 7ರಷ್ಟು ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಪರಿಷತ್ ಚುನಾವಣೆ; ಮತದಾನ ಮಾಡಿದ ಕೋವಿಡ್ ಸೋಂಕಿತರು ಪರಿಷತ್ ಚುನಾವಣೆ; ಮತದಾನ ಮಾಡಿದ ಕೋವಿಡ್ ಸೋಂಕಿತರು

ವಿಶ್ವಮಟ್ಟದಲ್ಲಿ ಹೊಸ ಕೋವಿಡ್ ಪ್ರಕರಣ ದಾಖಲಾಗುವ ಸಂಖ್ಯೆಯಲ್ಲಿ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಯಾವುದೇ ಬದಲಾವಣೆಯಾಗಿಲ್ಲ. ಭಾರತ, ಫ್ರಾನ್ಸ್, ಬ್ರೆಜಿಲ್ ದೇಶಗಳಲ್ಲಿ ಹೊಸ ಪ್ರಕರಣದ ಸಂಖ್ಯೆ ಹಾಗೆಯೇ ಇದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಕಳೆದ 2 ವಾರದಲ್ಲಿ ಹೊಸ ಪ್ರಕರಣ, ಸಾವಿನ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಸೆಪ್ಟೆಂಬರ್‌ನಲ್ಲಿ ಪ್ರತಿದಿನ 97 ಸಾವಿರ ಪ್ರಕರಣ ದಾಖಲಾಗುತ್ತಿತ್ತು. ಪ್ರಸ್ತುತ ಅದು 40 ರಿಂದ 50 ಸಾವಿರಕ್ಕೆ ಇಳಿಕೆಯಾಗಿದೆ.

English summary
In a weekly analysis of the global Covid-19 situation WHO said countries world over have reported more than 2 million cases in the last one week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X