ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ : ಚರ್ಚ್ ಮೇಲೆ ತಾಲಿಬಾನ್ ಉಗ್ರರ ದಾಳಿ

By Mahesh
|
Google Oneindia Kannada News

ಲಾಹೋರ್, ಮಾ.15: ಯೋಹಾನಬಾದ್ ಪ್ರದೇಶದಲ್ಲಿರುವ ಚರ್ಚ್‌ ಮೇಲೆ ತಾಲಿಬಾನಿ ಉಗ್ರರು ಸರಣಿ ಆತ್ಮಾಹುತಿ ಬಾಂಬ್ ಸ್ಫೋಟ ನಡೆಸಿದ ಘಟನೆ ಭಾನುವಾರ ನಡೆದಿದೆ. ಬಾಂಬ್ ಸ್ಫೋಟದಲ್ಲಿ 15ಕ್ಕೂ ಅಧಿಕ ಮಂದಿಯನ್ನು ಬಲಿಯಾಗಿದ್ದರೆ 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಸಾಮೂಹಿಕ ಪ್ರಾರ್ಥನೆಗೆ ಯೋಹಾನಬಾದ್ ಪ್ರದೇಶದಲ್ಲಿರುವ ಚರ್ಚ್‌ಗಳಿಗೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಆಗಮಿಸಿದ್ದರು. ಈ ಸಂದರ್ಭ ಆತ್ಮಾಹುತಿ ಬಾಂಬ್ ದಾಳಿಕೋರರು ಈ ಎರಡು ಚರ್ಚ್‌ಗಳಿಗೆ ನುಗ್ಗಿ ತಮ್ಮನ್ನು ತಾವು ಸ್ಫೋಟಿಸಿಕೊಂಡರು.

ಸ್ಫೋಟದ ರಭಸಕ್ಕೆ ಪ್ರಾರ್ಥನೆಯಲ್ಲಿ ತೊಡಗಿದ್ದ ಅನೇಕರು ಧ್ವಂಸವಾಗಿಬಿಟ್ಟರು. ಅನೇಕರು ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಜೀವ ಉಳಿಸಿಕೊಂಡವರು ಹೊರಕ್ಕೆ ಓಡಿ ಬರತೊಡಗಿದ್ದರು. ಒಟ್ಟಾರೆ ಅಲ್ಲಿನ ಪರಿಸ್ಥಿತಿ ಭೀಕರವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Over 15 dead, 50 injured in suicide blasts at 2 churches in Pakistan

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆತ್ಮಾಹುತಿ ಬಾಂಬ್ ದಾಳಿಗಳ ಹೊಣೆಯನ್ನು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ಹೊತ್ತುಕೊಂಡಿದೆ.

ಯೋಹಾನಬಾದ್ ಪ್ರದೇಶದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಕ್ರೈಸ್ತ ಸಮುದಾಯದವರಿದ್ದಾರೆ ಹಾಗೂ 150ಕ್ಕೂ ಅಧಿಕ ಚರ್ಚ್ ಗಳಿವೆ. 2013ರಲ್ಲಿ ಕೂಡಾ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದ ಮೇಲೆ ಉಗ್ರಗಾಮಿ ಗುಂಪು ದಾಳಿ ನಡೆಸಿ ಮಾರಣಹೋಮ ನಡೆಸಿತ್ತು.

ಸುಮಾರು 80 ಜನ ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಯೋಹಾನಬಾದ್ ನಲ್ಲಿ ನಡೆದ ಆತ್ಮಾಹುತಿ ದಳದ ದಾಳಿಯನ್ನು ಖಂಡಿಸಿ ಕ್ರೈಸ್ತ ಸಮುದಾಯ ರಸ್ತೆಗಿಳಿದು ಪ್ರತಿಭಟನೆ ನಡೆಸಿದೆ.

ಪಿಟಿಐ

English summary
Two Taliban suicide bombers on Sunday blew themselves up in two packed churches during mass, killing 15 people and wounding 50 others in Pakistan's biggest Christian neighbourhood in Lahore, the capital of Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X