ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೊರಟಿದ್ದ 140 ಸಿಖ್ಖರನ್ನು ತಡೆದ ತಾಲಿಬಾನಿಗಳು

|
Google Oneindia Kannada News

ಕಾಬೂಲ್, ಆಗಸ್ಟ್ 26:ಅಫ್ಘಾನಿಸ್ತಾನದಿಂದ ದೆಹಲಿಗೆ ಹೊರಟಿದ್ದ 140 ಸಿಖ್ಖರನ್ನು ತಾಲಿಬಾನಿಗಳು ತಡೆದಿದ್ದಾರೆ.

ಅಫ್ಘಾನಿಸ್ತಾನದ ಅಧಿಕಾರವನ್ನು ವಶಪಡಿಸಿಕೊಂಡಿರುವ ತಾಲಿಬಾನ್, ಮಾನವ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಬಗೆಗಿನ ಕಾಳಜಿಯ ಬಗ್ಗೆ ಮಾತುಗಳನ್ನಾಡುತ್ತಿದೆ. ಆದರೆ ತಾಲಿಬಾನ್ ಕೆಲವು ನಿರ್ಧಾರಗಳು ಈಗಲೂ ಪ್ರಪಂಚದ ನಿದ್ದೆಗೆಡಿಸಿದೆ.

ಕಾಬೂಲ್ ವಿಮಾನ ನಿಲ್ದಾಣಕ್ಕೆ ಉಗ್ರ ದಾಳಿಯ ಎಚ್ಚರಿಕೆಕಾಬೂಲ್ ವಿಮಾನ ನಿಲ್ದಾಣಕ್ಕೆ ಉಗ್ರ ದಾಳಿಯ ಎಚ್ಚರಿಕೆ

ಈ ಸಿಖ್ಖರು ಶ್ರೀ ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರನ್ನು ಕಾಬುಲ್ ವಿಮಾನ ನಿಲ್ದಾಣ ತಲುಪಲು ಅವಕಾಶ ನೀಡಲಿಲ್ಲ.

Over 140 Afghan Sikh Pilgrims Stopped From Coming To India

ಗುರುವಾರ ಅಫ್ಘಾನಿಸ್ತಾನದಿಂದ ದೆಹಲಿಗೆ ಬರುತ್ತಿದ್ದ ಸುಮಾರು 140 ಸಿಖ್ಖರನ್ನು ವಿಮಾನ ಹತ್ತದಂತೆ ತಾಲಿಬಾನಿಗಳು ತಡೆದಿದ್ದಾರೆ.

ಭಾರತ ವಿಶ್ವ ವೇದಿಕೆ ಅಧ್ಯಕ್ಷ ಪುನಿತ್ ಸಿಂಗ್ ಚಾಂದೋಕ್ ಅವರು ಅಫಘಾನ್ ಹಿಂದೂ ಮತ್ತು ಸಿಖ್ ಯಾತ್ರಿಕರಿಗೆ ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಇದಕ್ಕಾಗಿ ತಾಲಿಬಾನ್ ನಾಯಕತ್ವಕ್ಕೆ ಮನವಿ ಮಾಡಲಾಗಿದೆ. ಆದರೆ, ಪ್ರಸ್ತುತ, ಈ ಮನವಿಗೆ ತಾಲಿಬಾನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸಮಾರಂಭದಲ್ಲಿ ಅಫ್ಘಾನ್ ಸಿಖ್ಖರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಭಾರತ ಸರ್ಕಾರವನ್ನು ವಿನಂತಿಸಲಾಗಿತ್ತು. ಬುಧವಾರ ರಾತ್ರಿ, ಈ ಸಿಖ್ ಯಾತ್ರಿಗಳನ್ನು 15 ಗಂಟೆಗಳಿಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದರು. ಕೊನೆಗೆ ಎಲ್ಲರನ್ನೂ ವಾಪಸ್ ಕಳುಹಿಸಲಾಯಿತು ಎಂದು, ವಿಕಾಸಪುರಿಯ ಗುರು ನಾನಕ್ ಸಾಹಿಬ್ ಜಿ ಗುರುದ್ವಾರದ ಅಧ್ಯಕ್ಷರಾದ ಗುಲ್ಜಿತ್ ಸಿಂಗ್ ತಿಳಿಸಿದ್ದಾರೆ.

9ನೇ ಗುರು ಶ್ರೀ ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಕೀರ್ತನ ದರ್ಬಾರ್ ಅನ್ನು ಆಯೋಜಿಸಲಾಗಿದೆ.

ಪ್ರಪಂಚದ ವಿವಿಧ ಭಾಗಗಳಿಂದ ಸಮುದಾಯದ ಸದಸ್ಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದೇ ಸಮಾರಂಭದಲ್ಲಿ ಭಾಗಿಯಾಗಲು ಅಫ್ಘಾನಿಸ್ತಾನದಿಂದ 140 ಜನ ಆಗಮಿಸಬೇಕಿತ್ತು. ಆದರೆ, ಅವರಿಗೆ ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪಲು ಅವಕಾಶ ನೀಡಲಾಗಿಲ್ಲ.

ಅಫ್ಘಾನ್​ ಹಿಂದು-ಸಿಖ್​ ಸಮುದಾಯದವರಿಗೆ ಎಲ್ಲ ರೀತಿಯ ಸಹಾಯ, ವ್ಯವಸ್ಥೆ ಮಾಡಲು ಭಾರತ ಮುಂದಾಗಿದೆ. ಇವರನ್ನು ಇಲ್ಲಿಂದ ಕರೆದುಕೊಂಡು ಹೋಗಲು ವಿಮಾನವೂ ಸಿದ್ಧವಾಗಿತ್ತು.

ಆದರೆ ಕೆನಡಾ ಅಥವಾ ಅಮೆರಿಕ್ಕೆ ಹೋಗಬೇಕು ಎಂಬ ಒಂದೇ ಕಾರಣಕ್ಕೆ ವಿಮಾನವನ್ನು ಎರಡು ಬಾರಿ ತಪ್ಪಿಸಿಕೊಂಡಿದ್ದಾರೆ. ನಮಗೂ ಸ್ಥಳಾಂತರ ಪ್ರಕ್ರಿಯೆಯನ್ನು ವೇಗವಾಗಿ ನಡೆಸುವ ಒತ್ತಡ ಇದೆ. ತುಂಬ ಸಮಯವೂ ಇಲ್ಲ ಎಂದು ತಿಳಿಸಿದ್ದಾರೆ. ಈ ಮಧ್ಯೆ ಅಫ್ಘಾನ್​ ಸಿಖ್​ ನಾಯಕ ತಲ್ವಿಂದರ್ ಸಿಂಗ್​ ಎಂಬುವರು, ತಾವು ಅಮೆರಿಕ ಅಥವಾ ಕೆನಡಾಕ್ಕೆ ಹೋಗುತ್ತೇವೆ ಎಂದು ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.

ಇನ್ನು ಈ ಹಿಂದು -ಸಿಖ್​​ ಸಮುದಾಯದ ಬಹುತೇಕರು ಭಾರತದಲ್ಲಿ ಉದ್ಯೋಗಾವಕಾಶ ಇಲ್ಲದ ಕಾರಣಕ್ಕೆ ಅಲ್ಲಿ ಹೋಗಲು ಇಚ್ಛಿಸುತ್ತಿಲ್ಲ ಎಂದು ಅಪ್ಘಾನ್​ ಮೂಲಗಳು ತಿಳಿಸಿವೆ. ಭಾರತಕ್ಕೆ ಹೋದರೆ ಹಣೆ ಬರಹ ಏನಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ.

ಅಲ್ಲಿ ಉದ್ಯೋಗಕ್ಕೆ ಅವಕಾಶ ಇಲ್ಲ. ಅಲ್ಲಿ ಹೋಗಿರುವವರೇ ಅನೇಕರು ಬೇರೆ ದೇಶಗಳಿಗೆ ಹೋಗಿದ್ದಾರೆ ಎಂದು ಅಫ್ಘಾನ್ ಹಿಂದು-ಸಿಖ್​ರು ಹೇಳಿದ್ದಾಗಿ ವರದಿಯಾಗಿದೆ.

English summary
At least 140 Afghan Sikh pilgrims scheduled to arrive in Delhi on Thursday to attend the 400th birth anniversary of Sri Guru Tegh Bahadur, were stopped by the Taliban to board a flight from war-torn Kabul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X