ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬೇಟೆಗೆ ಶೀಘ್ರವೇ ಸಜ್ಜಾಗಲಿದ್ದಾನೆ ಬಿನ್ ಲಾಡೆನ್ ಪುತ್ರ?

ಬಿನ್ ಲಾಡೆನ್ ನನ್ನು ಪಾಕಿಸ್ತಾನದೊಳಗಿದ್ದ ಆತನ ಅಡಗುದಾಣಕ್ಕೆ ರಹಸ್ಯವಾಗಿ ನುಗ್ಗಿ ಅಮೆರಿಕಾ ಸೇನೆಯು ಸದೆಬಡಿದಾಗ ಹಮ್ಜಾನ ವಯಸ್ಸು ಕೇವಲ 22 ವರ್ಷ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ವಾಷಿಂಗ್ಟನ್, ಮೇ 13: ಕುಖ್ಯಾತ ಭಯೋತ್ಪಾದನ ಬಿನ್ ಲಾಡೆನ್ ಪುತ್ರನಾದ ಹಮ್ಜಾ (28 ವರ್ಷ) ಶೀಘ್ರದಲ್ಲೇ ತನ್ನ ತಂದೆ ಬಿಟ್ಟು ಹೋದ ಅಲ್ ಖೈದಾ ಸಂಘಟನೆಗೆ ಮುಖ್ಯಸ್ಥನಾದರೆ ಅಚ್ಚರಿಪಡಬೇಕಿಲ್ಲ ಎಂದು ಅಮೆರಿಕದ ಸರ್ಕಾರಿ ತನಿಖಾ ಸಂಸ್ಥೆಯಾದ ಎಫ್ ಬಿಐನ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆ ಅಧಿಕಾರಿ ಹೆಸರು ಅಲಿ ಸೋಫಾನ್. ಇವರು, 9/11 ನ ಅಮೆರಿಕ ದಾಳಿಯ ನಂತರ ಎಫ್ ಬಿಐ ಕೈಗೊಂಡಿದ್ದ ತನಿಖಾ ತಂಡದಲ್ಲಿ ಸೇವೆ ಸಲ್ಲಿಸಿದ್ದರು.

Osama Bin Laden's Son 'Bent On Avenging His Father's Death': Ex-FBI Agent

ತಮ್ಮ ಮಾತುಗಳಿಗೆ ಬೆಂಬಲವಾಗಿ ಅವರು, ಕೆಲವು ವರ್ಷಗಳ ಹಿಂದೆ ಹಮ್ಜಾ ತನ್ನ ಆತ್ಮೀಯರೊಂದಿಗೆ ನಡೆಸಿದ ಪತ್ರ ವ್ಯವಹಾರಗಳ ದಾಖಲೆಗಳನ್ನು ತೋರುತ್ತಾರೆ.

ಬಿನ್ ಲಾಡೆನ್ ನನ್ನು ಪಾಕಿಸ್ತಾನದೊಳಗಿದ್ದ ಆತನ ಅಡಗುದಾಣಕ್ಕೆ ರಹಸ್ಯವಾಗಿ ನುಗ್ಗಿ ಅಮೆರಿಕಾ ಸೇನೆಯು ಸದೆಬಡಿದಾಗ ಹಮ್ಜಾನ ವಯಸ್ಸು ಕೇವಲ 22 ವರ್ಷ.

ವರ್ಷಾನುಗಟ್ಟಲೆ ತನ್ನ ತಂದೆಯಿಂದ ದೂರವಿದ್ದು, ಒಂದಿಲ್ಲೊಂದು ದಿನ ತಂದೆಯನ್ನು ಭೇಟಿಯಾಗುತ್ತೇನೆಂದು ಕನಸು ಕಾಣುತ್ತಿದ್ದ ಆ ಹುಡುಗನಿಗೆ ಸಿಕ್ಕಿದ್ದು ಅಪ್ಪನ ಸಾವಿನ ದುರ್ವಾರ್ತೆ.

ಇದರಿಂದ ಘಾಸಿಗೊಂಡಿದ್ದ ಆ ಹುಡುಗನ ಮನಸ್ಸಿಗೆ ವಿಷ ತುಂಬಿದ ಲಾಡೆನ್ ನ ಆಪ್ತರು, ಮುಂದೊಂದು ದಿನ ತಂದೆ ಬಿಟ್ಟುಹೋದ ಸ್ಥಾನವನ್ನು ತುಂಬಬೇಕು, ತಂದೆಯನ್ನು ಕೊಂದವರ ವಿರುದ್ಧ (ಅಮೆರಿಕ) ಸೇಡು ತೀರಿಸಿಕೊಳ್ಳಬೇಕೆಂದು ಹೇಳುತ್ತಾ ಬಂದಿದ್ದರು.

ಈ ಬಗ್ಗೆ ಅನೇಕ ಪತ್ರ ವ್ಯವಹಾರಗಳು ನಡೆದಿದ್ದು ಅವುಗಳನ್ನು ತಾವು ಕಲೆಹಾಕಿರುವುದಾಗಿ ಅಲಿ ಸೋಫಾನ್ ತಿಳಿಸಿದ್ದಾರೆ. ಒಟ್ಟಾರೆಯಾಗಿ, ಮರಿ ಬಿನ್ ಲಾಡೆನ್, ಗಾಯಗೊಂಡ ಹುಲಿಯಂತೆ ಇನ್ನು ಕೆಲವೇ ವರ್ಷಗಳಲ್ಲಿ ಮತ್ತೆ ಕದನಕ್ಕಿಳಿಯುತ್ತಾನೆಂದು ಅವರು ತಿಳಿಸಿದ್ದಾರೆ.

English summary
Osama bin Laden's son Hamza is poised to lead a stronger, larger al Qaeda and is "bent on avenging" his father's death, according to a former FBI agent familiar with the personal letters seized in a dramatic US raid that killed the al Qaeda leader in Pakistan's Abbottabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X