ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೇಲೆ ದಾಳಿಗೆ ಪಿಒಕೆ ಪ್ರಧಾನಿಯಿಂದ ಪಾಕಿಸ್ತಾನಕ್ಕೆ ಒತ್ತಾಯ

|
Google Oneindia Kannada News

ಲಾಹೋರ್, ಮೇ 13: ಭಾರತದ ಮೇಲೆ ದಾಳಿ ನಡೆಸಿ ಎಂದು ಪಾಕ್ ಆಕ್ರಮಿತ ಪ್ರದೇಶ ಪ್ರಧಾನಿ ಪಾಕಿಸ್ತಾನಕ್ಕೆ ಆಗ್ರಹಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ಸೇರಿಸಿಕೊಂಡು ಭಾರತೀಯ ಹವಾಮಾನ ಇಲಾಖೆ ಹವಾಮಾನ ವರದಿ ಪ್ರಕಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಾಜಾ ಫಾರೂಕ್ ಹೈದರ್, ಭಾರತದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಗಿಲ್ಗಿಟ್, ಬಲ್ಟಿಸ್ತಾನ ಚುನಾವಣೆ: ಇಮ್ರಾನ್ ನಡೆಗೆ ಪಿಒಕೆ ಜನರಿಂದ ವಿರೋಧ ಗಿಲ್ಗಿಟ್, ಬಲ್ಟಿಸ್ತಾನ ಚುನಾವಣೆ: ಇಮ್ರಾನ್ ನಡೆಗೆ ಪಿಒಕೆ ಜನರಿಂದ ವಿರೋಧ

ಪಿಒಕೆಯನ್ನು ಭಾರತದ್ದು ಎಂದು ಬಿಂಬಿಸುವಂತೆ ಹವಾಮಾನ ವರದಿ ಪ್ರಕಟ ಮಾಡಲಾಗಿದ್ದು, ಭಾರತದ ಈ ಉದ್ಧಟತನಕ್ಕೆ ತಕ್ಕ ಶಾಸ್ತಿ ಮಾಡಬೇಕು. ಕೂಡಲೇ ಭಾರತದ ಮೇಲೆ ಸೇನಾ ದಾಳಿ ನಡೆಸಿ ಎಂದು ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ಗೆ ಒತ್ತಾಯಿಸಿದ್ದಾರೆ.

ಭಾರತದ ಮೇಲೆ ಕೂಡಲೇ ಸೇನಾ ದಾಳಿ ನಡೆಸಿ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಒತ್ತಾಯಿಸಿದ್ದಾರೆ.

ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಪತ್ತೆಗೆ ಗುಪ್ತಚರ ಸೇವೆ ಬಳಕೆಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಪತ್ತೆಗೆ ಗುಪ್ತಚರ ಸೇವೆ ಬಳಕೆ

ಗಡಿ ನಿಯಂತ್ರಣ ಗ್ರಾಮಗಳಿಗೆ ಭೇಟಿ

ಗಡಿ ನಿಯಂತ್ರಣ ಗ್ರಾಮಗಳಿಗೆ ಭೇಟಿ

ಗಡಿ ನಿಯಂತ್ರಣ ರೇಖೆಯ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಪ್ರತಿಕ್ರಿಯೆ ಕೊಟ್ಟ ರಾಜಾ ಫಾರೂಕ್ ಹೈದರ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಭಾರತಕ್ಕೆ ಉತ್ತರ ನೀಡಬೇಕಿದೆ. ಕೇವಲ ಮೌಖಿಕ ಹೇಳಿಕೆಗಳು ಮಾತ್ರ ಕೆಲಸ ಮಾಡಲ್ಲ. ನೀವು ಮುಂದೆ ಬಂದು ಭಾರತದ ಮೇಲೆ ಸೇನಾ ದಾಳಿ ನಡೆಸುವಂತೆ ಆದೇಶಿಸಬೇಕು. ಜೊತೆಗೆ ನಿಮ್ಮ ಸಹೋದರ ಹಾಗೂ ಸಹೋದರಿಯರನ್ನು ರಕ್ಷಿಸುವುದು ನಿಮ್ಮ ಕರ್ತವ್ಯ ಎಂದು ಹೇಳಿದರು.

ವಿವಾದಾತ್ಮಕ ಹೇಳಿಕೆ ಮುಂದುವರಿಕೆ

ವಿವಾದಾತ್ಮಕ ಹೇಳಿಕೆ ಮುಂದುವರಿಕೆ

ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಪಿಒಕೆ ಪ್ರಧಾನಿ ರಾಜಾ ಫಾರೂಕ್ ಹೈದರ್ ಅವರು, ಈ ಹಿಂದೆ ಕೂಡ ಕಾಶ್ಮೀರ ವಿಚಾರವಾಗಿ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಕಾರ್ಯಾಚರಣೆ (ಭಾರತದ ಗಡಿ ಒಳ ನುಸುಳಿವಿಕೆ ಮತ್ತು ಭಯೋತ್ಪಾದನಾ ಚಟುವಟಿಕೆ) ನಿರಂತರವಾಗಿರಬೇಕು. ಆಗ ಪಿಒಕೆ ನೆಮ್ಮದಿಯಾಗಿರುತ್ತದೆ ಎಂದು ಹೇಳಿದ್ದರು.

ಇಮ್ರಾನ್ ಖಾನ್ ತಾಳ್ಮೆ ಪ್ರಶ್ನಿಸಿದ ಹೈದರ್

ಇಮ್ರಾನ್ ಖಾನ್ ತಾಳ್ಮೆ ಪ್ರಶ್ನಿಸಿದ ಹೈದರ್

ಭಾರತಕ್ಕೆ ಸಂಬಂಧಿಸಿದಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ತಾಳ್ಮೆಯ ನಡೆಯನ್ನು ಪ್ರಶ್ನಿಸಿರುವ ಹೈದರ್, ಇಮ್ರಾನ್ ಖಾನ್ ಇಂತಹ ತಂತ್ರ ಮತ್ತು ವಿಧಾನ 70 ಅಲ್ಲ... 700 ವರ್ಷಗಳಾದರೂ ಪಿಒಕೆಗೆ ಸ್ವಾಯತ್ತತೆ ತಂದು ಕೊಡುವುದಿಲ್ಲ. ಕಾಶ್ಮೀರ ಎಂದೂ ಸ್ವತಂತ್ರವಾಗುವುದಿಲ್ಲ ಎಂದು ಹೇಳಿದ್ದರು. ಅವರ ಈ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿತ್ತು.

ಭಾರತೀಯ ಹವಾಮಾನ ಇಲಾಖೆಯಿಂದ ಪಾಕಿಸ್ತಾನ ಹವಾಮಾನ ವರದಿ

ಭಾರತೀಯ ಹವಾಮಾನ ಇಲಾಖೆಯಿಂದ ಪಾಕಿಸ್ತಾನ ಹವಾಮಾನ ವರದಿ

ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್ ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶಗಳನ್ನು ಸೇರಿಸಿ ಭಾರತದ ಹವಾಮಾನ ಇಲಾಖೆ(IMD) ಹವಾಮಾನ ವರದಿ ಪ್ರಕಟಿಸಿತ್ತು.ಐಎಂಡಿಯ ಈ ನಡೆಯಿಂದಾಗಿ ಪಾಕ್ ತೀವ್ರ ಮುಜುಗರಕ್ಕೀಡಾಗಿದ್ದಲ್ಲದೇ, ಭಾರತದ ಏಟಿಗೆ ಎದಿರೇಟು ನೀಡಲು ಸಜ್ಜಾಗಿ ಅದರಂತೆ ಲಡಾಖ್‌ನ ಹವಾಮಾನ ವರದಿ ಪ್ರಕಟಿಸಿದೆ.

ಲಡಾಖ್‌ನ ಹವಾಮಾನ ಕುರಿತು ವರದಿ ಪ್ರಕಟಿಸಿದ ರೇಡಿಯೋ ಪಾಕಿಸ್ತಾನದ ವರದಿಗಾರ, ಲಡಾಕ್‌ನಲ್ಲಿ ಅತೀ ಹೆಚ್ಚು(Maximum) -4 ಡಿಗ್ರಿ ಸೆಲ್ಸಿಯಸ್ ಹಾಗೂ ಅತೀ ಕಡಿಮೆ(Minimum) -1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ತಪ್ಪಾಗಿ ಮಾಹಿತಿ ನೀಡಿದ್ದಾನೆ.
ಆದರೆ ಲಡಾಖ್‌ ಹವಾಮಾನ ವರದಿ ಪ್ರಕಟಿಸಿರುವ ಪಾಕಿಸ್ತಾನ, ಹವಾಮಾನ ವರದಿಯಲ್ಲಿ ತಪ್ಪು ಅಂಕಿ ಅಂಶ ನೀಡಿರುವುದು ನೆಟ್ಟಿಗರಿಗೆ ಪಾಕಿಸ್ತಾನವನ್ನು ಟ್ರೋಲ್ ಮಾಡಲು ಅವಕಾಶ ಒದಗಿಸಿದೆ.

English summary
Pakistan-occupied Kashmir (PoK) Prime Minister Raja Farooq Haider on Tuesday urged Pakistan PM Imran Khan to attack India with forces. He also said that since India is giving weather reports on PoK, it's time Pakistan start updating on Delhi as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X