• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಕೊರಿಯಾ ಸರ್ವಾಧಿಕಾರಿ ಸಾವಿನ ಸುದ್ದಿಯ ಸುತ್ತ: ಏನಿದು ಅಮೆರಿಕಾದ ಒಪ್ಲಾನ್ 5029 ಕಾರ್ಯಾಚರಣೆ?

|

ತನ್ನ ಚಿತ್ರವಿಚಿತ್ರ ಧೋರಣೆಗಳಿಂದ ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಸಡ್ಡು ಹೊಡೆದ ಉತ್ತರ ಕೊರಿಯಾದ ಅಧ್ಯಕ್ಷ ಕಮ್ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಸಾವಿನ ಸುದ್ದಿಗಳು ಹರಿದಾಡುತ್ತಲೇ ಇವೆ. ಅಲ್ಲಿನ ಮಾಧ್ಯಮಗಳು ಈ ಬಗ್ಗೆ ಬಾಯಿ ಬಿಚ್ಚುತ್ತಿಲ್ಲ. ಆದರೆ, 23 ದಿನಗಳ ಬಳಿಕ ಕಿಮ್ ಜಾಂಗ್ ಫರ್ಟಿಲೈಜರ್ ಕಾರ್ಖಾನೆಯೊಂದರ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಕಿಮ್ ಜಾಂಗ್ ಉನ್ ಅವರ ಬ್ರೈನ್ ಡೆಡ್ ಆಗಿದೆ. ಕೋಮಾಕ್ಕೆ ಜಾರಿ ನಂತರ ಮೃತ ಪಟ್ಟಿದ್ದಾರೆ. ಇವರ ಕಿರಿಯ ಸಹೋದರಿ ಕಿಮ್ ಯೋ, ಕಿಮ್ ಜಾಂಗ್ ನ ಉತ್ತರಾಧಿಕಾರಿಯಾಗಲಿದ್ದಾರೆ ಎನ್ನುವ ಅನಧಿಕೃತ ಸುದ್ದಿಗಳು ಹರಿದಾಡುತ್ತಿವೆ.

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಶವಪೆಟ್ಟಿಗೆ ರಹಸ್ಯ ಬಯಲು

ಉತ್ತರ ಕೊರಿಯಾದ ಜೊತೆ ಉತ್ತಮ ಸಂಬಂಧವನ್ನು ಹೊಂದಿರದ ಅಮೆರಿಕ, ಗಡಿ ಹಂಚಿ ಕೊಂಡಿರುವ ದಕ್ಷಿಣ ಕೊರಿಯಾ ಮತ್ತು ಜಗತ್ತಿಗೆಲ್ಲಾ ವೈರಸ್ ಹರಡಿದ ಚೀನಾ, ಅಲ್ಲಿನ ಪ್ರತೀ ಬೆಳವಣಿಗೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿವೆ.

ಅಣ್ವಸ್ತ್ರ ಹೊಂದಿರುವ ದೇಶವಾಗಿರುವ ಉತ್ತರ ಕೊರಿಯಾ, ಅಮೆರಿಕಾಗೆ ಸವಾಲು ಹಾಕಿದ ಉದಾಹರಣೆಗಳೇ ಹೆಚ್ಚು. ಕೊರೊನಾ ರುದ್ರ ನರ್ತನದ ನಡುವೆ, ಇತ್ತೀಚಿನ ವಿದ್ಯಮಾನಗಳನ್ನು ಆಧರಿಸಿ, ಅಮೆರಿಕಾ ಜಂಟಿಯಾಗಿ 'ಒಪ್ಲಾನ್ 5029' ಎನ್ನುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ವರದಿಯಾಗಿದೆ. ಏನಿದು ಒಪ್ಲಾನ್ 5029?

ಕಿಮ್ ಜಾಂಗ್ ಉನ್ ಸಾವು ಬದುಕಿನ ಸುದ್ದಿ! ಆ ರೈಲು ಕೊಟ್ಟಿತಾ ಸುಳಿವು?

ಉತ್ತರ ಕೂರಿಯಾದ ಪತನ ಆರಂಭ

ಉತ್ತರ ಕೂರಿಯಾದ ಪತನ ಆರಂಭ

ಈಗಿನ ವಿದ್ಯಮಾನಗಳನ್ನು ಉಲ್ಲೇಖಿಸುತ್ತಾ ಉತ್ತರ ಕೂರಿಯಾದ ಪತನ ಆರಂಭವಾಗಿದೆ ಎಂದು ದಕ್ಷಿಣ ಕೊರಿಯಾದ ಕೆಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಈ ಹಿಂದೆ ಕೂಡಾ ಇಂತಹ ವಿಷಮ ಸ್ಥಿತಿಯನ್ನು ಉ.ಕೊರಿಯಾ ಎದುರಿಸಿದ್ದಾಗ ಈ ರೀತಿಯ ಮಾತುಗಳು ಚರ್ಚೆಯಲ್ಲಿದ್ದವು. 1953ರ ಕೊರಿಯನ್ ಯುದ್ಧ, 1990ರ ಕ್ಷಾಮ, ರಾಷ್ಟ್ರೀಯ ಸಂಸ್ಥಾಪಕ ಕಿಮ್ ಇಲ್ ಸುಂಗ್ ಮತ್ತು ಅವರ ಮಗ ಕಿಮ್ ಜೊಂಗ್ ಇಲ್ ಅವರ ಮರಣದ ವೇಳೆಯೂ, ಕೊರಿಯಾ ಪತನಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು.

ದೇಶದ ಆಡಳಿತ ಅತಂತ್ರಗೊಂಡರೆ

ದೇಶದ ಆಡಳಿತ ಅತಂತ್ರಗೊಂಡರೆ

ಈಗಿನ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್ನಪ್ಪಿದ್ದೇ ಆಗಿದ್ದಲ್ಲಿ ಮತ್ತು ಅಲ್ಲಿ ಯಾವುದೇ ಸುಭದ್ರ ಸರಕಾರ ಇರದೇ ದೇಶದ ಆಡಳಿತ ಅತಂತ್ರಗೊಂಡರೆ ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಒಪ್ಲಾನ್ 5029 ಯೋಜನೆಯನ್ನು ರೂಪಿಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಅಮೆರಿಕಾ - ದಕ್ಷಿಣ ಕೊರಿಯಾ ಜಂಟಿ ಕಾರ್ಯಾಚರಣೆ

ಅಮೆರಿಕಾ - ದಕ್ಷಿಣ ಕೊರಿಯಾ ಜಂಟಿ ಕಾರ್ಯಾಚರಣೆ

ಅಪಾರ ಪ್ರಮಾಣದ ಕ್ಷಿಪಣಿ ಮತ್ತು ಅಣ್ವಸ್ತ್ರವನ್ನು ಹೊಂದಿರುವ ಉತ್ತರ ಕೊರಿಯಾದಲ್ಲಿ ಅರಾಜಕತೆ ಉಂಟಾಗಿದೇ ಆದಲ್ಲಿ, ಇವುಗಳನ್ನು ರಕ್ಷಿಸುವ ಯೋಜನೆಯೇ ಒಪ್ಲಾನ್ 5029. ಎರಡು ದೇಶಗಳು ಜಂಟಿಯಾಗಿ ನಡೆಸುವ ಮಿಲಿಟರಿ ಕಾರ್ಯಾಚರಣೆ ಯೋಜನೆ ಇದಾಗಿದೆ. 2005ರಲ್ಲಿ ಅಮೆರಿಕಾದ ಜೊತೆ ಇದೇ ರೀತಿಯ 'ಕಾನ್ ಪ್ಲಾನ್ 5029' ಕಾರ್ಯಾಚರಣೆ ಯೋಜನೆಗೆ ದಕ್ಷಿಣ ಕೊರಿಯಾ ವಿರೋಧ ವ್ಯಕ್ತಪಡಿಸಿತ್ತು ಎನ್ನುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.

ಒಪ್ಲಾನ್ 5029 ಕಾರ್ಯಾಚರಣೆ

ಒಪ್ಲಾನ್ 5029 ಕಾರ್ಯಾಚರಣೆ

ಒಪ್ಲಾನ್ 5029 ಕಾರ್ಯಾಚರಣೆಯಲ್ಲಿ, ಉತ್ತರ ಕೊರಿಯಾದಲ್ಲಿ ಅರಾಜಕತೆ ಸನ್ನಿವೇಶ ಉಂಟಾಗಿ, ದಂಗೆ, ಕ್ರಾಂತಿ, ಅಣ್ವಸ್ತ್ರ ದುರಪಯೋಗ, ದಕ್ಷಿಣ ಕೊರಿಯನ್ನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಲ್ಲಿ, ನೈಸರ್ಗಿಕ ವಿಪತ್ತುಗಳು ಎದುರಾದಲ್ಲಿ, ಅಮೆರಿಕಾ ಮತ್ತು ದ.ಕೊರಿಯಾ ಜಂಟಿಯಾಗಿ ನಡೆಸುವ ಕಾರ್ಯಾಚರಣೆ ಇದಾಗಿದೆ. ಇದು, ಉತ್ತರ ಕೂರಿಯಾದ ಹಿತದೃಷ್ಟಿಯ ಯೋಜನೆಯಾಗಿದ್ದರೂ, ಅನಗತ್ಯವಾಗಿ ವಿರೋಧವನ್ನು ಎದುರಿಸಬೇಕಾದೀತು ಎಂದು ಅಮೆರಿಕಾದ ಅಧಿಕಾರಿಗಳು ಟ್ರಂಪ್ ಗೆ ಎಚ್ಚರಿಕೆಯನ್ನು ನೀಡಿದ್ದಾರೆಂದು ವರದಿಯಾಗಿದೆ.

English summary
OPLAN 5029: Proposed Joint Military Operation By America, South Korea Against North Korea,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more