ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕೊರಿಯಾ ರಾಜಧಾನಿಯಲ್ಲಿ ಕೊರೊನಾ ಸೋಂಕಿತರಿಗೆ ಉಳಿದಿರುವುದು ಒಂದೇ ಐಸಿಯು ಬೆಡ್

|
Google Oneindia Kannada News

ಸಿಯೋಲ್, ಡಿಸೆಂಬರ್ 17: ಕೊರೊನಾ ವೈರಸ್ ಆರಂಭಿಕ ಹಂತದಲ್ಲಿ ಪತ್ತೆಯಾದ ಮೊದಲ ದೇಶಗಳಲ್ಲಿ ದಕ್ಷಿಣ ಕೊರಿಯಾ ಕೂಡ ಒಂದು. ಹೀಗಿದ್ದರೂ ಕೊರೊನಾ ವೈರಸ್ ಪ್ರಕರಣಗಳ ನಿರ್ವಹಣೆ ವಿಷಯದಲ್ಲಿ ದಕ್ಷಿಣ ಕೊರಿಯಾ ಶಹಭಾಸ್ ಎನಿಸಿಕೊಂಡಿತ್ತು. ಲಾಕ್ ಡೌನ್ ವಿಧಿಸದೆಯೂ ಕೊರೊನಾ ನಿಯಂತ್ರಣ ಮಾಡಿ ಮಾದರಿ ದೇಶ ಎಂದು ಕರೆಸಿಕೊಂಡು ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಶ್ಲಾಘನೆ ಪಡೆದುಕೊಂಡಿತ್ತು.

ಆದರೆ ಚಳಿಗಾಲ ಕಾಲಿಡುತ್ತಿದ್ದಂತೆ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಲಾಕ್ ಡೌನ್ ವಿಧಿಸುವ ಸಾಧ್ಯತೆ ವ್ಯಕ್ತಗೊಂಡಿದೆ. ಇದರೊಂದಿಗೆ ಆಸ್ಪತ್ರೆಗಳು ಹಾಗೂ ಐಸಿಯು ಬೆಡ್ ಗಳ ಕೊರತೆಯೂ ದಕ್ಷಿಣ ಕೊರಿಯಾದಲ್ಲಿ ಕಾಣಿಸಿಕೊಂಡಿದೆ. ಸದ್ಯಕ್ಕೆ ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್ ನಲ್ಲಿ ಕೊರೊನಾ ಸೋಂಕಿತರಿಗೆ ಒಂದೇ ಒಂದು ಐಸಿಯು ಬೆಡ್ ಉಳಿದಿದೆ. ಮುಂದೆ ಓದಿ...

 ದಕ್ಷಿಣ ಕೊರಿಯಾ ಆರೋಗ್ಯ ಅಧಿಕಾರಿಗಳಿಂದ ಎಚ್ಚರಿಕೆ

ದಕ್ಷಿಣ ಕೊರಿಯಾ ಆರೋಗ್ಯ ಅಧಿಕಾರಿಗಳಿಂದ ಎಚ್ಚರಿಕೆ

ಚಳಿಗಾಲ ಆರಂಭವಾಗುತ್ತಿದ್ದಂತೆ ದಕ್ಷಿಣ ಕೊರಿಯಾದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಹೀಗಾಗಿ ನಿವಾಸಿಗಳಿಗೆ ಪ್ರಸ್ತುತ ಹೇರಿರುವ ನಿರ್ಬಂಧಗಳನ್ನು ಗಂಭೀರವಾಗಿ ಪರಿಗಣಿಸುವಂತೆ ದಕ್ಷಿಣ ಕೊರಿಯಾದ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೊಸ ಸೋಂಕಿನ ಪ್ರಕರಣಗಳು ನಿಯಂತ್ರಣ ಮೀರುತ್ತಿದ್ದು, ಜನದಟ್ಟಣೆಯಿಂದ ಕೂಡಿರುವ ಮೆಟ್ರೊಪಾಲಿಟನ್ ನಗರಗಳಲ್ಲಿ ಸಾಮಾಜಿಕ ಅಂತರವನ್ನು ಜನರು ಪಾಲಿಸಲೇ ಬೇಕಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ಯೂನ್ ಟೀ ಹೋ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾದಲ್ಲಿ ಮತ್ತೆ ಶಾಲೆಗಳಿಗೆ ರಜೆಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾದಲ್ಲಿ ಮತ್ತೆ ಶಾಲೆಗಳಿಗೆ ರಜೆ

 ಕಠಿಣಗೊಳ್ಳಲಿರುವ ನಿರ್ಬಂಧಗಳು

ಕಠಿಣಗೊಳ್ಳಲಿರುವ ನಿರ್ಬಂಧಗಳು

ಆರೋಗ್ಯ ಅಧಿಕಾರಿಗಳು ತಜ್ಞರೊಂದಿಗೆ, ಸರ್ಕಾರ ಹಾಗೂ ಕೆಲವು ಸಮಿತಿಗಳೊಂದಿಗೆ ಕೊರೊನಾ ಸೋಂಕಿನ ಈ ಮೂರನೇ ಹಂತದಲ್ಲಿ ನಿರ್ಬಂಧಗಳನ್ನು ಕಠಿಣಗೊಳಿಸುವ ಕುರಿತು ಚರ್ಚಿಸುತ್ತಿದ್ದಾರೆ. ಈ ಒಂದು ನಡೆ ಸಾಮಾಜಿಕ ಬದಲಾವಣೆ ತರಲಿದೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಹಿಂಜರಿತ ಉಂಟಾಗುವ ಸೂಚನೆಯನ್ನೂ ನೀಡಿದ್ದಾರೆ.

ಡಿ.16ರ ವರದಿಯಂತೆ ದಕ್ಷಿಣ ಕೊರಿಯಾದಲ್ಲಿ ಒಂದೇ ದಿನ 1,078 ಹೊಸ ಪ್ರಕರಣಗಳು ಕಂಡುಬಂದಿದ್ದು, ಕೊರೊನಾ ಸೋಂಕು ಪತ್ತೆಯಾದ ದಿನದಿಂದ ದಾಖಲಾದ ಅಧಿಕ ಪ್ರಕರಣ ಎನ್ನಲಾಗಿದೆ.

 78 ಐಸಿಯು ಬೆಡ್ ಗಳಲ್ಲಿ ಉಳಿದಿರುವುದು ಒಂದೇ ಬೆಡ್

78 ಐಸಿಯು ಬೆಡ್ ಗಳಲ್ಲಿ ಉಳಿದಿರುವುದು ಒಂದೇ ಬೆಡ್

ದಕ್ಷಿಣ ಕೊರಿಯಾದಲ್ಲಿ ಪ್ರಸ್ತುತ 226 ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಇದುವರೆಗೂ ಒಟ್ಟು 612 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇದೀಗ ಆಸ್ಪತ್ರೆಗಳಲ್ಲಿ ಜಾಗದ ಕೊರತೆ ಅತಿ ಗಂಭೀರವಾಗಿ ಕಾಡುತ್ತಿದೆ. ಸಿಯೋಲ್ ನಲ್ಲಿ ಕೇವಲ 78 ಐಸಿಯು ಬೆಡ್ ಗಳು ಲಭ್ಯವಿದ್ದು, ಅದರಲ್ಲಿ ಈಗಾಗಲೇ 77 ಬೆಡ್ ಗಳಲ್ಲಿ ರೋಗಿಗಳು ದಾಖಲಾಗಿದ್ದಾರೆ. ಸದ್ಯಕ್ಕೆ ಒಂದೇ ಬೆಡ್ ಖಾಲಿ ಉಳಿದಿದೆ ಎಂದು ಸಿಯೋಲ್ ಮೇಯರ್ ಸಿಯೋ ಜಂಗ್ ಹ್ಯೂಪ್ ತಿಳಿಸಿದ್ದಾರೆ.

ಸಿಯೋಲ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾಗೆ ಆತಂಕಸಿಯೋಲ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾಗೆ ಆತಂಕ

 ರಾತ್ರಿಯ ಹೊತ್ತೂ ಕೊರೊನಾ ಪರೀಕ್ಷೆ

ರಾತ್ರಿಯ ಹೊತ್ತೂ ಕೊರೊನಾ ಪರೀಕ್ಷೆ

ಯುರೋಪ್ ಹಾಗೂ ಅಮೆರಿಕಕ್ಕೆ ಹೋಲಿಸಿದರೆ ಇಲ್ಲಿನ ಪ್ರಕರಣಗಳ ಸಂಖ್ಯೆ ಕಡಿಮೆಯೇ ಎನ್ನಿಸಿದರೂ ಚಳಿಗಾಲ ಬಂದಿರುವುದರಿಂದ ಇದ್ದಕ್ಕಿದ್ದಂತೆ ಪ್ರಕರಣ ಏರುತ್ತಿದೆ. ಹೀಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನವೆಂಬರ್ ಮಧ್ಯಭಾಗದಿಂದ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಇನ್ನಷ್ಟು ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂದು ಜಾನ್ಸ್ ಹಾಪ್ ಕಿತ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಕೊರೊನಾ ಪರೀಕ್ಷೆಗಳನ್ನು ರಾತ್ರಿಯ ಹೊತ್ತೂ ಮುಂದುವರೆಸಿದ್ದು, ಅತಿ ದೊಡ್ಡ ಮಟ್ಟದ ಬಿಕ್ಕಟ್ಟನ್ನು ಎದುರಿಸಬೇಕಾದ ಸೂಚನೆಯನ್ನು ಆರೋಗ್ಯ ಅಧಿಕಾರಿಗಳು ನೀಡಿದ್ದಾರೆ.

 ಚರ್ಚ್ ಗಳಿಂದ ಹೆಚ್ಚಿದ ಸೋಂಕು

ಚರ್ಚ್ ಗಳಿಂದ ಹೆಚ್ಚಿದ ಸೋಂಕು

ಮೂರನೇ ಅಲೆಯಲ್ಲಿ ಚರ್ಚ್ ಗಳನ್ನು ಮುಚ್ಚುವಂತೆ ಆದೇಶಿಸಲು ತೀರ್ಮಾನಿಸಲಾಗಿದೆ. ವಾರದಲ್ಲಿ ನಾಲ್ಕು ಬಾರಿ ಚರ್ಚ್ ಗಳಲ್ಲಿ ಜನ ಸೇರುತ್ತಿದ್ದು, ಚರ್ಚ್ ಗಳಲ್ಲಿ ಜನ ಸೇರುವುದರಿಂದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಪಬ್ಲಿಕ್ ಬ್ರಾಡ್ ಕಾಸ್ಟ್ ಕೆಬಿಎಸ್ ತಿಳಿಸಿದೆ.

English summary
South Korean health officials have warned residents to take current restrictions seriously, as capital facing a critical shortage of hospital space, with 77 of the city's 78 ICU beds now occupied by coronavirus patients
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X