ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಿಂದ ಭಾರತಕ್ಕೆ ವಾಪಸ್ ಆಗಲು ನೋಂದಣಿ ಆರಂಭ

|
Google Oneindia Kannada News

ಅಬುದಾಬಿ, ಏಪ್ರಿಲ್ 30 : ಯುಎಇಯ ಭಾರತೀಯ ರಾಯಭಾರ ಕಚೇರಿ ದೇಶಕ್ಕೆ ಮರಳಲು ಬಯಸುವ ಜನರಿಗಾಗಿ ಆನ್‌ಲೈನ್ ನೋಂದಣಿ ಆರಂಭಿಸಿದೆ. ಇದುವರೆಗೂ ಸುಮಾರು 25 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ.

ಅಬುಧಾಬಿಯ ಭಾರತೀಯ ದೂತವಾಸ ಕಚೇರಿ, ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಮಾಹಿತಿಗಳನ್ನು ಸಂಗ್ರಹ ಮಾಡಲು ಆನ್ ಲೈನ್ ನೋಂದಣಿ ಆರಂಭಿಸಿದೆ. ಬುಧವಾರ ಆರಂಭಿಸಿದ್ದ ನೋಂದಣಿ ತಾಂತ್ರಿಕ ಕಾರಣದಿಂದ ಸ್ಥಗಿತವಾಗಿತ್ತು.

ಅಬುದಾಬಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಕೇರಳ ಶಿಕ್ಷಕಿಅಬುದಾಬಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಕೇರಳ ಶಿಕ್ಷಕಿ

ಗುರುವಾರ ಪುನಃ ನೋಂದಣಿ ಆರಂಭಿಸಲಾಗಿದೆ. ಬಹಳಷ್ಟು ಜನರು ಇದನ್ನು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ, ನೋಂದಣಿ ವಿಳಂಬವಾಗಬಹುದು ಎಂದು ದೂತವಾಸ ಕಚೇರಿ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಭಾರತಕ್ಕೆ ಮರಳಲು ಬಯಸುವವರು ವೆಬ್‌ಟೈಟ್‌ಗೆ ಭೇಟಿ ನೀಡಿ ವಿವರ ಭರ್ತಿ ಮಾಡಬಹುದು.

ವಿದೇಶದಲ್ಲಿ ಉದ್ಯೋಗ ಕಳೆದುಕೊಂಡ 56 ಸಾವಿರ ಕೇರಳಿಗರು ವಿದೇಶದಲ್ಲಿ ಉದ್ಯೋಗ ಕಳೆದುಕೊಂಡ 56 ಸಾವಿರ ಕೇರಳಿಗರು

Online Registration Open For People Who Wish To Fly Back To India From Dubai

ವೆಬ್‌ಸೈಟ್‌ಗೆ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ಈಗಾಗಲೇ 25 ಸಾವಿರ ಜನರು ಹೆಸರು ನೋಂದಣಿ ಮಾಡಿಸಿದ್ದಾರೆ. ಜನರು ಒಂದೇ ಬಾರಿ ವೆಬ್‌ಸೈಟ್‌ಗೆ ಭೇಟಿ ನೀಡುವುದು ಬೇಡ, ಹಲವು ದಿನ ನೋಂದಣಿ ನಡೆಯಲಿದೆ ಎಂದು ಇಂಡಿಯಾ ಇನ್ ದುಬೈ ಖಾತೆಯಿಂದ ಗುರುವಾರ ಸಂಜೆ ಟ್ವೀಟ್ ಮಾಡಲಾಗಿದೆ.

Coronavirus Alert: ದುಬೈ To ಬೆಂಗಳೂರು ಪ್ರಯಾಣಿಕರೇ ಆಸ್ಪತ್ರೆಗೆ ಬನ್ನಿ! Coronavirus Alert: ದುಬೈ To ಬೆಂಗಳೂರು ಪ್ರಯಾಣಿಕರೇ ಆಸ್ಪತ್ರೆಗೆ ಬನ್ನಿ!

ವೆಬ್‌ಸೈಟ್‌ನಲ್ಲಿ ನೋಂದಣಿ ಆರಂಭಿಸಿರುವುದು ಕೇವಲ ಮಾಹಿತಿ ಸಂಗ್ರಹಕ್ಕಾಗಿ ಮಾತ್ರ. ಇದನ್ನು ಬಳಸಿಕೊಂಡು ಭಾರತ ಸರ್ಕಾರ ಯಾವಾಗ ವಾಪಸ್ ಕರೆತರುವ ಪ್ರಕ್ರಯೆ ಆರಂಭಿಸಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಿದೆ. ಒಮ್ಮೆ ಒಬ್ಬರು ಮಾತ್ರ ಹೆಸರು ಸೇರಿಸಬಹುದು, ಕುಟುಂಬದ ಪ್ರತಿ ಸದಸ್ಯರು ಪ್ರತ್ಯೇಕ ಅರ್ಜಿ ಭರ್ತಿ ಮಾಡಬೇಕು.

ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಬಗ್ಗೆ ಮೇ 3 ರ ಬಳಿಕ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಅಂದಾಜು 34.2 ಲಕ್ಷ ಭಾರತೀಯರು ಇದ್ದಾರೆ ಎಂದು ಅಂದಾಜಿಸಲಾಗಿದೆ.

ಹೆಸರು ನೋಂದಣಿ ಮಾಡಲು ಲಿಂಕ್ ಟ್ವೀಟ್ ಖಾತೆಯಲ್ಲಿದೆ.

English summary
Indian Embassy in Abu Dhabi and Indian Consulate in Dubai opened online registration for people who wish to fly back to home. Already 25 thousand people registered name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X