ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಆಳ್ವಿಕೆಗೆ ಒಂದು ವರ್ಷ: ಅಲ್ಲಿನ ಮಹಿಳೆಯರ ಬದುಕು ಹೇಗಾಗಿದೆ ನೋಡಿ

|
Google Oneindia Kannada News

ಕಾಬೂಲ್, ಆಗಸ್ಟ್ 16: ಸೋಮವಾರ ಅಫ್ಘಾನಿಸ್ತಾನದದಲ್ಲಿ ತಾಲಿಬಾನ್ ಆಡಳಿತ ಬಂದು ಒಂದು ವರ್ಷವಾಗಿದೆ. ಈ ಬಗ್ಗೆ ತಾಲಿಬಾನಿಗಳು ಸಂಭ್ರಮ ಆಚರಿಸುತ್ತಿದ್ದಾರೆ. ತಾಲಿಬಾನ್ ಆಳ್ವಿಕೆ ಬಂದ ಕೂಡಲೇ ಮಾಡಿದ ಮೊದಲಕೆಲಸ ಮಹಿಳೆಯರ ಹಕ್ಕುಗಳಿಗೆ ತಿಲಾಂಜಲಿ ಹಾಡಿದ್ದು.

ಹಾಗಿದ್ದರೇ ಈ ಒಂದು ವರ್ಷದ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಸ್ಥಿತಿಗತಿ ಹೇಗಿದೆ. ಅವುಗಳಲ್ಲಿ ತಂದ ಬದಲಾವಣೆಗಳೇನು, ಅವರ ಸ್ವಾತಂತ್ರ್ಯಕ್ಕೆ ತಾಲಿಬಾನ್ ಗೋಡೆಕಟ್ಟಿದ್ದು ಹೇಗೆ ಎಂಬುದನ್ನು ಈ ಬರಹದಲ್ಲಿ ಬಿಚ್ಚಿಡಲಾಗಿದೆ.

ಕಾಬೂಲ್: ಮಹಿಳೆಯರ ಪ್ರತಿಭಟನೆ ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ತಾಲಿಬಾನಿಗಳುಕಾಬೂಲ್: ಮಹಿಳೆಯರ ಪ್ರತಿಭಟನೆ ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ತಾಲಿಬಾನಿಗಳು

ಆಕ್ರಮಣದ ಮೂಲಕ ಸರ್ಕಾರವನ್ನು ಉರುಳಿಸಿ ಅಫ್ಘಾನಿಸ್ತಾನದ ನಿಯಂತ್ರಣವನ್ನು ಪಡೆದ ತಾಲಿಬಾನ್, ದೇಶದಲ್ಲಿ ತನ್ನದೇ ಆದ ಸರ್ಕಾರವನ್ನು ರಚಿಸಿತು, ದೇಶದಲ್ಲಿ ಅನೇಕ ಹೊಸ ನಿಯಮಗಳನ್ನು ಜಾರಿಗೊಳಿಸಲಾಯಿತು, ಅವುಗಳಲ್ಲಿ ಮುಖ್ಯವಾದವೆಂದರೆ ಮಹಿಳೆಯರ ಹಕ್ಕುಗಳನ್ನು ಕಡಿತಗೊಳಿಸುವುದೇ ಆಗಿದೆ. ಇವುಗಳಿಂದಾಗಿ ಅಲ್ಲಿನ ಮಹಿಳೆಯರು ಮತ್ತು ಯುವತಿಯರು ಸಂಕಷ್ಟದಿಂದ ಬಳಲುತ್ತಿದ್ದಾರೆ.

ತಾಲಿಬಾನ್ ಕಣ್ಣು ಹಾಕಿದ್ದು ಮಹಿಳೆಯದ ವಸ್ತ್ರಗಳ ಮೇಲೆ

ತಾಲಿಬಾನ್ ಕಣ್ಣು ಹಾಕಿದ್ದು ಮಹಿಳೆಯದ ವಸ್ತ್ರಗಳ ಮೇಲೆ

ತಾಲಿಬಾನ್ ಮೂಲಭೂತವಾದಿ ಗುಂಪು ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ಮಹಿಳೆಯರು ಮತ್ತು ಯುವತಿಯರು ಧರಿಸುವ ಬಟ್ಟೆಗಳ ಮೇಲೆ ಕಣ್ಣು ಹಾಕಿತು. ಇಂತಹ ಬಟ್ಟೆಗಳನ್ನೇ ಧರಿಸಬೇಕು, ಹೀಗೆಯೇ ಬಟ್ಟೆ ಧರಿಸಬೇಕು ಎಂಬ ವಸ್ತ್ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು.

ಅಫ್ಘಾನ್ ಮಹಿಳೆಯರು ತಲೆಯಿಂದ ಪಾದದ ಹೆಬ್ಬೆರಳು ಮುಚ್ಚುವಂತೆ ಬಟ್ಟೆ ಧರಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕು ಎಂದರೆ ತಮ್ಮ ದೇಹವನ್ನು ಸಂಪೂರ್ಣವಾಗಿ ಮಯಚ್ಚಿರಬೇಕು ಎಂದು ಒತ್ತಡ ಹಾಕಲಾಗಿದೆ. ಇದು ಅತ್ಯಂತ ಕ್ರೂರ ನಿಯಮವೆಂದು ಅಂತರಾಷ್ಟ್ರೀಯ ಮಟ್ಟದಲ್ಲೂ ಟೀಕೆಗಳು ಕೆಳಿ ಬಂದಿವೆ.

ಶಿಕ್ಷಣಕ್ಕೆ ಹೊಸ ನಿಯಮ ತಂದ ತಾಲಿಬಾನ್

ಶಿಕ್ಷಣಕ್ಕೆ ಹೊಸ ನಿಯಮ ತಂದ ತಾಲಿಬಾನ್

ಅಫ್ಘಾನಿಸ್ತಾನದ ಮಹಿಳೆಯರಿಂದ ಬಹಳಷ್ಟು ಟೀಕೆಗಳು ಮತ್ತು ಪ್ರತಿಭಟನೆಗಳನ್ನು ಹುಟ್ಟುಹಾಕಿದ ಮತ್ತೊಂದು ನಿಯಮವೆಂದರೆ ತಾಲಿಬಾನಿಗಳ ಹೊಸ ಶಿಕ್ಷಣ ನೀತಿ. ಈ ನಿಯಮವೆಂದರೆ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ಬೇರೆ ಬೇರೆಯಾಗಿ ಕುಳಿತುಕೊಳ್ಳುವುದು. ಅಲ್ಲಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳನ್ನು ಬೇರೆ ಬೇರೆ ತರಗತಿಗಳಲ್ಲಿ ಕುಳಿತುಕೊಳ್ಳುವಂತೆ ಮಾಡಲಾಯಿತು. ಜೊತೆಗೆ ಪರಸ್ಪರ ಅವರು ಮಾತನಾಡದಂತೆ ನಿಯಮಗಳನ್ನು ಹೇರಲಾಗಿದೆ.

ಇವುಗಳ ಜೊತೆಗೆ ತಾಲಿಬಾನ್‌ನ ಹೊಸ ನಿಯಮಗಳು ಪ್ರಸ್ತುತ ಶೈಕ್ಷಣಿಕ ಬ್ಯಾಚ್‌ನ ಹೊರತಾಗಿ, ಉನ್ನತ ಶಿಕ್ಷಣವನ್ನು ಮುಂದುವರಿಸುವುದನ್ನು ನಿಲ್ಲಿಸಲು ಮಹಿಳೆಯರನ್ನು ಒತ್ತಾಯಿಸಿದೆ. ಇವರ ನಿಯಮಗಳ ಪ್ರಕಾರ ಹೆಣ್ಣು ಮಕ್ಕಳ ಉನ್ನತ ಮಟ್ಟದ ಶಿಕ್ಷಣವು ಆರನೇ ತರಗತಿಯಾಗಿದೆ!.

ಪುರುಷರಿಲ್ಲದೇ ಮಹಿಳೆ ಒಂಟಿಯಾಗಿ ಪ್ರಯಾಣಿಸುವಂತಿಲ್ಲ!

ಪುರುಷರಿಲ್ಲದೇ ಮಹಿಳೆ ಒಂಟಿಯಾಗಿ ಪ್ರಯಾಣಿಸುವಂತಿಲ್ಲ!

ಹೌದು, ತಾಲಿಬಾನ್ ಸರಕಾರದಲ್ಲಿ ಮಹಿಳೆಯರಿಗೆ ಪ್ರಯಾಣದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದಕ್ಕೆ ತಡೆ ಹಾಕಿರುವ ಸರಕಾರ ಪುರುಷನಿಲ್ಲದೆ ಪ್ರಯಾಣಿಸುವ ಮಹಿಳೆಯರ ಹಕ್ಕುಗಳ್ನು ಕಟ್ಟಿಹಾಕಿದೆ. ಇದರಿಂದಾಗಿಯೇ ಕಳೆದೊಂದು ವರ್ಷದಿಂದ ಸರಕಾರಿ ಕಚೇರಿಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

ಇನ್ನು ಸಾರ್ವಜನಿಕ ಸ್ಥಳಗಳಿಗೆ ಹೋಗುವ ಎಲ್ಲಾ ಮಹಿಳೆಯರು ಮೇಲ್ವಿಚಾರಣೆ ಮತ್ತು ರಕ್ಷಣೆಗಾಗಿ ಪುರುಷ "ರಕ್ಷಕ" ಅನ್ನು ಹೊಂದಿರಬೇಕು ಎಂಬ ನಿಯಮವನ್ನು ಜಾರಿಗೆ ತಂದಿದೆ. ಜೊತೆಗೆ, ತಾಲಿಬಾನ್ ಸೈನಿಕರು ಮಹಿಳೆಯರನ್ನು ಗೌರವಿಸಲು ತರಬೇತಿ ಪಡೆದಿಲ್ಲ ಹೀಗಾಗಿ ಮಹಿಳೆಯರನ್ನು ತಮ್ಮ ಮನೆಯಿಂದ ಹೊರಗೆ ಹೋಗಬಾರದು ಎಂದು ಒತ್ತಡ ಹಾಕಲಾಗಿದೆ.

ಮಹಿಳೆಯರು ಪಾರ್ಲರ್‌ಗಳಿಗೆ ಹೋಗುವಂತಿಲ್ಲ!

ಮಹಿಳೆಯರು ಪಾರ್ಲರ್‌ಗಳಿಗೆ ಹೋಗುವಂತಿಲ್ಲ!

ಮಹಿಳೆಯರಿಗೆ ಚಂದವಾಗಿ ಅಲಂಕಾರ ಮಾಡಿಕೊಳ್ಳುವುದು ಇಷ್ಟ. ಆದರೆ, ಈ ತಾಲಿಬಾನ್ ಸರಕಾರ ಅಫ್ಘಾನ್ ಮಹಿಳೆಯರ ಅಂದದ ಮೇಲೂ ಕಣ್ಣು ಹಾಕಿದೆ. ಅಲ್ಲಿನ ಪಾರ್ಲರ್‌ಗಳಿಗೆ ಬೀಗ ಜಡಿಸಿದೆ.

ಅಫ್ಘಾನ್ ಹೆಣ್ಣು ಮಕ್ಕಳಿಗೆ ಇವುಗಳ ಅಗತ್ಯವಿಲ್ಲ ಎಂದು ಪಾರ್ಲರ್‌ಗಳನ್ನು ಹೊಡೆದು ಹಾಕಿದ್ದು, ಅವುಗಳನ್ನು ಧ್ವಂಸಗೊಳಿಸಿ, ಬೀಗ ಹಾಕಿದ ಸುದ್ದಿಗಳನ್ನು ನೋಡಿದ್ದೇವೆ. ಮಾಧ್ಯಮಗಳು, ಚಲನಚಿತ್ರಗಳಲ್ಲಿ, ಕ್ರೀಡೆಯಲ್ಲಿ ಮಹಿಳಡಯರು ಕಾಣಿಸಿಕೊಳ್ಳುವಂತಿಲ್ಲ ಎಂದು ಆದೇಶಿಸಿದೆ. ಇಂತಹ ಕ್ರೂರ ಸರಕಾರದ ಕೈಯಲ್ಲಿದ್ದರೂ ಅಫ್ಘಾನ್ ಹೆಣ್ಣು ಮಕ್ಕಳ ಧೈರ್ಯ ನಿಜಕ್ಕೂ ಮೆಚ್ಚುವಂತಹದ್ದು.


ತಾಲಿಬಾನ್ ಸೈನಿಕರ ಕ್ರೌರ್ಯವನ್ನು ಮೀರಿ ಈ ಗಟ್ಟಿಗಿತ್ತಿಯರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ತಮ್ಮ ಹಕ್ಕುಗಳ ರಕ್ಷಣೆಗಾಗಿ ಚಿತ್ರಹಿಂಸೆಗೆ ಒಳಗಾಗಿದ್ದಾರೆ. ಗಲ್ಲಿಗೇರಿದ್ದಾರೆ. ಆದರೆ, ಸೋಲು ಒಪ್ಪಿಕೊಂಡಿಲ್ಲ. ಆಗಸ್ಟ್ 15ನ್ನು ಕರಾಳ ದಿನವೆಂದು ಆಚರಿಸಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಮಹಿಳಾ ಪ್ರತಿಭಟನಾಕಾರರು ರ್‍ಯಾಲಿ ನಡೆಸಿ, "ಬ್ರೆಡ್, ಕೆಲಸ ಮತ್ತು ಸ್ವಾತಂತ್ರ್ಯ" ಬೇಕು ಎಂದು ಘೋಷಣೆ ಕೂಗಿದ್ದಾರೆ. ಕಾಬೂಲ್‌ನ ಶಿಕ್ಷಣ ಸಚಿವಾಲಯದ ಕಟ್ಟಡದ ಮುಂದೆ ಮೆರವಣಿಗೆ ನಡೆಸುತ್ತಿದ್ದ ಮಹಿಳೆಯರನ್ನು ಹೆದರಿಸಲು ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ತಾಲಿಬಾನ್ ಆಡಳಿತದ ಅಡಿಯಲ್ಲಿ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಹಕ್ಕುಗಳ ದುರುಪಯೋಗದ ವಿರುದ್ಧ ವಿಶ್ವಸಂಸ್ಥೆ ಮತ್ತು ಹಲವಾರು ರಾಷ್ಟ್ರೀಯ ನಾಯಕರು ಆಗಾಗ್ಗೆ ಮಾತನಾಡುತ್ತಿದ್ದರೂ, ಸರ್ಕಾರವು ಈ ಯಾವುದೇ ನಿಯಮಗಳನ್ನು ವಾಪಸ್ ತೆಗೆದುಕೊಳ್ಳಲು ಮನಸ್ಸು ಮಾಡಿದಂತೆ ಕಾಣಿಸದು.

ತಾಲಿಬಾನ್ ಸರ್ಕಾರವು ಆಗಸ್ಟ್ 2022 ರಲ್ಲಿ ಒಂದು ಪೂರ್ಣ ವರ್ಷದ ಆಡಳಿತ ನಡೆಸಿದೆ. ತಾಲಿಬಾನ್ ಆಳ್ವಿಕೆ ವಹಿಸಿಕೊಂಡ ಮೇಲೆ ದೇಶದಲ್ಲಿ ಸಾಕಷ್ಟು ಸ್ಥಳಾಂತರ ಮತ್ತು ಬಡತನ ಕಂಡಿದೆ. ಜೊತೆಗೆ ಪ್ರವಾಹದಿಂದಲೂ ಅಫ್ಘಾನಿಸ್ತಾನ ತತ್ತರಿಸಿದೆ.

Recommended Video

Renukacharya ಅವರ ಡಾನ್ಸ್ ಹೇಗಿದೆ ನೋಡಿ | *Karnataka | OneIndia Kannada

English summary
One year of Taliban rule in Afghanistan: see what happened to women's rights in one year. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X