ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!

|
Google Oneindia Kannada News

ಸಿಯೋಲ್, ಮಾರ್ಚ್.16: ಕೊರೊನಾ ವೈರಸ್ ನಿಂದ ನಲುಗಿದ ದಕ್ಷಿಣ ಕೊರಿಯಾದಲ್ಲಿ ಒಬ್ಬನೇ ಒಬ್ಬ ಸೋಂಕಿತ ವ್ಯಕ್ತಿಯಿಂದ ಇಡೀ ರಾಷ್ಟ್ರಕ್ಕೆ ಡೆಡ್ಲಿ ವೈರಸ್ ಹರಡಿತಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ಅನುಮಾನಕ್ಕೆ ಪುಷ್ಟಿ ನೀಡುವಂತಾ ಸಾಕ್ಷ್ಯಗಳು ಇದೀಗ ಲಭ್ಯವಾಗಿವೆ.

Recommended Video

No need to panic about Corona says this MBBS student | Oneindia kannada

ಶಿಂಚಿಯೋಂಜಿ ಚರ್ಚ್ ನಲ್ಲಿರುವ ಜೀಸಸ್ ಒಬ್ಬರಿಂದ ಸಾವಿರ ಸಾವಿರ ಜನರಿಗೆ ಕೊರೊನಾ ವೈರಸ್ ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ದೇಶದಲ್ಲಿ ಪತ್ತೆಯಾಗಿರುವ ಸೋಂಕಿತರಿಗೂ ಈ ಚರ್ಚ್ ಗೂ ಸಂಪರ್ಕ ಇರುವುದು ಇದೀಗ ಬಯಲಾಗಿದೆ.

ಕೊರೊನಾ ಮುಕ್ತ ಭಾರತ; ಯಾವ ಸ್ಯಾನಿಟೈಸರ್ ಬಳಕೆ ಸೂಕ್ತ? ಕೊರೊನಾ ಮುಕ್ತ ಭಾರತ; ಯಾವ ಸ್ಯಾನಿಟೈಸರ್ ಬಳಕೆ ಸೂಕ್ತ?

ದಕ್ಷಿಣ ಕೊರಿಯಾದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯಿಂದ 1,160 ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಪ್ರಕಟಿಸಿವೆ. ಎಲ್ಲರ ಆರೋಪಗಳು ಇದೀಗ ಶಿಂಚಿಯೋಂಜಿ ಚರ್ಚ್ ಸುತ್ತ ಹುಟ್ಟಿಕೊಳ್ಳುತ್ತಿವೆ.

ಸರ್ಕಾರದಿಂದ ಶಿಂಚಿಯೋಂಜಿ ಚರ್ಚ್ ವಿರುದ್ಧ ಆರೋಪ

ಸರ್ಕಾರದಿಂದ ಶಿಂಚಿಯೋಂಜಿ ಚರ್ಚ್ ವಿರುದ್ಧ ಆರೋಪ

ದಕ್ಷಿಣ ಕೊರಿಯಾದಲ್ಲಿ ಸೃಷ್ಟಿಯಾಗಿರುವ ತುರ್ತು ಪರಿಸ್ಥಿತಿಗೆ ಶಿಂಚಿಯೋಂಜಿ ಚರ್ಚ್ ನೇರಹೊಣೆ ಎಂದು ಸರ್ಕಾರವು ದೂಷಿಸುತ್ತಿದೆ. ಚರ್ಚ್ ನಲ್ಲಿ ಸೋಂಕಿತರ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿ ಮುಚ್ಚಿಟ್ಟಿದ್ದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ.

ಶಿಂಚಿಯೋಂಜಿ ಚರ್ಚ್ ಮತ್ತು ಸೋಂಕಿತರ ನಡುವೆ ನಂಟು

ಶಿಂಚಿಯೋಂಜಿ ಚರ್ಚ್ ಮತ್ತು ಸೋಂಕಿತರ ನಡುವೆ ನಂಟು

ಕೊರಿಯಾ ಸೆಂಟರ್ ಫಾರ್ ಡಿಸೀಸಸ್ ಕಂಟ್ರೋಲ್ ಪ್ರೀವೆಂಷನ್ ರಿಪೋರ್ಟ್(KCDC) ಪ್ರಕಾರ ಶೇ.63.50ರಷ್ಟು ಕೊರೊನಾ ವೈರಸ್ ಸೋಂಕಿತರಿಗೂ ಶಿಂಚಿಯೋಂಜಿ ಚರ್ಚ್ ಗೂ ಸಂಪರ್ಕ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶಿಂಚಿಯೋಂಜಿ ಚರ್ಚ್ ಗೆ ಭೇಟಿ ನೀಡಿದ 9,300 ಜನರ ಪಟ್ಟಿಯನ್ನು ಪರಿಶೀಲಿಸಿದ ಕೆಸಿಡಿಸಿಗೆ 1,200 ಮಂದಿಯಲ್ಲಿ ಕೊರೊನಾ ಸೋಂಕಿತ ಲಕ್ಷಣಗಳು ಕಂಡು ಬಂದಿದೆ. ಈ ಪೈಕಿ ನೂರಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ತಗಲಿರುವುದು ದೃಢಪಟ್ಟಿದೆ ಎಂದು ರಾಯಟರ್ಸ್ ವರದಿ ಮಾಡಿದೆ.

ಲಕ್ಷಾಂತರ ಭಕ್ತರನ್ನು ಹೊಂದಿರುವ ಶಿಂಚಿಯೋಂಜಿ ಚರ್ಚ್

ಲಕ್ಷಾಂತರ ಭಕ್ತರನ್ನು ಹೊಂದಿರುವ ಶಿಂಚಿಯೋಂಜಿ ಚರ್ಚ್

ಕಳೆದ 1984ರಲ್ಲಿ ಶಿಂಚಿಯೋಂಜಿ ಚರ್ಚ್ ನ್ನು ಲೀ ಮ್ಯಾನ್ ಹೀ ಎಂಬುವವರು ತಮ್ಮ ಬೆಂಬಲಿಗರ ಜೊತೆ ಸೇರಿಕೊಂಡು ಸ್ಥಾಪನೆ ಮಾಡಿದರು. ಅದೇ ಶಿಂಚಿಯೋಂಜಿ ಚರ್ಚ್ ಇಂದು 1 ಲಕ್ಷ 20 ಸಾವಿರಕ್ಕೂ ಅಧಿಕ ಮಂದಿ ಭಕ್ತರನ್ನು ಹೊಂದಿದೆ.

ದಕ್ಷಿಣ ಕೊರಿಯಾದಲ್ಲಿ 75 ಮಂದಿ ಸೋಂಕಿಗೆ ಸಾವು

ದಕ್ಷಿಣ ಕೊರಿಯಾದಲ್ಲಿ 75 ಮಂದಿ ಸೋಂಕಿಗೆ ಸಾವು

ಮಾರಕ ಕೊರೊನಾ ವೈರಸ್ ನಿಂದಾಗಿ ದಕ್ಷಿಣ ಕೊರಿಯಾದಲ್ಲಿ ಇದುವರೆಗೂ 75ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಮಂಗಳವಾರ 74 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯು 8,236ಕ್ಕೆ ಏರಿಕೆಯಾಗಿದೆ. ಇದುವರೆಗೂ 1,137 ಜನ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

English summary
One Patient Is Responsible For Spread Coronavirus Across South Korea. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X