ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಮೊದಲ ಪ್ರತಿಭಟನೆಗಳಲ್ಲಿ ಬಾಂಗ್ಲಾ ವಿಮೋಚನೆ ಪರ ಹೋರಾಟವೂ ಒಂದು: ನರೇಂದ್ರ ಮೋದಿ

|
Google Oneindia Kannada News

ಢಾಕಾ, ಮಾರ್ಚ್ 26: ತಮ್ಮ ರಾಜಕೀಯ ಜೀವನದ ಆರಂಭದ ಪ್ರತಿಭಟನೆಗಳಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯದ ಪರವಾದ ಹೋರಾಟವೂ ಸೇರಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಎರಡು ದಿನಗಳ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಬಾಂಗ್ಲಾದ 50ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದರು.

'ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟ ನನ್ನ ಪಯಣದಲ್ಲಿಯೂ ಮಹತ್ವದ ಗಳಿಗೆ. ನಾನು ಮತ್ತು ನನ್ನ ಸಹೋದ್ಯೋಗಿಗಳು ಭಾರತದಲ್ಲಿ ಸತ್ಯಾಗ್ರಹ ನಡೆಸಿದ್ದೆವು. ಆಗ ನಾನು ನನ್ನ 20ರ ಹರೆಯದ ಆರಂಭದಲ್ಲಿದ್ದೆ. ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ಈ ಸತ್ಯಾಗ್ರಹದ ವೇಳೆ ನನಗೆ ಜೈಲಿಗೆ ಹೋಗುವ ಅವಕಾಶವೂ ಸಿಕ್ಕಿತ್ತು' ಎಂದು ಮೋದಿ ತಿಳಿಸಿದರು.

ಪ್ರಧಾನಿ ಮೋದಿ ಬಾಂಗ್ಲಾದೇಶ ಭೇಟಿ: ಕೋವಿಡ್ 19 ಬಳಿಕ ಮೊದಲ ವಿದೇಶ ಪ್ರಯಾಣಪ್ರಧಾನಿ ಮೋದಿ ಬಾಂಗ್ಲಾದೇಶ ಭೇಟಿ: ಕೋವಿಡ್ 19 ಬಳಿಕ ಮೊದಲ ವಿದೇಶ ಪ್ರಯಾಣ

'ಈ ಮಹಾನ್ ದೇಶದ ಸೈನಿಕರು ಮತ್ತು ಬಾಂಗ್ಲಾದೇಶದ ಸೈನಿಕರ ಜತೆಗೆ ನಿಂತ ಭಾರತದ ಯೋಧರೂ ಮಾಡಿದ ತ್ಯಾಗವನ್ನು ನಾವು ಎಂದೆಂದಿಗೂ ಮರೆಯುವುದಿಲ್ಲ. ಅವರ ಧೈರ್ಯ ಮತ್ತು ಸಾಹಸಗಳನ್ನು ನಾವು ಮರೆತಿಲ್ಲ. ನಾವು ಮರೆಯುವುದಿಲ್ಲ' ಎಂದರು.

One Of My first Protests Was For Bangladesh Freedom: PM Narendra Modi

'ಇದು ನನ್ನ ಬದುಕಿನಲ್ಲಿ ಅತ್ಯಂತ ಸ್ಮರಣೀಯ ದಿನಗಳಲ್ಲಿ ಒಂದು. ಈ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶವು ನನ್ನನ್ನು ಸೇರಿಸಿಕೊಂಡಿರುವುದಕ್ಕೆ ಕೃತಜ್ಞನಾಗಿದ್ದೇನೆ' ಎಂದು ಅವರು ಢಾಕಾದ ನ್ಯಾಷನಲ್ ಪರೇಡ್ ಗ್ರೌಂಡ್‌ನಲ್ಲಿ ಶುಕ್ರವಾರ ನಡೆದ ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಹೇಳಿದರು.

ಭಾರತದೊಂದಿಗಿನ 50 ವರ್ಷದ ರಾಜತಾಂತ್ರಿಕ ಸಂಬಂಧದ ಸಂದರ್ಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸ್ವಾತಂತ್ರ್ಯೋತ್ಸವದ ಸುವರ್ಣ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದರು.

English summary
PM Narendra Modi in Dhaka said, one of the first protests of his political career was for the liberation of Bangladesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X