ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಪ್ರಾರ್ಥನೆಗೆ ಮನವಿ ಮಾಡಿ ಪಾಕ್ ಪ್ರಧಾನಿ ಇಮ್ರಾನ್ ಎಡವಟ್ಟು

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 10: ವಿಶ್ವದಾದ್ಯಂತ ಇರುವ ಮುಸ್ಲಿಂ ಸಮುದಾಯದವರು ಬುಧವಾರ ಶಬ್‌ಎ ಬರಾತ್ ಹಬ್ಬವನ್ನು ಆಚರಣೆ ಮಾಡಿದ್ದರು.

ಅದರ ಮರುದಿನ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಕೋರಿ ಇಮ್ರಾನ್‌ ಖಾನ್ ಟ್ವೀಟ್ ಮಾಡಿ ಇದೀಗ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

ಯಾವುದೇ ದೇಶವಾಗಿರಲಿ ಆಯಾ ದೇಶ ಹಾಗೂ ರಾಜ್ಯಗಳ ವಿಶೇಷ ದಿನಗಳಂದು , ಹಬ್ಬಹರಿದಿನಗಳಂದು ರಾಷ್ಟ್ರ ನಾಯಕರು ಶುಭಾಶಯ ಕೋರುವುದು ಸಾಮಾನ್ಯ.
ಆದರೆ ಇಮ್ರಾನ್ ಖಾನ್ ಮಾತ್ರ ಹಬ್ಬ ಮುಗಿದು ಒಂದು ದಿನದ ಬಳಿಕ ಪ್ರಾರ್ಥನೆ ಮಾಡುವಂತೆ ಕೇಳಿಕೊಂಡಿದ್ದಾರೆ. ಶಬ್ ಎ ಬರಾತ್ ಎಂದರೆ ಗತಿಸಿದ ಹಿರಿಯರ ಆತ್ಮಗಳಿಗೆ ಶಾಂತಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸುವ ದಿನವಾಗಿದೆ.

One Night After Shab E Barat Imran Khan Tweets Greetings

ತಪ್ಪಿನ ಅರಿವಾಗುತ್ತಿದ್ದಂತೆ ಇಮ್ರಾನ್ ಖಾನ್ ಟ್ವೀಟ್ ಡಿಲೀಟ್ ಮಾಡಿದ್ದರು. ಆದರೆ ಅಷ್ಟರ ಹೊತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಲು ಆರಂಭವಾಗಿತ್ತು.
ಹಬ್ಬ ಮುಗಿದ ಮರುದಿನ ಪ್ರಾರ್ಥನೆ ಸಲ್ಲಿಸುವಂತೆ ಇಮ್ರಾನ್ ಖಾನ್ ಮಾಡಿದ ಟ್ವೀಟನ್ನು ಟ್ವೀಟಿಗರು ಖಂಡಿಸಿದ್ದಾರೆ. ಅಪಹಾಸ್ಯವನ್ನೂ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಇದುವರೆಗೆ ಕೊರೊನಾ ವೈರಸ್‌ನಿಂದ 4601 ಮಂದಿ ತುತ್ತಾಗಿದ್ದಾರೆ. 66 ಮಂದಿ ಮೃತಪಟ್ಟಿದ್ದಾರೆ. 727 ಮಂದಿ ಗುಣಮುಖರಾಗಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಲೇ ಇದೆ.

English summary
Pakistan Prime Minister Imran Khan was left embarrassed after it was pointed out that he was late by a day to extend his Shab-e-Barat greetings
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X