• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದುವೆಯನ್ನು ಮುಂದೂಡಿ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಕೊರೊನಾಗೆ ಬಲಿ

|
   Corona virus might have clutch a life in Tamil Nadu | Corona Virus | Tamil Nadu | Oneindia Kannada

   ಬೀಜಿಂಗ್, ಫೆಬ್ರವರಿ 22: ತನ್ನ ಮದುವೆಯನ್ನು ಮುಂದೂಡಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ಮೃತಪಟ್ಟಿದ್ದಾರೆ.

   ಕೊರೊನಾ ವೈರಸ್‌ ಪೀಡಿತರ ಚಿಕಿತ್ಸೆಗಾಗಿ ಮದುವೆಯನ್ನೇ ಮುಂದೂಡಿದ್ದ ಚೀನಾದ 29 ಷರ್ವದ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಇದಾಗಿದೆ.

   ಚೀನಾದಲ್ಲಿ ಕೊರೋನವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಇಲ್ಲಿಯವರೆಗೂ 2,233ಕ್ಕೆ ಏರಿಕೆಯಾಗಿದೆ. ಈ ಮಾರಕ ಸೋಂಕಿಗೆ ಅತ್ಯಂತ ಹೆಚ್ಚು ಜನ ಬಲಿಯಾಗಿರುವುದು ಮಧ್ಯ ಚೀನಾದ ಹುಬೈ ಪ್ರಾಂತದವರು ಎನ್ನಲಾಗಿದೆ. ಇಲ್ಲಿನ ಸುಮಾರು 115 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ಹುಬೈನ ಆರೋಗ್ಯ ಆಯೋಗವೇ ಈ ಕುರಿತಂತೆ ಅಧಿಕೃತ ವರದಿ ಬಿಡುಗಡೆಗೊಳಿಸಿದೆ.

   Video: ಕೊರೊನಾದಿಂದ ಪಾರಾಗಲು ಮುಖಕ್ಕೆ ಪ್ಲಾಸ್ಟಿಕ್ ಸುತ್ತಿಕೊಂಡ ಪ್ರಯಾಣಿಕ

    ಕೊರೊನಾಗೆ 9 ಮಂದಿ ವೈದ್ಯರು ಬಲಿ

   ಕೊರೊನಾಗೆ 9 ಮಂದಿ ವೈದ್ಯರು ಬಲಿ

   ಈ ವೈದ್ಯರ ಸಾವಿನ ಬಳಿಕ ಚೀನಾದಲ್ಲಿ ಕೊರೊನಾ ರೋಗಕ್ಕೆ ಮೃತಪಟ್ಟ ವೈದ್ಯರ ಸಂಖ್ಯೆ 9ಕ್ಕೇರಿದೆ. ಡಾ. ಪೆಂಗ್ ವಿನ್ಹುವಾ ಎಂಬ ವೈದ್ಯ ವುಹಾನ್‌ನ ಆಸ್ಪತ್ರೆಯೊಂದರಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು.

    ಜ.25ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು

   ಜ.25ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು

   ಜನವರಿ 25ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಗುರುವಾರ ರಾತ್ರಿ ನಿಧನರಾಗಿದ್ದಾರೆ.

    ಚಿಕಿತ್ಸೆಗೆ ರೋಬೋಟ್ ಬಳಕೆ

   ಚಿಕಿತ್ಸೆಗೆ ರೋಬೋಟ್ ಬಳಕೆ

   ಕೊರೊನಾ ಪೀಡಿತರನ್ನು ಗುಣಪಡಿಸುವ ಕಾರ್ಯದಲ್ಲಿ ನಿರತರಾಗಿದ್ದ ವೈದ್ಯರು , ವೈದ್ಯಕೀಯ ಸಿಬ್ಬಂದಿಯನ್ನೇ ಸೋಂಕು ಬಲಿಪಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, ವಿವಿಧ ಕೆಲಸಗಳಿಗೆ ರೋಬೋಟ್ ನ್ನು ಬಳಸಿಕೊಳ್ಳುತ್ತಿದೆ.

    ರೋಬೋಟ್‌ಗಳಿಂದ ಔಷಧ ಸಿಂಪಡನೆ

   ರೋಬೋಟ್‌ಗಳಿಂದ ಔಷಧ ಸಿಂಪಡನೆ

   ಚೀನಾದ ಜನನಿಬಿಡ ಪ್ರದೇಶವೊಂದರಲ್ಲಿ ರೋಬೋಟ್‌ಗಳು ಜನರು ಮತ್ತು ಬೀದಿಗಳಲ್ಲಿ ಕೊರೊನಾ ನಿಗ್ರಹ ಔಷಧ ಸಿಂಪಡಿಸುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ, ಆಸ್ಪತ್ರೆಗಳ ವಾರ್ಡ್‌ಗಳಲ್ಲಿ ಕೊರೊನಾ ಪೀಡಿತರಿಗೆ ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳ ಹಂಚಿಕೆಗೂ ರೋಬೋಟ್‌ಗಳನ್ನು ಗೊತ್ತು ಮಾಡಲಾಗಿದೆ.

   English summary
   A doctor who postponing his marriage And was treating Corona patients is Died.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X