ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಮೂಲ ವುಹಾನ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ

|
Google Oneindia Kannada News

ವುಹಾನ್, ಜನವರಿ 1: ಕೊರೊನಾ ವೈರಸ್‌ಅನ್ನು ಜಗತ್ತಿಗೆ ಹರಡಿ ಲಾಕ್‌ಡೌನ್, ನಿಷೇಧಾಜ್ಞೆಗಳ ನಿಯಮಗಳಡಿ ವರ್ಷದ ಬದುಕಿನ ಜತೆಗೆ 2021ರ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮವನ್ನು ಕೂಡ ಕಸಿದುಕೊಂಡ ಚೀನಾದ ವುಹಾನ್ ನಗರದಲ್ಲಿ ಮಾತ್ರ ಹೊಸ ವರ್ಷಾಚರಣೆ ವಿಜೃಂಭಣೆಯಿಂದ ನಡೆದಿದೆ.

ಕೊರೊನಾ ವೈರಸ್‌ನ ಅಧಿಕೇಂದ್ರ ಎಂದೇ ಕರೆಯಲಾಗಿರುವ ವುಹಾನ್‌ನಲ್ಲಿ ಎಲ್ಲ ಪ್ರಮುಖ ಬೀದಿಗಳಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿ ಬೃಹತ್ ಜನಸಮೂಹ ನೆರೆದಿತ್ತು. ಕೊರೊನಾವೈರಸ್ ಸೋಂಕು ಮೊದಲು ಕಾಣಿಸಿಕೊಂಡ ವುಹಾನ್‌ನಲ್ಲಿ ಜನವರಿ ಅಂತ್ಯದಿಂದ ಏಪ್ರಿಲ್ ಆರಂಭದವರೆಗೂ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಅಲ್ಲಿ ಈಗ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದ್ದು, ಇಂತಹದ್ದೊಂದು ಮಾರಿ ಇಲ್ಲಿತ್ತು ಎಂಬ ನೆನಪೇ ಇಲ್ಲದಂತೆ ಸಾವಿರಾರು ಜನರು ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

ವುಹಾನ್ ಕೊರೊನಾ ಹರಡುವಿಕೆ ವರದಿ ಮಾಡಿದ್ದ ಪತ್ರಕರ್ತೆಗೆ 4 ವರ್ಷ ಜೈಲುವುಹಾನ್ ಕೊರೊನಾ ಹರಡುವಿಕೆ ವರದಿ ಮಾಡಿದ್ದ ಪತ್ರಕರ್ತೆಗೆ 4 ವರ್ಷ ಜೈಲು

ಚೀನಾದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ನಡೆಯುವ ಜನಪ್ರಿಯ ಸ್ಥಳಗಳಲ್ಲಿ ಒಂದಾದ ಓಲ್ಡ್ ಹಾಂಕೋವ್ ಕಸ್ಟಮ್ಸ್ ಕಟ್ಟಡದ ಮುಂಭಾಗ ವಾಡಿಕೆಯಂತೆ ಸೇರಿದ ನೂರಾರು ಮಂದಿ ರಾತ್ರಿ 12 ಗಂಟೆಯಾಗುತ್ತಿದ್ದಂತೆಯೇ 'ಹ್ಯಾಪಿ ನ್ಯೂ ಇಯರ್' ಎಂದು ಕೂಗಿ ಗಾಳಿಯಲ್ಲಿ ಬಲೂನ್‌ಗಳನ್ನು ಹಾರಿಸಿದರು. ಮುಂದೆ ಓದಿ.

ಕೊರೊನಾ ಸೋಂಕಿನ ಮೂಲ ವುಹಾನ್ ಮಾರುಕಟ್ಟೆ ಒಂದು ವರ್ಷದ ನಂತರ ಈಗ ಹೇಗಿದೆ?ಕೊರೊನಾ ಸೋಂಕಿನ ಮೂಲ ವುಹಾನ್ ಮಾರುಕಟ್ಟೆ ಒಂದು ವರ್ಷದ ನಂತರ ಈಗ ಹೇಗಿದೆ?

ನಿಯಂತ್ರಣ ನಿಯಮಗಳ ಪಾಲನೆ ಇಲ್ಲ

ನಿಯಂತ್ರಣ ನಿಯಮಗಳ ಪಾಲನೆ ಇಲ್ಲ

ಜನರನ್ನು ನಿಯಂತ್ರಿಸಲು ವುಹಾನ್ ಬೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೆ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೆಯೂ ಅನೇಕರು ಬೀದಿಗಿಳಿದಿದ್ದರು. ಸಂಭ್ರಮಾಚರಣೆಯಲ್ಲಿ ಮುಂದುವರಿಯಬೇಕಿದ್ದರೆ ಮಾಸ್ಕ್ ಧರಿಸಿ, ಇಲ್ಲದಿದ್ದರೆ ಮನೆಗೆ ಹೋಗಿ ಎಂದು ಪೊಲೀಸರು ಗದರಿದರು.

ಕೆಲವು ನಗರಗಳಲ್ಲಿ ಸೋಂಕು ಪತ್ತೆ

ಕೆಲವು ತಿಂಗಳಿನಿಂದ ವುಹಾನ್ ವೈರಸ್ ಮುಕ್ತವಾಗಿದೆ. ಸ್ಥಳೀಯ ಜನಸಂಖ್ಯೆಗೆ ಕೆಲವು ದಿನಗಳಿಂದ ನಿರ್ದಿಷ್ಟ ಸಮೂಹದ ಜನರಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ. ರಾಜಧಾನಿ ಬೀಜಿಂಗ್ ಸೇರಿದಂತೆ ವಿವಿಧ ನಗರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಕರಣಗಳ ಏರಿಕೆ ಕಂಡುಬಂದಿದೆ. ಹೀಗಾಗಿ ವೈರಸ್ ಭೀತಿ ಸಂಪೂರ್ಣವಾಗಿ ಮಾಯವಾಗಿಲ್ಲ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ದೇಶಗಳಲ್ಲಿ ಸಂಭ್ರಮವಿಲ್ಲ

ಹೆಚ್ಚಿನ ದೇಶಗಳಲ್ಲಿ ಸಂಭ್ರಮವಿಲ್ಲ

2020ಅನ್ನು ಚೀನಾ ಹೊರತಾಗಿ ಬಹುತೇಕ ದೇಶಗಳು ಸಂಭ್ರಮದಿಂದ ಸ್ವಾಗತಿಸಿದ್ದವು. ಆದರೆ 2021ರ ಆಗಮನದ ವೇಳೆ ಬಹುತೇಕ ದೇಶಗಳು ಸ್ತಬ್ಧವಾಗಿದ್ದವು. ಸೋಂಕು ಅಷ್ಟಾಗಿ ಕಾಣಿಸಿಕೊಳ್ಳದ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಸೇರಿದಂತೆ ಕೆಲವೇ ದೇಶಗಳಲ್ಲಿ ಎಂದಿನಂತೆ ಈ ಬಾರಿ ಕೂಡ ಸಂಭ್ರಮಾಚರಣೆಗಳು ನಡೆದವು. ಉಳಿದಂತೆ ಹೊಸ ವರ್ಷದ ಸಂಭ್ರಮ ಕಳೆಗಟ್ಟುತ್ತಿದ್ದ ಪ್ರದೇಶಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಕೊರೊನಾ ವೈರಸ್ ಅನ್ನು ಜಗತ್ತಿಗೆ ನೀಡಿದ ಚೀನಾದಲ್ಲಿ ಹೊಸ ವರ್ಷದ ಆಚರಣೆ ಜೋರಾಗಿ ನಡೆದಿರುವುದು ವಿಪರ್ಯಾಸ.

WHO ಅಧ್ಯಯನ ತಂಡ

WHO ಅಧ್ಯಯನ ತಂಡ

ವೈರಸ್ ಮೊದಲು ಎಲ್ಲಿ ಹುಟ್ಟಿದ್ದು ಎಂಬ ಅಧ್ಯಯನ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ತಂಡವು ಈ ತಿಂಗಳಲ್ಲಿ ಚೀನಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಅತ್ಯಂತ ಕಠಿಣ ಲಾಕ್‌ಡೌನ್ ಜಾರಿಗೊಳಿಸಿದ ಬಳಿಕ ವುಹಾನ್‌ನಲ್ಲಿ ಮೇ 10ರ ಬಳಿಕ ಲಾಕ್‌ಡೌನ್ ತೆರವುಗೊಂಡಿದ್ದು ಏಳು ತಿಂಗಳಲ್ಲಿ ಸ್ಥಳೀಯವಾಗಿ ಹರಡಿದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

English summary
Large crowds took to streets on Friday in the Chinese city of Wuhan to celebrate new year after a year becoming epicenter of Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X