ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರವೇ ದಿನನಿತ್ಯ 'ಇನ್ಸುಲಿನ್' ಇಂಜೆಕ್ಷನ್ ಗೆ ಗುಡ್ ಬೈ

ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಮಧುಮೇಹಿಗಳಿಗಾಗಿ ಹೊಸ ಚುಚ್ಚುಮದ್ದು ಆವಿಷ್ಕಾರ. ಇದರಿಂದ ನಿತ್ಯ ಇನ್ಸುಲಿನ್ ತೆಗೆದುಕೊಳ್ಳುವ ಹಳೇ ಪದ್ಧತಿಗೆ ವಿದಾಯ ಹೇಳುವ ಸಾಧ್ಯತೆ.

|
Google Oneindia Kannada News

ವಾಷಿಂಗ್ಟನ್, ಜೂನ್ 6: ದಿನನಿತ್ಯವೂ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿಸಿಕೊಳ್ಳಬೇಕಾದ ಮಧುಮೇಹಿಗಳಿಗೊಂದು 'ಸಿಹಿ' ಸುದ್ದಿ ಬಂದಿದೆ. ಮಧುಮೇಹಿಗಳು ತಿಂಗಳಿಗೊಮ್ಮೆ ಮಾತ್ರ ವಿಶೇಷ ಚಿಕಿತ್ಸೆಗೆ ಒಳಗಾಗುವಂಥ ಹೊಸತೊಂದು ಔಷಧಿಯನ್ನು ಅಮೆರಿಕದ ವಿಜ್ಞಾನಿಗಳು ಮಾಡಿದ್ದು, ಇದರಿಂದ ದಿನನಿತ್ಯ ಇನ್ಸುಲಿನ್ ಔಷಧಿಗಳನ್ನು ತೆಗೆದುಕೊಳ್ಳುವ ಪದ್ಧತಿಗೆ ಪೂರ್ಣ ವಿರಾಮ ಬೀಳಲಿದೆ.

ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ವರ್ಷಗಳಿಂದ ಪ್ರಯೋಗ ನಡೆಸುತ್ತಿದ್ದ ವಿಜ್ಞಾನಿಗಳ ತಂಡವೊಂದು ಈ ಹೊಸ ಬಗೆಯ ಚಿಕಿತ್ಸೆಯನ್ನು ಕಂಡುಹಿಡಿದಿರುವುದಾಗಿ ಘೋಷಿಸಿದೆ. ಈ ತಂಡದಲ್ಲಿಅಶುತೋಷ್ ಚಿಲ್ಕೋಟಿ ಎಂಬ ಓರ್ವ ಭಾರತೀಯ ವೈದ್ಯರೂ ಇರುವುದೊಂದು ವಿಶೇಷ ಎಂದು ವಿಶ್ವವಿದ್ಯಾಲಯ ಹೇಳಿದೆ. ಸದ್ಯಕ್ಕೆ ಇದನ್ನು ಗ್ಲುಕಾಗಾನ್ ಲೈಕ್ ಪೆಪ್ಡೈಡ್ -1 (GLP 1) ಎಂದು ಹೆಸರಿಸಲಾಗಿದೆ.[ಯೋಗದಿಂದ ಮಧುಮೇಹ ರೋಗವನ್ನು ಸೋಲಿಸೋಣ]

ಈ ಹೊಸ ಔಷಧಿಯನ್ನು ಇಂಜೆಕ್ಷನ್ ಮೂಲಕ ಮಧುಮೇಹಿಯ ದೇಹದೊಳಕ್ಕೆ ಸೇರಿಸಲಾಗುತ್ತದೆ. ಈ ಔಷಧಿಯು ತಿಂಗಳವರೆಗೆ ದೇಹದಲ್ಲಿದ್ದುಕೊಂಡು ಮಧುಮೇಹಿಯ ಆರೋಗ್ಯವನ್ನು ಕಾಪಾಡುತ್ತದೆ ಎಂದು ವೈದ್ಯರ ತಂಡ ಹೇಳಿದೆ. ಹಾಗಾದರೆ, ಈ ಔಷಧಿಯ ವಿಶೇಷವೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿ ಇಲ್ಲಿದೆ.

(ಚಿತ್ರಗಳು: ಸಾಂದರ್ಭಿಕ)

ನಿರ್ದಿಷ್ಟ ಮೊತ್ತದ ಇನ್ಸುಲಿನ್

ನಿರ್ದಿಷ್ಟ ಮೊತ್ತದ ಇನ್ಸುಲಿನ್

ವೈದ್ಯರ ಪ್ರಕಾರ, ಇದೊಂದು ನಿಯಂತ್ರಿತ ಚಿಕಿತ್ಸಾ ವಿಧಾನ. ಇದನ್ನು ನಿಯಂತ್ರಿತ ಬಿಡುಗಡೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಅಂದರೆ, ಮನುಷ್ಯನ ದೇಹ ಸೇರಿದ ನಂತರ, ಈ ಔಷಧಿಯು ಅಗತ್ಯ ಬಿದ್ದಾಗ ಮಾತ್ರ ಇನ್ಸುಲಿನ್ ಆಗಿ ಪರಿವರ್ತನೆಯಾಗಿ ರಕ್ತದೊಳಕ್ಕೆ ಸೇರುತ್ತದೆ. ಹಾಗಾಗಿ, ದಿನವಿಡೀ ಎಷ್ಟು ಬೇಕೋ ಅಷ್ಟೇ ಇನ್ಸುಲಿನ್ ಬಿಡುಗಡೆಯಾಗುವುದರಿಂದ ಮಧುಮೇಹಿಗೆ ಪ್ರತಿನಿತ್ಯ ಇನ್ಸುಲಿನ್ ಸಿಗುತ್ತಾ ಹೋಗುತ್ತದೆ.

ನಿತ್ಯ ಇಂಜೆಕ್ಷನ್ ಗೆ ಗುಡ್ ಬೈ

ನಿತ್ಯ ಇಂಜೆಕ್ಷನ್ ಗೆ ಗುಡ್ ಬೈ

ದಿನವೊಂದಕ್ಕೆ ಇಷ್ಟೇ ಪ್ರಮಾಣದಲ್ಲಿ ಇಂಥದ್ದೇ ಘಳಿಗೆಯಲ್ಲಿ ಔಷಧಿಯು ಇನ್ಸುಲಿನ್ ಆಗಿ ಪರಿವರ್ತಿತವಾಗಬೇಕೆಂಬುದನ್ನು ಮೊದಲ ನಿರ್ಧರಿಸಿ ಇದನ್ನು ತಯಾರಿಸಲಾಗಿರುತ್ತಾದ್ದರಿಂದ ಮದು ಮೇಹಿಗಳು ದಿನಾಲು ಇನ್ಸುಲಿನ್ ತೆಗೆದುಕೊಳ್ಳುವ ಅವಶ್ಯಕತೆ ಬೀಳುವುದಿಲ್ಲ.[ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]

ಜೆಲ್ ಆಗಿ ಪರಿವರ್ತನೆ

ಜೆಲ್ ಆಗಿ ಪರಿವರ್ತನೆ

ಒಮ್ಮೆ ಇದನ್ನು ಮಾನವನ ದೇಹದಲ್ಲಿ ಸೇರಿಸಿದರೆ, ಇದು ದೇಹದ ಉಷ್ಣಾಂಶದೊಂದಿಗೆ ಹೊಂದಿಕೊಳ್ಳುತ್ತದೆ. ಹಾಗೆ ಹೊಂದಿಕೊಂಡ ನಂತರ ಇದು ಜೆಲ್ ಮಾದರಿಗೆ ಬದಲಾಗಿ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಅಗತ್ಯ ಬಿದ್ದಾಗ, ಎಷ್ಟು ಬೇಕೋ ಅಷ್ಟು ಮಾತ್ರ ಇದು ಇನ್ಸುಲಿನ್ ಆಗಿ ಪರಿವರ್ತನೆಗೊಳ್ಳುತ್ತದೆ.

ಒಂದೇ ಬಾರಿ ಇಂಜೆಕ್ಷನ್ ಸಾಕು

ಒಂದೇ ಬಾರಿ ಇಂಜೆಕ್ಷನ್ ಸಾಕು

ಸಕ್ಕರೆ ಕಾಯಿಲೆಯುಳ್ಳ ವ್ಯಕ್ತಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಗುಂಪುಗಳನ್ನು, type 1 diabetes, type 2 diabetes ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. type 1 diabetes ಇರುವವರು ಈ ಹೊಸ ಔಷಧಿಯನ್ನು ತಿಂಗಳಿಗೆ ಒಂದು ಬಾರಿ ತೆಗೆದುಕೊಂಡರೆ ಸಾಕು. ಇನ್ನು, type 2 diabetes ವರ್ಗದವರು ತಿಂಗಳಿಗೆ ಎರಡು ಬಾರಿ ಈ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ.[ಪ್ರಮೇಹ ಮೋಕ್ಷಂ ಸೇವಿಸಿ ಮಧುಮೇಹದಿಂದ ಮುಕ್ತಿ]

ಹೆಚ್ಚು ದಿನ ದೇಹದಲ್ಲಿ ನಿಲ್ಲದು

ಹೆಚ್ಚು ದಿನ ದೇಹದಲ್ಲಿ ನಿಲ್ಲದು

ರಾಸಾಯನ ಶಾಸ್ತ್ರದ ಪ್ರಕಾರ ಹೇಳಬೇಕೆಂದರೆ, ಈ ಹೊಸ ಔಷಧಿಯು ಎಲಾಸ್ಟಿನ್ ಮಾದರಿಯ ಪಾಲಿಪೆಪ್ಟೈಡ್ (polypeptide-ELP) ಮಾದರಿಯ ರಾಸಾಯನವಾಗಿದೆ. ಆದರೆ, ಇದು ದೇಹದಲ್ಲಿ ಸ್ಥಿರವಾಗಿ ಉಳಿಯುವುದಿಲ್ಲ. ನಿಗದಿತ ಅವಧಿಯ ನಂತರ ಇದು ದೇಹದಿಂದ ಬೆವರು, ಮೂತ್ರ ಮುಂತಾದ ಮಾರ್ಗಗಳಲ್ಲಿ ಹೊರಹೋಗುತ್ತದೆ.

English summary
Scientists, including one of Indian origin, have developed a technology that may provide weeks of glucose control for diabetes with a single injection, which would be a dramatic improvement over current therapies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X