ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ತೀವ್ರತೆ ಕಡಿಮೆ ಇದ್ದರೂ, ಅಪಾಯಕಾರಿ ಹೇಗೆ?

|
Google Oneindia Kannada News

ಓಮಿಕ್ರಾನ್ ಲಕ್ಷಣಗಳು ಸೌಮ್ಯವಾಗಿದ್ದರೂ ಕೂಡ ದೇಹದ ಅಂಗಾಂಗಗಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಎಂದು ತಿಳಿದುಬಂದಿದೆ.

ಓಮಿಕ್ರಾನ್ ಪ್ರಪಂಚದಾದ್ಯಂತ ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೂಪಾಂತರಿ ಸೋಂಕು ಎಂದು ನಿರ್ಲಕ್ಷಿಸಲಾಗುತ್ತಿದೆ. ಆದರೆ ಈ ರೀತಿಯ ನಿರ್ಲಕ್ಷ್ಯದ ಬಗ್ಗೆ ಜರ್ಮನ್ ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರತಿ 100 ಡೆಲ್ಟಾ ಪ್ರಕರಣಗಳಿಗೆ, 400-500 ಓಮಿಕ್ರಾನ್ ಪ್ರಕರಣಗಳಿರಬಹುದುಪ್ರತಿ 100 ಡೆಲ್ಟಾ ಪ್ರಕರಣಗಳಿಗೆ, 400-500 ಓಮಿಕ್ರಾನ್ ಪ್ರಕರಣಗಳಿರಬಹುದು

ದೇಶಾದ್ಯಂತ ಬೆಚ್ಚುಬೀಳಿಸಿರುವ ಕೊರೊನಾ ರೂಪಾಂತರಿ ಓಮಿಕ್ರಾನ್ ಸೌಮ್ಯ ಸೋಂಕು ಎಂದು ಪರಿಗಣಿಸಲ್ಪಟ್ಟರೂ ಕೂಡ ಇದು ದೇಹದ ಕೆಲವು ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಹೊಸ ಅಧ್ಯಯನದ ಮೂಲಕ ತಿಳಿದುಬಂದಿದೆ.

Omicron Warning Issued As Organ Complications Linked To Covid Variant: Not Mild

ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಕೊರೊನಾ ವೈರಸ್ ಸೋಂಕು ರೋಗಿಗಳು ಅದರ ರೋಗಲಕ್ಷಣಗಳನ್ನು ತೋರಿಸದಿದ್ದರೂ ಸಹ ಅದರ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಿದೆ.

ಓಮಿಕ್ರಾನ್ ಸೋಂಕಿಗೆ ಒಳಗಾಗದ ಜನರಿಗೆ ಹೋಲಿಸಿದರೆ, ಓಮಿಕ್ರಾನ್ ಸೋಂಕಿತರಿಗೆ ಮಧ್ಯಮ ಅವಧಿಯ ಅಂಗ ಹಾನಿ ಕಂಡುಬಂದಿದೆ ಎಂದು ಅದರ ಫಲಿತಾಂಶವು ತೋರಿಸಿದೆ.

ಕೊರೊನಾ ಹೊಸ ರೂಪಾಂತರಿ ಸೋಂಕಿತರಿಗೆ "ಶ್ವಾಸಕೋಶದ ಕಾರ್ಯ ಪರೀಕ್ಷೆಗಳು ಶ್ವಾಸಕೋಶದ ಕಾರ್ಯನಿರ್ವಹಣೆ ಪ್ರಮಾಣದಲ್ಲಿ ಮೂರು ಪ್ರತಿಶತದಷ್ಟು ಕಡಿತವನ್ನು ತೋರಿಸಿದೆ"ಎಂದು ಅಧ್ಯಯನದ ಸಂಶೋಧಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ, ಹೃದಯದ ಶಕ್ತಿಯಲ್ಲಿ ಸರಾಸರಿ 1 ರಿಂದ 2 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ. ರಕ್ತದಲ್ಲಿನ ಪ್ರೋಟೀನ್ ಮಟ್ಟವು 41 ಪ್ರತಿಶತದಷ್ಟು ಹೆಚ್ಚಾಗಿದೆ, ಇದು ಹೃದಯದ ಮೇಲಿನ ಒತ್ತಡದ ಬಗ್ಗೆ ಹೇಳುತ್ತದೆ.

ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ರೋಗಲಕ್ಷಣಗಳನ್ನು ಸೌಮ್ಯ/ ಕಡಿಮೆ ತೀವ್ರತೆಯ ಸೋಂಕು ಎಂದು ಪರಿಗಣಿಸಲಾಗುತ್ತಿದೆ. ಆದರೆ ಅಧ್ಯಯನವೊಂದರ ಪ್ರಕಾರ, ಓಮಿಕ್ರಾನ್ ಮೇಲ್ನೋಟಕ್ಕೆ ಕಡಿಮೆ ತೀವ್ರತೆ ಹೊಂದಿದ್ದರೂ ದೇಹದ ಅಂಗಗಳನ್ನು ಹಾನಿಗೊಳಿಸುತ್ತದೆ.

ಇದಕ್ಕಾಗಿ, SARS-CoV-2 ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿರುವ 45 ರಿಂದ 74 ವರ್ಷ ವಯಸ್ಸಿನ ಒಟ್ಟು 443 ಜನರನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು ಓಮಿಕ್ರಾನ್ ಸೋಂಕು ತಗುಲಿಸಿಕೊಂಡವರು ಹಾಗೂ ಓಮಿಕ್ರಾನ್ ಸೋಂಕು ರಹಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಎಲ್ಲಾ ಕಡೆ ಓಮಿಕ್ರಾನ್ ಹೊಸ ರೂಪಾಂತರಿಯ ದುಗುಡ ಹೆಚ್ಚಾಗತೊಡಗಿದೆ. ಡೆಲ್ಟಾ ರೂಪಾಂತರಿಯಿಂದ ಭೀತಿಗೊಳಗಾಗಿದ್ದ ವಿಶ್ವದ ರಾಷ್ಟ್ರಗಳು ಓಮಿಕ್ರಾನ್ ಹೊಸ ರೂಪಾಂತರಿಯಿಂದಾಗಿ ಮತ್ತೆ ಭೀತಿ ಆವರಿಸತೊಡಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಈ ಹೊಸ ರೂಪಾಂತರವು ಮತ್ತೊಮ್ಮೆ ಪ್ರಪಂಚದಾದ್ಯಂತ ಆರೋಗ್ಯ ತಜ್ಞರು ಮತ್ತು ವಿಜ್ಞಾನಿಗಳ ಕಳವಳವನ್ನು ಹೆಚ್ಚಿಸಿದೆ. ಈ ರೂಪಾಂತರವು ಕೊರೊನಾ ವೈರಸ್‌ನ ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ರೂಪಾಂತರವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಓಮಿಕ್ರಾನ್ ರೂಪಾಂತರಿ ಪತ್ತೆಯಾದ ಎರಡೇ ದಿನದಲ್ಲಿ ಡಬ್ಲ್ಯುಎಚ್ಒ, ಇದೊಂದು ಕಳವಳಕಾರಿ ರೂಪಾಂತರಿ ಎಂದು ಘೋಷಣೆ ಮಾಡಿತ್ತು.

24 ನವೆಂಬರ್ 2021 ರಂದು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ, ಓಮಿಕ್ರಾನ್‌ನ ಹೊಸ ರೂಪಾಂತರದ ಮೊದಲ ಪ್ರಕರಣ ಪತ್ತೆಯಾಯಿತು. ದಕ್ಷಿಣ ಆಫ್ರಿಕಾದ ಹೊರತಾಗಿ, ಈ ರೂಪಾಂತರವನ್ನು ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಇಟಲಿ, ಬೆಲ್ಜಿಯಂ, ಬೋಟ್ಸ್‌ವಾನಾ, ಹಾಂಗ್ ಕಾಂಗ್ ಮತ್ತು ಇಸ್ರೇಲ್‌ನಲ್ಲಿಯೂ ಗುರುತಿಸಲಾಗಿದೆ. ಈ ರೂಪಾಂತರವು ಕಾಣಿಸಿಕೊಂಡ ನಂತರ, ಪ್ರಪಂಚದ ಅನೇಕ ದೇಶಗಳು ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಕರನ್ನು ನಿಷೇಧಿಸಿವೆ.

ಓಮಿಕ್ರಾನ್‌ನ ಗುಣಲಕ್ಷಣಗಳು ಏನು? ಇದು ಎಷ್ಟು ಅಪಾಯಕಾರಿ?
-ಓಮಿಕ್ರಾನ್ ಸೋಂಕಿತ ಅನೇಕ ಜನರು ಲಕ್ಷಣ ರಹಿತವಾಗಿದ್ದಾರೆ.
-ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
-ಒಂದು ಅಥವಾ ಎರಡು ದಿನಗಳವರೆಗೆ ಸುಸ್ತು ಇರಲಿದೆ.
-ಆದಾಗ್ಯೂ ಓಮಿಕ್ರಾನ್ ರೂಪಾಂತರ ಯಾವುದೇ ಹೊಸ ವೈಶಿಷ್ಟ್ಯಗಳು ಇಲ್ಲಿಯವರೆಗೆ ಕಂಡುಬಂದಿಲ್ಲ.
-ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಳ್ಳಲಿದೆ.
-ಓಮಿಕ್ರಾನ್ 3ನೇ ಅಲೆ ಅನ್ನೋದು ಹಲವು ತಜ್ಞರ ಅಭಿಪ್ರಾಯ.
-ಹೊಸ ರೂಪಾಂತರಿ ಡೆಲ್ಟಾಕ್ಕಿಂತ ಹಲವಾರು ಪಟ್ಟು ಹೆಚ್ಚು ಮಾರಕ.
-ಓಮಿಕ್ರಾನ್ ಹೊಸ ರೂಪಾಂತರಿ ಡೆಲ್ಟಾಕ್ಕಿಂತ 7 ಪಟ್ಟು ವೇಗವಾಗಿ ಹರಡುತ್ತಿದೆ.
- ಹೊಸ ರೂಪಾಂತರಿಯನ್ನು ಗುರುತಿಸುವುದಕ್ಕೂ ಮುನ್ನ 32 ಬಾರಿ ರೂಪಾಂತರಗೊಂಡಿದೆ.
-ಸದ್ಯಕ್ಕೆ ಭಾರತದಲ್ಲಿ ಈ ರೂಪಾಂತರದ ಯಾವುದೇ ಪ್ರಕರಣ ದೃಢಪಟ್ಟಿಲ್ಲ.

English summary
An Omicron warning has been issued by researchers who have linked the new Covid variant to organ complications. It comes from experts at the University Clinic Hamburg-Eppendorf in Germany.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X