ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾಗಿಂತ ಓಮಿಕ್ರಾನ್ ಅಪಾಯಕಾರಿಯೇ: WHO ಹೇಳುವುದೇನು?

|
Google Oneindia Kannada News

ನ್ಯೂಯಾರ್ಕ್, ನವೆಂಬರ್ 29: ಕೊರೊನಾವೈರಸ್ ಹೊಸ ರೂಪಾಂತರ ತಳಿ ಬಿ.1.1.529 ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್ ಎಂದು ಹೆಸರಿಸಿದೆ. ಓಮಿಕ್ರಾನ್ ಒಂದು ರೂಪಾಂತರ ಪ್ರಭೇದ ಆಗಿದೆ ಎಂದಿರುವ WHO, ಜಗತ್ತಿನಾದ್ಯಂತ ಸೋಂಕು ಹರಡುವ ಅಪಾಯವನ್ನು ಸೂಚಿಸಿದೆ.

ಜಾಗತಿಕ ಮಟ್ಟದಲ್ಲಿ ಓಮಿಕ್ರಾನ್ ರೂಪಾಂತರ ತಳಿಯ ಬಗ್ಗೆ ನಡೆಸಿದ ವೈದ್ಯಕೀಯ ಸಂಶೋಧನೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೊವಿಡ್-19 ಸೋಂಕಿನಿಂದ ಜಾಗೃತರಾಗಿರುವಂತೆ ಮುಖ್ಯ ಅಂಶಗಳನ್ನು ಭಾನುವಾರ ಬಿಡುಗಡೆ ಮಾಡಿದೆ.

ಓಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಓಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿ

ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಜಗತ್ತನ್ನು ತತ್ತರಿಸುವಂತೆ ಮಾಡಿರುವ ರೂಪಾಂತರ ತಳಿಗಳಲ್ಲೇ ಡೆಲ್ಟಾ ಅತ್ಯಂತ ಅಪಾಯಕಾರಿಯಾಗಿತ್ತು. ಆದರೆ ಈಗ ಪತ್ತೆಯಾಗಿರುವ ಓಮಿಕ್ರಾನ್ ರೂಪಾಂತರವು ಡೆಲ್ಟಾಗಿಂತಲೂ ಅಪಾಯಕಾರಿಯೇ ಎಂಬ ಪ್ರಶ್ನೆಗೆ WHO ಉತ್ತರಿಸಿದೆ. ಓಮಿಕ್ರಾನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಪ್ರಮುಖ ಅಂಶಗಳನ್ನು ಮುಂದೆ ಓದಿ.

Omicron Variant is more Dangerous Than Delta?; WHO Alert.

ಡೆಲ್ಟಾಗಿಂತಲೂ ಓಮಿಕ್ರಾನ್ ಅಪಾಯಕಾರಿ: WHO

* ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಾಥಮಿಕ ಪುರಾವೆಗಳಲ್ಲಿ 'ಓಮಿಕ್ರಾನ್' ರೂಪಾಂತರವು ಮರುಸೋಂಕಿನ ಅಪಾಯವನ್ನು ಹೆಚ್ಚಿಸುತ್ತಿರುವುದು ಗೊತ್ತಾಗಿದೆ. ಈ ಹಿಂದೆ ಕೊವಿಡ್-19 ಸೋಂಕಿನಿಂದ ಬಳಲಿದವರು ಮತ್ತೊಮ್ಮೆ ಓಮಿಕ್ರಾನ್ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

* ಡೆಲ್ಟಾ ಮತ್ತು ಇತರ ರೂಪಾಂತರಗಳಿಗೆ ಹೋಲಿಸಿದರೆ 'ಓಮಿಕ್ರಾನ್' ಹೆಚ್ಚು ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ಸುಲಭವಾಗಿ ಹರಡುತ್ತದೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯಕ್ಕೆ, RT-PCR ಪರೀಕ್ಷೆಗಳಿಂದ ರೂಪಾಂತರ ತಳಿಯನ್ನು ಕಂಡು ಹಿಡಿಯಬಹುದು.

* ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಂಡವರ ಮೇಲೆ ಈ ಓಮಿಕ್ರಾನ್ ರೂಪಾಂತರ ವೈರಸ್ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಂಶೋಧನೆ ನಡೆಸುತ್ತಿದ್ದು, ಈ ಕುರಿತು ಕೆಲಸ ಮಾಡಲಾಗುತ್ತಿದೆ.

* 'ಓಮಿಕ್ರಾನ್' ಸೋಂಕು ಹೆಚ್ಚು ತೀವ್ರವಾದ ರೋಗವನ್ನು ಉಂಟು ಮಾಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

* ಓಮಿಕ್ರಾನ್‌ಗೆ ಸಂಬಂಧಿಸಿದ ರೋಗಲಕ್ಷಣಗಳು ಇತರ ರೂಪಾಂತರಗಳಿಗಿಂತ ಭಿನ್ನವಾಗಿವೆ ಎಂದು ಸೂಚಿಸಲು ಪ್ರಸ್ತುತ ಯಾವುದೇ ಮಾಹಿತಿಯಿಲ್ಲ.

* ಪ್ರಾಥಮಿಕ ಮಾಹಿತಿ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ಸೋಂಕು ತಗುಲಿದವರಲ್ಲಿ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೆ ಹೀಗೆ ಆಸ್ಪತ್ರೆ ಸೇರುವುದಕ್ಕೆ ಓಮಿಕ್ರಾನ್ ಹೊಸ ರೂಪಾಂತರ ವೈರಸ್ ಹೆಚ್ಚು ಕಾರಣವಾಗಿದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಏಕೆಂದರೆ ತೀವ್ರ ಅನಾರೋಗ್ಯಕ್ಕೆ ಕೊವಿಡ್-19 ಸೋಂಕು ಕಾರಣವಾಗುತ್ತಿದ್ದು, ಇದರಲ್ಲಿ ಎಲ್ಲ ರೂಪಾಂತರದ ತಳಿಯಿಂದ ಅನಾರೋಗ್ಯಕ್ಕೆ ತುತ್ತಾದವರೂ ಸಹ ಸೇರಿದ್ದಾರೆ.

* ಕಿರಿಯ ವಯಸ್ಸಿನವರಲ್ಲಿ ಸೌಮ್ಯ ಪ್ರಮಾಣದ ಕೊವಿಡ್-19 ಲಕ್ಷಣಗಳು ಗೋಚರಿಸುತ್ತಿದ್ದು, ಓಮಿಕ್ರಾನ್ ರೂಪಾಂತರ ತಳಿಯ ತೀವ್ರತೆ ಮತ್ತು ರೋಗದ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಮತ್ತಷ್ಟು ಸಮಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.

ದಕ್ಷಿಣ ಆಫ್ರಿಕಾದ ವೈದ್ಯರು ಹೇಳುವುದೇನು?:

ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಈವರೆಗೂ ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ರೀತಿಯ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಬಹುದು," ಎಂದು ದಕ್ಷಿಣ ಆಫ್ರಿಕಾದಲ್ಲಿ ಹೊಸ ತಳಿಯ ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. "ಕಳೆದ ನವೆಂಬರ್ 18ರಂದು ತಮ್ಮ ಆಸ್ಪತ್ರೆಗೆ ಆಗಮಿಸಿದ ಏಳು ರೋಗಿಗಳಲ್ಲಿ ಡೆಲ್ಟಾ ರೂಪಾಂತರಕ್ಕಿಂತ ವಿಭಿನ್ನವಾದ ಲಕ್ಷಣಗಳು ಗೋಚರಿಸಿದವು. ಆದರೆ ಅದು ಅತ್ಯಂತ ಸೌಮ್ಯವಾಗಿದ್ದವು," ಎಂದು ಖಾಸಗಿ ವೈದ್ಯರು ಹಾಗೂ ಸೌತ್ ಆಫ್ರಿಕನ್ ಮೆಡಿಕಲ್ ಅಸೋಸಿಯೇಶನ್‌ನ ಅಧ್ಯಕ್ಷರು ಆಗಿರುವ ಡಾ. ಏಂಜೆಲಿಕ್ ಕೋಟ್ಜಿ ತಿಳಿಸಿದ್ದಾರೆ.

Recommended Video

Omicron Virus ಹರಡದಂತೆ ಮುನ್ನಚ್ಚರಿಕೆ ವಹಿಸಿದ ರಾಜ್ಯ ಸರ್ಕಾರ | Oneindia Kannada

English summary
'Omicron' Variant is more Dangerous Than Delta?; WHO Alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X